BollywoodCinemaDistrictsKarnatakaLatestMain PostTV Shows

ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ನಡೆಸಿಕೊಡುವ ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ನಟಿ ಮಂದಾನಾ ಕರೀಮಿ ಮಾತನಾಡುತ್ತಾ, ತಾವು ಪತಿಯಿಂದ ದೂರವಾದ ನಂತರ ಸಾಂತ್ವಾನ ಹೇಳುವಂತೆ ನಟಿಸಿ ಖ್ಯಾತ ನಿರ್ದೇಶಕರೊಬ್ಬರು ತಮ್ಮನ್ನು ಬಳಸಿಕೊಂಡು, ಬೀಸಾಕಿದರು ಎಂದು ಹೇಳಿಕೆ ನೀಡಿದ್ದರು. ಮಂದಾನಾ ಮತ್ತು ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ತುಂಬಾ ಕ್ಲೋಸ್ ಆಗಿದ್ದು, ನಂತರ ದೂರ ದೂರವಾಗಿದ್ದರಿಂದ ಆ ನಿರ್ದೇಶಕ ಅನುರಾಗ್ ಕಶ್ಯಪ್ ಎಂದೇ ಬಿಂಬಿಸಲಾಯಿತು. ಸೋಷಿಯಲ್ ಮೀಡಿಯಾ ಸೇರಿದಂತೆ ಹಲವರು ಅನುರಾಗ್ ಕಶ್ಯಪ್ ಅವರತ್ತು ಬೊಟ್ಟು ಮಾಡಿ ತೋರಿಸಿದ್ದರು. ಇದೀಗ ಮಂದಾನಾ ಮಾತಿಗೆ ಟ್ವಿಸ್ಟ್ ಸಿಕ್ಕಿದೆ. ಇದನ್ನೂ ಓದಿ : ಗಮನ ಸೆಳೆದ ‘ಒಂದಂಕೆ ಕಾಡು’ ಮೋಷನ್ ಪೋಸ್ಟರ್

ಲಾಕ್ ಅಪ್ ಶೋ ನಿಂದ ಎಲಿಮಿನೇಟ್ ಆಗಿ ಆಚೆ ಬಂದಿರುವ ಮಂದಾನಾ ಕರೀಮಿ ಈ ಕುರಿತಾಗಿ ಮಾತನಾಡಿದ್ದಾರೆ. ತಮಗೆ ಅನ್ಯಾಯ ಆಗಿದ್ದು ಹೇಗೆ? ಆ ನಿರ್ದೇಶಕ ಇವರೊಂದಿಗೆ ಹೇಗೆ ಸಂಬಂಧ ಹೊಂದಿದ. ಯಾಕೆ ದೂರವಾದ ಎನ್ನುವ ಎಲ್ಲ ಮಾಹಿತಿಯನ್ನೂ ಆಚೆ ಹಾಕಿದ್ದಾರೆ. ಈ ಮೂಲಕ ಮತ್ತೊಂದು ವಿವಾದಕ್ಕೂ ಅವರು ಕಾರಣವಾಗಿದ್ದಾರೆ.  ಇದನ್ನೂ ಓದಿ : Love…ಲಿ ಅಂತಿದ್ದಾರೆ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ: ಚಿಟ್ಟೆ ನ್ಯೂ ಲುಕ್‌ ಹೇಗಿದೆ ಗೊತ್ತಾ?

ಮಂದಾನಾ ಕರೀಮಿ ಅವರು ಗೌರವ್ ಗುಪ್ತಾ ಎನ್ನುವವರ ಜತೆ ಮದುವೆ ಆಗಿದ್ದರು. ಈ ಜೋಡಿ ತುಂಬಾ ದಿನಗಳ ಕಾಲ ಸತಿಪತಿಗಳಾಗಿ ಉಳಿಯಲಿಲ್ಲ. ಮಂದಾನಾ ನಿರ್ವಹಿಸುತ್ತಿದ್ದ ಪಾತ್ರಗಳು ಪತಿ ಇಷ್ಟವಾಗುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಮತ್ತು ವೈಯಕ್ತಿಕ ಹಲವು ಕಾರಣಗಳಿಂದಾಗಿ ಇಬ್ಬರೂ ದೂರವಾದರು. ಪತಿಯು ದೂರವಾದ ನಂತರ ಮಂದಾನಾ ಮಾನಸಿಕ ಖಿನ್ನತೆಗೂ ಒಳಗಾದರು. ಈ ಸಂದರ್ಭದಲ್ಲಿ ಅವರಿಗೆ ನೆರವಿಗೆ ಬಂದಿದ್ದು ಬಾಲಿವುಡ್ ನ ಖ್ಯಾತ ನಿರ್ದೇಶಕ. ಇದನ್ನೂ ಓದಿ:`ಅದ್ದೂರಿ ಲವರ್’ಗಾಗಿ `ಕಿಸ್’ ಹೀರೋ ವಿರಾಟ್ ಭರ್ಜರಿ ವರ್ಕೌಟ್

ಲಾಕ್ ಅಪ್ ಶೋನಿಂದ ಆಚೆ ಬಂದ ನಂತರ ಮಂದಾನಾ ಅವರಿಗೆ ಆ ನಿರ್ದೇಶಕರು ಯಾರು? ಅನುರಾಗ್ ಕಶ್ಯಪ್ ಹೆಸರು ತಳುಕು ಹಾಕಿಕೊಂಡಿದೆ. ಅದು ನಿಜನಾ? ಎಂದು ಪ್ರಶ್ನೆ ಕೇಳಿದ್ದಕ್ಕೆ ಗರಂ ಆಗಿದ್ದಾರೆ. ತಾವು ಯಾವತ್ತೂ ಅನುರಾಗ್ ಅವರ ಹೆಸರನ್ನು ಹೇಳಿಲ್ಲ. ಶೋನಲ್ಲೂ ಆ ನಿರ್ದೇಶಕರು ಯಾರು ಎಂದೂ ಹೇಳಿರಲಿಲ್ಲ. ಸುಖಾಸುಮ್ಮನೆ ಅವರು ಹೆಸರನ್ನು ಈ ವಿವಾದಕ್ಕೆ ತಳುಕು ಹಾಕುವುದು ಬೇಡ ಎಂದು ಗರಂ ಆಗಿಯೇ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ:ನಿಮ್ಮ ಹೃದಯವೇ ನನ್ನ ಸಾಮ್ರಾಜ್ಯ: ಅಭಿಮಾನಿಗಳಿಗೆ ಸುಂದರ ಕಥೆ ಹೇಳಿದ ರಾಕಿಭಾಯ್

ತಮಗೆ ನಿರ್ದೇಶಕನೊಬ್ಬನಿಂದ ಅನ್ಯಾಯವಾಗಿದ್ದು ನಿಜ ಎಂದು ಒಪ್ಪಿಕೊಂಡಿರುವ ಅವರು, ಆ ನಿರ್ದೇಶಕ ಯಾರು ಎನ್ನುವುದನ್ನು ಹೇಳಲಾರೆ ಅಂದಿದ್ದಾರೆ. ಲಾಕ್ ಅಪ್ ಶೋನ ಫಾರ್ಮೆಟ್ ಹಾಗಿದ್ದರಿಂದ ಅನಿವಾರ್ಯವಾಗಿಯೇ ಈ ವಿಷಯವನ್ನು ಪ್ರಸ್ತಾಪ ಮಾಡಲಾಯಿತು. ನಾನು ಯಾವತ್ತೂ ಅನುರಾಗ್ ಕಶ್ಯಪ್ ಅವರ ಹೆಸರನ್ನು ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಉತ್ತರಿಸಿದ್ದಾರೆ ಮಂದಾನಾ.

Leave a Reply

Your email address will not be published.

Back to top button