ನವದೆಹಲಿ: ರಾವತ್ ಆಕಸ್ಮಿಕ ಮರಣದ ಕಾರಣ ಮುಂದಿನ ಸಿಡಿಎಸ್ ಯಾರಾಗ್ತಾರೆ ಎಂಬ ಚರ್ಚೆ ನಡೆದಿದೆ. ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರಾವಣೆ ಮುಂದಿನ ತ್ರಿದಳಾಧಿಪತಿ ಆಗುವ ಸಂಭವ ಇದೆ.
Advertisement
ನಿಯಮದ ಪ್ರಕಾರ ಭೂಸೇನೆ, ವಾಯುಸೇನೆ, ನೌಕಾ ಸೇನೆಯ ಮುಖ್ಯಸ್ಥರ ಪೈಕಿ ಒಬ್ಬರನ್ನು ಸೀನಿಯಾರಿಟಿ ಪ್ರಕಾರ ಈ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಇತ್ತೀಚಿಗೆ ತ್ರಿದಳಗಳ ಉನ್ನತ ಹುದ್ದೆಗೇರಿದವರಲ್ಲಿ ಹಿರಿಯರಾದ ಜನರಲ್ ನರಾವಣೆಗೆ ಸಿಡಿಎಸ್ ಆಗುವ ಅವಕಾಶ ಹೆಚ್ಚಿದೆ. ಸೇನಾ ಮುಖ್ಯಸ್ಥರಾಗಿ 2019ರ ಡಿಸೆಂಬರ್ 31ರಂದು ಬಿಪಿನ್ ರಾವತ್‍ರಿಂದ ನರಾವಣೆ ಅಧಿಕಾರ ಸ್ವೀಕರಿಸಿದ್ದರು. ವಾಯುಸೇನೆಯ ಏರ್ ಚೀಫ್ ಮಾರ್ಷಲ್ ಆಗಿ ಸೆಪ್ಟೆಂಬರ್ 30ರಂದು ವಿವೇಕ್ ರಾಮ್ ಚೌಧರಿ. ನೌಕಾಪಡೆಯ ಅಡ್ಮಿರಲ್ ಆಗಿ ಹರಿಕುಮಾರ್ ಕೇವಲ 8 ದಿನಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದರು. ಇದನ್ನೂ ಓದಿ: ಏನಿದು ಸಿಡಿಎಸ್ ಹುದ್ದೆ? ಈ ಹುದ್ದೆಯನ್ನು ಸೃಷ್ಟಿಸಿದ್ದು ಯಾಕೆ? – ಇಲ್ಲಿದೆ ಸಮಗ್ರ ವಿವರ
Advertisement
Advertisement
ನರಾವಣೆ ಸಿಡಿಎಸ್ ಆಗಿ ಪದೋನ್ನತಿ ಹೊಂದಿದಲ್ಲಿ, ನಾರ್ತರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನೆರಲ್ ವೈಕೆ ಜೋಷಿ ಅಥವಾ ಸೇನೆಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಚಂಡಿಪ್ರಸಾದ್ ಮೋಹಂತಿ ಸೇನಾ ಮುಖ್ಯಸ್ಥರಾಗುವ ಅವಕಾಶಗಳು ಹೆಚ್ಚಿವೆ. ಸದ್ಯ ವಾಯುಪಡೆ, ನೌಕಾಪಡೆ ಮುಖ್ಯಸ್ಥರಿಗಿಂತ ವೈಕೆ ಜೋಷಿ ಅವರೇ ಸೀನಿಯರ್ ಎಂಬುದು ವಿಶೇಷ. ಇದನ್ನೂ ಓದಿ: 2015ರಲ್ಲಿ ಹೆಲಿಕಾಪ್ಟರ್ ಪತನಗೊಂಡಾಗ ಪಾರಾಗಿದ್ದರು ಬಿಪಿನ್ ರಾವತ್
Advertisement
ಸಿಡಿಎಸ್ ವಿಶೇಷತೆ ಏನು?:
ಭೂ, ವಾಯು ಹಾಗೂ ನೌಕಾ ಪಡೆಗಳಿಗೆ ಪ್ರತ್ಯೇಕ ಮುಖ್ಯಸ್ಥರಿದ್ದಾರೆ. ರಾಷ್ಟ್ರಪತಿಗಳು ನೇತೃತ್ವ, ಆದೇಶದಂತೆ ಮೂರು ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಹಾಗೂ ಮೂರು ಪಡೆಗಳ ಮಧ್ಯೆ ಸಮನ್ವಯ ತರುವ ಕೆಲಸವನ್ನು ಸಿಡಿಎಸ್ ಮಾಡುತ್ತಿದ್ದರು. ಈ ಹುದ್ದೆಗೆ ಆಯ್ಕೆ ಆಗುವವರು 4 ಸ್ಟಾರ್ ಹೊಂದಿರುವ ಮಿಲಿಟರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.