ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ನೇಮಕದ ಗೊಂದಲ ಇನ್ನೂ ಮುಂದುವರಿಯಲಿದೆ. ಅಧ್ಯಕ್ಷರನ್ನಾಗಿ ಯಾರನ್ನು ಮಾಡಬೇಕು ಎಂಬುದು ಹೈಕಮಾಂಡ್‍ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಕೆಪಿಸಿಸಿ ಅಧ್ಯಕ್ಷರ ರೇಸ್‍ನಲ್ಲಿ ಡಿಕೆ ಶಿವಕುಮಾರ್, ಎಂಬಿ ಪಾಟೀಲ್ ಮತ್ತು ಎಸ್‍ಆರ್ ಪಾಟೀಲ್ ಹೆಸರು ಬಲವಾಗಿ ಕೇಳಿಬರುತ್ತಿದ್ದು ಮತ್ತೊಂದು ಕಡೆ ಹಾಲಿ ಅಧ್ಯಕ್ಷ ಪರಮೇಶ್ವರ್ ಹುದ್ದೆಯಲ್ಲಿ ಮುಂದುವರಿಯುವ ಇಂಗಿತವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಆಯ್ಕೆಗೆ ಸಚಿವರಲ್ಲೇ ಒಮ್ಮತ ಇಲ್ಲ ಎಂಬುದು ಹೈಕಮಾಂಡ್ ಗಮನಕ್ಕೆ ಬಂದಿದೆ. ಆದ್ರೆ ಡಿಕೆ ಶಿವಕುಮಾರ್ ಎಲ್ಲರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು ಕೆಪಿಸಿಸಿ ಅಧ್ಯಕ್ಷರ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
Advertisement
ಹೈಕಮಾಂಡ್ ಜೊತೆಯೂ ಸಿಎಂ ಮಾತುಕತೆ ನಡೆಸಿದ್ದು ಪರಮೇಶ್ವರ್ ಅವರನ್ನು ಮುಂದುವರಿಸಲು ನಿರಾಸಕ್ತಿ ತೋರಿದ್ದಾರೆ. ಶಿವಕುಮಾರ್ ಆಯ್ಕೆಗೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗೀ ಹೈಕಮಾಂಡ್ ಕೂಡಾ ಗೊಂದಲಕ್ಕೆ ಈಡಾಗಿದ್ದು ಯಾವುದೇ ನಿರ್ಣಯ ತೆಗೆದುಕೊಳ್ಳಲು ತಯಾರಿಲ್ವಂತೆ. ಆದ್ರೆ ಶೀಘ್ರದಲ್ಲಿ ಅಧ್ಯಕ್ಷರ ಆಯ್ಕೆ ಮಾಡುವ ಭರವಸೆಯನ್ನ ಹೈಕಮಾಂಡ್ ನೀಡಿದೆಯಂತೆ.
Advertisement
ಡಿಕೆ ಶಿವಕುಮಾರ್ ಇಲ್ಲವೇ ಎಂಬಿ ಪಾಟೀಲ್ ಅವರನ್ನ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದ್ದು ಒಂದು ವೇಳೆ ಪರಮೇಶ್ವರ್ ಮುಂದುವರಿಯುವುದಾದ್ರೆ ಎರಡು ತಿಂಗಳಲ್ಲಿ ಗೃಹ ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಸಂಘಟನೆಗೆ ಒತ್ತು ನೀಡುವಂತೆ ಹೈಕಮಾಂಡ್ ಕೆಲವು ಷರತ್ತುಗಳನ್ನು ಹಾಕಿ ಮಂದುವರಿಸುವ ಸಾಧ್ಯತೆಯೂ ಇದೆ.
Advertisement
ಇತ್ತ ವಿಧಾನ ಪರಿಷತ್‍ನ ಮೂರು ಸ್ಥಾನಕ್ಕೆ ಮೋಹನ್ ಕೊಂಡಜ್ಜಿ, ಸಿ.ಪಿ ಲಿಂಗಪ್ಪ ಹಾಗೂ ಕೆ.ಪಿ ನಂಜುಡಿ ಅವರ ಹೆಸರುಗಳು ಬಹುತೇಕ ಖಚಿತವಾಗಿದ್ದು ಅಂತಿಮ ಘೋಷಣೆ ಬಾಕಿ ಉಳಿದಿದೆ. ಸಿಎಂ ಬೆಂಗಳೂರಿಗೆ ಬಂದ ಬಳಿಕ ಘೋಷಣೆ ಮಾಡಲಿದ್ದಾರೆ.