ಕೆಜಿಎಫ್ 2 ಸಿನಿಮಾ ವಿಶ್ವದಾದ್ಯಂತ ಭಾರೀ ಯಶಸ್ಸು ಗಳಿಸುತ್ತಿದ್ದಂತೆಯೇ ಸಿನಿಮಾ ರಂಗದಲ್ಲಿ ಇದೀಗ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಅವುಗಳನ್ನು ಸ್ವತಃ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಿದೆ. ಹೀಗಾಗಿ ಕನ್ನಡ ಸಿನಿಮಾ ರಂಗವನ್ನು ರಾಷ್ಟ್ರ ಮಟ್ಟಕ್ಕೆ ತಗೆದುಕೊಂಡು ಹೋದ ಶ್ರೇಯಸ್ಸು ಕೆಜಿಎಫ್ 2 ಸಿನಿಮಾಗೆ ಸೇರುತ್ತದೆ ಎಂದೇ ಬಣ್ಣಿಸಲಾಗುತ್ತಿದೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ
Advertisement
ಈ ನಡುವೆ ಜಗ್ಗೇಶ್ ಕನ್ನಡ ಸಿನಿಮಾ ರಂಗವನ್ನು ರಾಷ್ಟ್ರಮಟ್ಟಕ್ಕೆ ಮೊದಲ ಬಾರಿಗೆ ತಗೆದುಕೊಂಡು ಹೋದ ನಟನ ಬಗ್ಗೆ ಮಾತಾಡಿದ್ದಾರೆ. ಈ ಮಾತು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಜಗ್ಗೇಶ್ ಆ ರೀತಿ ಮಾತನಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಮಾತನಾಡಿದ ಗಳಿಗೆ ಸರಿಯಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?
Advertisement
Advertisement
ಕೆಜಿಎಫ್ 2 ಸಿನಿಮಾವನ್ನು ಕೇವಲ ದಕ್ಷಿಣದವರು ಮಾತ್ರವಲ್ಲ, ಬಾಲಿವುಡ್ ನಟ ನಟಿಯರೇ ಹಾಡಿಹೊಗಳುತ್ತಿದ್ದಾರೆ. ಹೀಗಾಗಿ ಕನ್ನಡ ಸಿನಿಮಾವನ್ನು ಯಶ್ ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದರು ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮೊದಲ ಬಾರಿಗೆ ಸಿನಿಮಾ ರಂಗವನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸಿದವರು ಮತ್ತು ಹಲವಾರು ದಾಖಲೆಗಳನ್ನು ಮಾಡಿದವರು ಡಾ.ವಿಷ್ಣುವರ್ಧನ್ ಎಂದು ಹಲವರು ಸಾಕ್ಷಿ ಸಮೇತ ಬರೆದುಕೊಂಡಿದ್ದಾರೆ. ಅಲ್ಲದೇ, ಕನ್ನಡದಲ್ಲಿ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದು ಡಾ.ರಾಜ್ ಕುಮಾರ್ ಎಂದೂ ದಾಖಲಾಗಿದೆ. ಇದನ್ನೂ ಓದಿ : ಗಮನ ಸೆಳೆದ ‘ಒಂದಂಕೆ ಕಾಡು’ ಮೋಷನ್ ಪೋಸ್ಟರ್
Advertisement
ಇಷ್ಟೊಂದು ಚರ್ಚೆ ಆಗುತ್ತಿರುವ ಈ ಹೊತ್ತಿನಲ್ಲ, ಮೊದಲ ಬಾರಿಗೆ ಕನ್ನಡ ಸಿನಿಮಾ ರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋಗಿದ್ದು ಕಿಚ್ಚ ಸುದೀಪ್ ಎಂದು ಹೇಳುವ ಮೂಲಕ ಜಗ್ಗೇಶ್ ತಮ್ಮ ಪ್ರೀತಿಯನ್ನು ಸುದೀಪ್ ಮೇಲೆ ತೋರಿದ್ದಾರೆ. ಆದರೆ, ಈ ಮಾತೇ ಈಗ ಮತ್ತೊಂದು ಚರ್ಚೆಗೆ ನಾಂದಿ ಹಾಡಿದೆ. ತೋತಾಪುರಿ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಜಗ್ಗೇಶ್ ಇಂಥದ್ದೊಂದು ಮಾತು ಹೇಳುವ ನಡೆಯುತ್ತಿರುವ ಚರ್ಚೆಗೆ ಮತ್ತಷ್ಟು ವೇಗ ಕೊಟ್ಟಿದ್ದಾರೆ. ಇದನ್ನೂ ಓದಿ : Love…ಲಿ ಅಂತಿದ್ದಾರೆ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ: ಚಿಟ್ಟೆ ನ್ಯೂ ಲುಕ್ ಹೇಗಿದೆ ಗೊತ್ತಾ?
ಈಗಾಗಲೇ ಸುದೀಪ್ ಅವರು ಕೆಜಿಎಫ್ 2 ಸಿನಿಮಾಗೆ ವಿಶ್ ಮಾಡಲಿಲ್ಲ ಎನ್ನುವ ಕಾರಣ ಇಟ್ಟುಕೊಂಡು ವಿವಾದ ಮಾಡಲಾಗಿದೆ. ನಾನು ಮಾತಾಡಿದರೂ ಸುದ್ದಿ ಆಗ್ತೀನಿ, ಡೈಲಾಗ್ ಹೊಡೆದರೂ ಸುದ್ದಿ ಆಗುತ್ತೇನೆ ಎಂದು ಹೇಳುವ ಮೂಲಕ ಕಿಚ್ಚ ಸುದೀಪ್ ವಿವಾದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ನಡುವೆ ಜಗ್ಗೇಶ್ ಆಡಿದ ಈ ಮಾತು ಇನ್ನ್ಯಾವ ದಿಕ್ಕಿನತ್ತ ಕರೆದುಕೊಂಡು ಹೋಗಲಿದೆಯೋ ಕಾದು ನೋಡಬೇಕು.