ಪ್ಯಾನ್ ಇಂಡಿಯಾ ಸಿನಿಮಾ ಅಂದಾಕ್ಷಣ ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ಎನ್ನುವುದಕ್ಕೆ ಈ ಪೋಸ್ಟರ್ ಮೊದಲ ಬಾರಿಗೆ ಸಾಕ್ಷಿಯಾಗಿ ನಿಂತಿದೆ. ಒಂದು ತೆಲುಗಿನ ನಾನಿ ನಟನೆಯ ಚಿತ್ರ. ಇದಕ್ಕೆ ತೆಲುಗು ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಇವರು ಇಟ್ಟಿರುವ ಹೆಸರು ‘ದಸರಾ’. ಮತ್ತೊಂದು ಅಪ್ಪಟ ಕನ್ನಡದ್ದೆ ಚಿತ್ರ. ನೀನಾಸಂ ಸತೀಶ್ ನಾಯಕನಾಗಿ ನಟಿಸುತ್ತಿರುವ ಚಿತ್ರ. ಈ ಸಿನಿಮಾಗೂ ‘ದಸರಾ’ ಎಂದೇ ಹೆಸರಿಡಲಾಗಿದೆ.
Advertisement
ಎರಡೂ ಚಿತ್ರಗಳೂ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿವೆ. ಹೀಗಾಗಿ ಯಾರಿಗೆ ಈ ಟೈಟಲ್ ಉಳಿಯುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ನೀನಾಸಂ ಸತೀಶ್ ನಟನೆಯ ‘ದಸರಾ’ ಸಿನಿಮಾದ ಶೂಟಿಂಗ್ ಈಗಾಗಲೇ ಕಂಪ್ಲಿಟ್ ಆಗಿದೆ. ತೆಲುಗಿನ ‘ದಸಾರ’ ಕೇವಲ ಫಸ್ಟ್ ಲುಕ್ ಮಾತ್ರ ಬಿಡುಗಡೆ ಮಾಡಿದೆ. ಹಾಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಯಾರ ಪರವಾಗಿ ನಿಲ್ಲುತ್ತದೆ ಎನ್ನುವ ಪ್ರಶ್ನೆ ಎದ್ದಿದೆ. ಇದನ್ನೂ ಓದಿ : ಸುದೀಪ್, ಉಪ್ಪಿ ಕಾಂಬಿನೇಷನ್ ‘ಕಬ್ಜ’ ಚಿತ್ರಕ್ಕೆ ಇಬ್ಬರು ದಕ್ಷಿಣ ತಾರೆಯರ ಎಂಟ್ರಿ
Advertisement
Advertisement
ಯಾರೇ ಸಿನಿಮಾ ಮಾಡಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆಸರನ್ನು ನೋಂದಾಯಿಸಬೇಕು ಎನ್ನುವ ನಿಯಮವಿದೆ. ಯಾರು ಮೊದಲು ಹೆಸರನ್ನು ನೋಂದಾಯಿಸಿಕೊಳ್ಳುತ್ತಾರೋ ಅವರಿಗೆ ಶೀರ್ಷಿಕೆಗಳು ಸಿಗುತ್ತವೆ. ‘ದಸರಾ’ ಸಿನಿಮಾವನ್ನು ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕಿ, ನಟಿ ಶರ್ಮಿಳಾ ಮಾಂಡ್ರೆ ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ನಿಯಮದ ಪ್ರಕಾರ ಇದೇ ತಂಡಕ್ಕೆ ‘ದಸರಾ’ ಟೈಟಲ್ ಬಳಸಿಕೊಳ್ಳುವ ಹಕ್ಕಿದೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು
Advertisement
ನಾನಿ ನಟನೆಯ ತೆಲುಗಿನ ಸಿನಿಮಾ ಡಬ್ ಆಗಿ ಕನ್ನಡದಲ್ಲೂ ರಿಲೀಸ್ ಆಗಲಿದೆ. ಹಾಗಾಗಿ ಕನ್ನಡದಲ್ಲಿ ತಮ್ಮ ಸಿನಿಮಾದ ಟೈಟಲ್ ಅನ್ನು ಬದಲಿಸುವುದು ಅನಿವಾರ್ಯವಾಗಬಹುದು. ಅದನ್ನು ಸಿನಿಮಾ ತಂಡ ಒಪ್ಪಿಕೊಳ್ಳುತ್ತಾ ಅಥವಾ ಕಾನೂನಿನಲ್ಲಿ ಮತ್ತೊಂದು ದಾರಿಯೂ ಇದೆ. ಅದನ್ನು ಬಳಸಿಕೊಳ್ಳುತ್ತಾ ಅನ್ನುವುದು ಸದ್ಯಕ್ಕಿರುವ ಪ್ರಶ್ನೆ. ಇದನ್ನೂ ಓದಿ : ಸರ್ರಂತ ಸುಡುವ ಜ್ವಾಲಾಗ್ನಿ ಆಗಿ ಬಂದ ಈ ತೂಫಾನ್: ಕೆಜಿಎಫ್ 2 ಫಸ್ಟ್ ಲಿರಿಕಲ್ ಹಾಡು ರಿಲೀಸ್
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿರುವ ಎಷ್ಟೋ ಶೀರ್ಷಿಕೆಯನ್ನು ಸೆನ್ಸಾರ್ ಮಂಡಳಿ ಒಪ್ಪಿಕೊಂಡಿಲ್ಲ. ಕೆಲವು ಬಾರಿ ಕೋರ್ಟಿಗೂ ಹೋಗಿ ತಮಗಿಷ್ಟದ ಟೈಟಲ್ ಪಡೆದುಕೊಂಡ ಉದಾಹರಣೆಯೂ ಇದೆ. ಯಾರ ಸಿನಿಮಾ ಮೊದಲು ಸೆನ್ಸಾರ್ ಆಗುತ್ತದೆಯೋ, ಆ ಟೈಟಲ್ ಗೆ ಮೊದಲ ಆದ್ಯತೆ ಎನ್ನುವ ಮತ್ತೊಂದು ನಿಯಮವಿದೆ. ಈ ಎಲ್ಲ ಗೊಂದಲಗಳ ಮಧ್ಯೆ ಯಾವ ಚಿತ್ರತಂಡಕ್ಕೆ ‘ದಸರಾ’ ಟೈಟಲ್ ಸಿಗುತ್ತದೆಯೋ ಕಾದು ನೋಡಬೇಕು.