ನವದೆಹಲಿ: ಟೀಂ ಇಂಡಿಯಾ 2007ರಲ್ಲಿ ಅಂದಿನ ಯುವ ನಾಯಕ ಎಂ.ಎಸ್.ಧೋನಿ ನೇತೃತ್ವದಲ್ಲಿ ಐಸಿಸಿಯ ಚೊಚ್ಚಲ ಟಿ20 ವಿಶ್ವಪಕ್ ಟೂರ್ನಿಯನ್ನು ಗೆದ್ದು ಬೀಗಿತ್ತು. ಆದರೆ ಅದಕ್ಕೂ ಮುನ್ನ ನಡೆದ 2015ರ ಏಕದಿನ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಆಟಗಾರರು ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ಹೀಗಾಗಿ ಚೊಚ್ಚಲ ಟಿ20 ಟೂರ್ನಿಯಲ್ಲಿ ಟ್ರೋಫಿ ಎತ್ತಿಹಿಡಿಯುವ ಮೂಲಕ ಧೋನಿ ನೇತೃತ್ವದ ಬಳಗವು ಇತಿಹಾಸವನ್ನೇ ಸೃಷ್ಟಿಸಿತು.
ಈ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಬೌಲಿಂಗ್ ವೇಳೆ 6 ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ವಿಶ್ವ ದಾಖಲೆ ಬರೆದಿದ್ದರು. ಈ ದಾಖಲೆ ಯುವಿ ಅಭಿಮಾನಿಗಳ ನೆನಪಿನಲ್ಲಿ ಅಚ್ಚಳಿಯದಂದೆ ಉಳಿದಿದೆ. ಆದರೆ ಕ್ರಿಕೆಟ್ ಅಭಿಮಾನಿಗಳಲ್ಲಿ ಒಂದು ಪ್ರಮುಖ ದಾಖಲೆ ಗಮನಕ್ಕೆ ಬಾರದೆ ಉಳಿದಿರಬಹುದು. ಅದೇನೆಂದರೆ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಮೊದಲ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಯಾರು ಎನ್ನುವುದು ಅನೇಕರಿಗೆ ಗೊತ್ತಿಲ್ಲ.
Advertisement
Advertisement
ಈ ದಾಖಲೆ ಯುವರಾಜ್ ಸಿಂಗ್ ಅಥವಾ ವಿರೇಂದ್ರ ಸೆಹ್ವಾಗ್ ಅವರ ಹೆಸರಿನಲ್ಲಿದೆ ಎಂದು ಭಾವಿಸುವುದು ತಪ್ಪಾಗುತ್ತದೆ. 2007ರಿಂದ 2015ರವರೆಗೆ 13 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ಕನ್ನಡಿಗ ರಾಬಿನ್ ವೇಣು ಉತ್ತಪ್ಪ ಈ ಸಾಧನೆ ಮಾಡಿದ ಮೊದಲ ಭಾರತದ ಬ್ಯಾಟ್ಸ್‌ಮನ್ ಆಗಿದ್ದಾರೆ.
Advertisement
ಹೌದು. ಪಾಕಿಸ್ತಾನ ವಿರುದ್ಧದ 2007ರ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಬಲಗೈ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಅರ್ಧಶತಕ ದಾಖಲಿಸಿದ್ದರು. ಪಂದ್ಯದ ಮೊದಲ ಓವರಿನಲ್ಲಿ ಗೌತಮ್ ಗಂಭೀರ್ ವಿಕೆಟ್ ಒಪ್ಪಿಸಿದ ಬಳಿಕ ಉತ್ತಪ್ಪ ಬ್ಯಾಟಿಂಗ್‍ಗೆ ಕಾಲಿಟ್ಟರು. ಮುಂದಿನ ಆರು ಓವರ್ ಗಳಲ್ಲಿ ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮತ್ತು ದಿನೇಶ್ ಕಾರ್ತಿಕ್ ವಿಕೆಟ್ ಒಪ್ಪಿಸಿದರು. ಹೀಗಾಗಿ ಸ್ಟ್ರೈಕ್‍ನಲ್ಲಿದ್ದ ರಾಬಿಲ್ ಉತ್ತಪ್ಪ ಅವರ ಮೇಲೆ ತಂಡವನ್ನು ಗೆಲ್ಲಿಸುವ ಒತ್ತಡ ಬಿದ್ದಿತ್ತು.
Advertisement
ಬಳಿಕ ಮೈದಾನಕ್ಕಿಳಿದ ಎಂ.ಎಸ್.ಧೋನಿ ಉತ್ತಪ್ಪ ಅವರಿಗೆ ಸಾಥ್ ನೀಡಿದರು. ಈ ವೇಳೆ ಉತ್ತಪ್ಪ ಸಿಕ್ಸರ್, ಬೌಂಡರಿ ಚಚ್ಚಿದರು. ಶಾಹಿತ್ ಅಫ್ರಿದಿ ಓವರಿನಲ್ಲಿ ಉತ್ತಪ್ಪ ಅವರು ಕ್ರಮವಾಗಿ 1, 4, 2, 4, 1 ರನ್ ಗಳಿಸಿದರು. ಈ ಮೂಲಕ ತಾವು ಎದುರಿಸಿದ 37ನೇ ಎಸೆತದಲ್ಲಿ ಕನ್ನಡಿಗ ಉತ್ತಪ್ಪ ಅರ್ಧ ಶತಕ ದಾಖಲಿಸಿದ್ದರು. ಈ ಮೂಲಕ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಮೊದಲ ಅರ್ಧ ಶತಕ ಸಿಡಿಸಿದ ಭಾರತೀಯ ಎಂಬ ದಾಖಲೆಯನ್ನು ಮಾಡಿದರು. ವಿಪರ್ಯಾಸವೆಂದರೆ ಉತ್ತಪ್ಪ ಅವರು ಆ ಬಳಿಕ ಆಡಿದ 12 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 50 ರನ್ ಗಳಿಸಲು ವಿಫಲರಾದರು.
ಪಂದ್ಯದ ಫಲಿತಾಂಶ ಏನಾಯಿತು?
ಉತ್ತಪ್ಪ ಅವರ ಅರ್ಧಶತಕ ಬಳಿಕ ಭಾರತ ನಿಗದಿತ 20 ಓವರ್‌ಗಳಲ್ಲಿ 141 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಸಮಬಲ ಸಾಧಿಸಿತ್ತು. ನಂತರ ಭಾರತ ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಹಾಗೂ ರಾಬಿನ್ ಉತ್ತಪ್ಪ ಸ್ಟಂಪ್ ಮಾಡಿದರು. ಆದರೆ ಪಾಕಿಸ್ತಾನದ ಯಾವುದೇ ಬೌಲರ್‌ಗಳು ಸ್ಟಂಪ್ ಮಾಡಿಲ್ಲ. ಹೀಗಾಗಿ ಭಾರತ ಗೆಲುವು ಸಾಧಿಸಿತು.