ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯು ತನ್ನ ವಾರ್ಡ್ ನಂಬರ್ 55ಕ್ಕೆ ಮರು ವಿಂಗಡನೆ ಮಾಡಿ, ಮರು ನಾಮಕರಣ ಮಾಡಿದೆ. ಈ ಸಂದರ್ಭದಲ್ಲಿ 55ನೇ ವಾರ್ಡ್ಗೆ ಕನ್ನಡದ ಖ್ಯಾತ ನಟ, ಇತ್ತೀಚೆಗಷ್ಟೇ ನಿಧನರಾಗಿರುವ ಪುನೀತ್ ರಾಜ್ ಕುಮಾರ್ ಹೆಸರನ್ನು ಇಡಲಾಗಿದೆ. ಪುನೀತ್ ಅವರ ಹೆಸರನ್ನು ಇಡಬೇಕು ಎಂದು ಮನವಿ ಸಲ್ಲಿಸಿದ್ದು ಬೇರೆ ಯಾರೂ ಅಲ್ಲ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿರುವ ಭಾಗ್ಯವತಿ ಅಮರೇಶ್ ಅವರು.
Advertisement
ಈ ಕುರಿತು ಮುಖ್ಯಮಂತ್ರಿಗೆ ಧನ್ಯವಾದಗಳ ಪತ್ರವೊಂದನ್ನು ಬರೆದಿರುವ ಭಾಗ್ಯವತಿ ಅಮರೇಶ್, ತಾವು 06.06.2022 ರಂದು ಸಲ್ಲಿಸಿದ್ದ ಮನವಿ ಪತ್ರಕ್ಕೆ ಮುಖ್ಯಮಂತ್ರಿಗಳ ಸ್ಪಂದಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಬಿ.ಬಿ.ಎಂ.ಪಿ.ವಾರ್ಡ್ -55ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಿದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಎಸ್.ಬೊಮ್ಮಾಯಿರವರಿಗೆ ಅಭಿನಂದನೆಗಳು ಎಂದು ಪತ್ರದಲ್ಲಿ ಬರೆದಿದ್ದಾರೆ. ಇದನ್ನೂ ಓದಿ:ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಫ್ಯಾಶನ್ ಡಿಸೈನರ್ ಮಸಾಬ ಗುಪ್ತಾ
Advertisement
Advertisement
ದಿನಾಂಕ 06/06/2022 ರಂದು ನಾನು ತಮಗೆ ಪತ್ರ ಬರೆದು ನೂತನವಾಗಿ ಮರುವಿಂಗಡಣಿ ಆಗಿರುವ ಬಿ.ಬಿ.ಎಂ.ಪಿಯ ವಾರ್ಡ್ ಒಂದಕ್ಕೆ ಪವರ್ ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್‌ರವರ ಹೆಸರರನ್ನು ಇಡಬೇಕೆಂದು ತಮಗೆ ಮನವಿ ಮಾಡಿಕೊಂಡಿದ್ದೆ. ತಾವು ಮನವಿಗೆ ಸ್ಪಂದಿಸಿ ಬಿ.ಬಿ.ಎಂ.ಪಿ ವ್ಯಾಪ್ತಿಯ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.55ಕ್ಕೆ ಮರು ವಿಂಗಡಣೆ ಮತ್ತು ಮರು ನಾಮಕರಣ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್‌ರವರ ಹೆಸರನ್ನು ಇಟ್ಟರುವುದಕ್ಕೆ ನಿಮಗೆ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಇದರಿಂದಾಗಿ ಪುನೀತ್ ರಾಜ್‌ಕುಮಾರ್‌ರವರ ಹೆಸರು ಶಾಶ್ವತವಾಗಿ ಉಳಿದಂತಾಗಿದೆ. ತಾವು ಕೂಡ ಡಾ. ರಾಜ್ ಕುಟುಂಬದ ಅತ್ಯಂತ ನಿಕಟ ಸ್ನೇಹಿತರಾಗಿ ಮತ್ತು ಅಭಿಮಾನಿಯಾಗಿ ಪುನೀತ್ ರಾಜ್‌ಕುಮಾರ್ ಹೆಸರನ್ನು ವಾರ್ಡ್‌ಗೆ ಇಟ್ಟು ಅವರ ಕುಟುಂಬಕ್ಕೆ ಗೌರವವನ್ನು ಸಲ್ಲಿಸಿದೀರಿ, ಪುನೀತ್ ರಾಜ್‌ಕುಮಾರ್ ಹೆಸರನ್ನು ಇಡುವುದರ ಮುಖಾಂತರ ಕೋಟ್ಯಾಂತರ ಚಿತ್ರ ರಸಿಕರ ಮನಸನ್ನು ಗೆದ್ದಿದೀರಿ. ಮತ್ತೊಮ್ಮೆ ತಮಗೆ ಅನಂತ ಅನಂತ ಧನ್ಯವಾದಗಳು ಮತ್ತು ಅಭಿನಂದನೆಗಳು. ಎಂದು ಪತ್ರ ಬರೆದಿದ್ದಾರೆ.