ಮತ್ತೊಂದು ವೀಕೆಂಡ್ ಬಂದಿದೆ. ಈ ವಾರ ಬಿಗ್ ಬಾಸ್ (Bigg Boss Kannada) ಮನೆಯಿಂದ ಹೊರ ಬರೋರು ಯಾರು? ಎನ್ನುವ ಚರ್ಚೆ ಕೂಡ ಮೂಡಿದೆ. ತುಕಾಲಿ ಸಂತು, ಮೈಕಲ್ ಅಥವಾ ಸಿರಿ ಅವರು ಈ ವಾರ ಮನೆಯಿಂದ ಹೊರ ಬರಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ನಡುವೆ ಕಿಚ್ಚನ (Sudeep) ಪಂಚಾಯಿತಿ ಶುರುವಾಗಿದ್ದು, ಕಿಚ್ಚ ವೇದಿಕೆಗೆ ಬರುತ್ತಿದ್ದಂತೆಯೇ ಸರ್ಪ್ರೈಸ್ ನೀಡಿದ್ದಾರೆ.
Advertisement
ಕಿಚ್ಚನ ಪಂಚಾಯಿತಿಗೆ ಕ್ಷಣಗಣನೆ ಶುರುವಾಗಿದೆ. ಕಳೆದ ವಾರ ಕಿಚ್ಚನ ಪಂಚಾಯಿತಿಯನ್ನು ಮಿಸ್ ಮಾಡಿಕೊಂಡಿದ್ದ ಕಂಟೆಸ್ಟೆಂಟ್ಗಳು ಕಿಚ್ಚನ ನೋಡಿ ಸಂಭ್ರಮಿಸಿದ್ದಾರೆ. ಆದರೆ, ಕಿಚ್ಚ ತರಿಸಿದ್ದ ಕಾಫಿ ಕಂಡು ಗಾಬರಿಗೊಂಡಿದ್ದಾರೆ. ಹೌದು, ತಮ್ಮ ಮಾತು ಶುರು ಮಾಡುವುದಕ್ಕಿಂತ ಮುಂಚೆ ಮನೆಮಂದಿಗೆಲ್ಲ ಕಾಫಿ ತರಿಸಿದ್ದಾರೆ ಸುದೀಪ್. ಈ ಕಾಫಿ ತರಿಸಿದ್ದು ಯಾಕೆ? ಎಂದು ಅವರೇ ಪ್ರಶ್ನೆ ಕೇಳಿದ್ದಾರೆ.
Advertisement
Advertisement
ಈ ವಾರ ಅಷ್ಟೂ ಸ್ಪರ್ಧಿಗಳು ಖುಷಿ ಖುಷಿಯಾಗಿದ್ದರು. ಕಾರಣ, ಅವರ ಕುಟುಂಬದ ಸದಸ್ಯರು ಬಿಗ್ ಬಾಸ್ ಮನೆಗೆ ಬಂದಿದ್ದರು. ಯಾವ ಸ್ಪರ್ಧಿ ಯಾರನ್ನೂ ಮಿಸ್ ಮಾಡ್ಕೊತಿದ್ದರೋ, ಅವರನ್ನೆಲ್ಲ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಿಸಲಾಗಿತ್ತು. ಹಾಗಾಗಿ ಪ್ರತಿಯೊಬ್ಬರೂ ತಮ್ಮಿಷ್ಟದ ವ್ಯಕ್ತಿಗಳ ಜೊತೆ ಕಾಲ ಕಳೆದರು. ಹರಟೆ ಹೊಡೆದರು. ಸಂಭ್ರಮಿಸಿದರು. ಮತ್ತೆ ಅವರನ್ನು ಮನೆಯಿಂದ ಕಳುಹಿಸಿಕೊಡುವಾಗ ಭಾವುಕರಾದರು. ಈ ಎಲ್ಲ ಸನ್ನಿವೇಶಗಳು ನಿನ್ನೆಗೆ ಮುಕ್ತಾವಾಗಿದ್ದವು. ಈಗ ವೀಕೆಂಡ್ ಬಂದಿರೋದ್ರಿಂದ ಮತ್ತೆ ತಮ್ಮತ್ತ ಸೆಳೆಯಲು ಸುದೀಪ್ ಮುಂದಾಗಿದ್ದಾರೆ.
Advertisement
ಮಾತು ಶುರುವಾಗುವ ಮೊದಲೇ ಎಲ್ಲರಿಗೂ ಕಳೆದ ದಿನಗಳನ್ನು ನೆನಪಿಸಿದ ಸುದೀಪ್, ಎಲ್ಲರಿಗೂ ಕಾಫಿ ಕೊಡಿಸುತ್ತಾರೆ. ಈ ಕಾಫಿ ಕೊಡಿಸಿರೋದಕ್ಕೆ ಕಾರಣ ಗೊತ್ತಾ ಎಂದು ಕೇಳ್ತಾರೆ. ರಿಚಾರ್ಜ್ ಮಾಡೋಕೆ ಎಂದು ವಿನಯ್ ಉತ್ತರ ಕೊಡ್ತಾರೆ. ಆದರೆ, ಅದು ಉತ್ತರ ಆಗದೇ ಇರೋ ಕಾರಣಕ್ಕಾಗಿ ತಾವು ಒಂದು ಸಿಪ್ ಟೀ ಕುಡಿಯೋ ಸುದೀಪ್, ಈಗ ನನ್ನ ಮಾತು ಆರಂಭಿಸಬೇಕು ಎಂದು ಗಂಭೀರವಾಗ್ತಾರೆ. ಈ ಗಂಭೀರತೆಯೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಳೆದ ಬಾರಿಯೂ ಮನೆಯಿಂದ ಇಬ್ಬರು ಹೊರ ನಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಈ ವಾರ ಅದು ನಡೆಯಬಹುದು ಎನ್ನಲಾಗುತ್ತಿದೆ. ಕಾರ್ಯಕ್ರಮ ಶುರುವಾಗುವ ಮೊದಲೇ, ಕಾಫಿ ಕುಡಿಸಿದ್ದನ್ನು ನೋಡಿದರೆ, ಈ ವಾರ ಎಲಿಮಿನೇಷನ್ (Elimination) ಮಾಡುವ ಮೂಲಕ ಕಾರ್ಯಕ್ರಮ ಶುರು ಮಾಡಲಿದ್ದಾರೆ ಎನ್ನುವ ಸೂಚನೆ ಸಿಕ್ಕಿದೆ. ಕಾರ್ಯಕ್ರಮ ಶುರುವಾಗುವ ಮೊದಲು ಮತ್ತು ಮುಗಿದು ನಂತರ ಎರಡು ಎಲಿಮಿನೇಷನ್ ಆಗಬಹುದಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಎಲ್ಲದಕ್ಕೂ ನಾಳೆವರೆಗೂ ಕಾಯಬೇಕಷ್ಟೆ.