ಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲುಕಿಂಗ್ ಲೈಕ್ ಎ ವಾವ್… ನೀವು ಸೋಷಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟಿವ್ ಆಗಿದ್ದರೆ ಈ ಸಾಲುಗಳನ್ನು ಖಂಡಿತವಾಗಿಯೂ ಕೇಳಿರುತ್ತೀರಿ. ಇದು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿರುವ ಹಾಡು. ಸಾಮಾನ್ಯ ಜನರಿಂದ ಹಿಡಿದು ಸ್ಟಾರ್ ನಟ-ನಟಿಯರೂ ಈ ಸಾಂಗ್‌ಗೆ ಫಿದಾ ಆಗಿದ್ದಾರೆ. ಅಷ್ಟು ಮಾತ್ರವಲ್ಲದೇ ಕ್ರಿಕೆಟ್ ಲೋಕದಲ್ಲೂ ಈ ಸಾಂಗ್ ಭಾರೀ ಸದ್ದು ಮಾಡುತ್ತಿದೆ. ಪ್ರತಿಯೊಬ್ಬರಲ್ಲೂ ಕ್ರೇಜ್ ಮೂಡಿಸಿರುವ ಈ ಹಾಡನ್ನು (Song) ಮೊದಲಿಗೆ ಹಾಡಿದವರು ಯಾರು? ಇದರ ಸೃಷ್ಟಿಕರ್ತ ಯಾರು? ರಾತ್ರೋರಾತ್ರಿ ಈ ಹಾಡು ವೈರಲ್ (Viral) ಆಗಿದ್ದು ಹೇಗೆ ಎಂಬ ಕುತೂಹಲ ಎಲ್ಲರಲ್ಲೂ ಮೂಡುತ್ತದೆ. ಇದಕ್ಕೆಲ್ಲ ಉತ್ತರ ಕೊಡುವ ಸಣ್ಣ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ.
ಸೋಷಿಯಲ್ ಮೀಡಿಯಾದಲ್ಲಿ ಒಂದೊಂದು ಬಾರಿ ಒಂದೊಂದು ಹಾಡು ಟ್ರೆಂಡಿಂಗ್ ಅಲ್ಲಿ ಇರುತ್ತದೆ. ಹಾಗೆಯೇ ‘ಜಸ್ಟ್ ಲುಕಿಂಗ್ ಲೈಕ್ ಎ ವಾವ್’ (Just Looking Like A Wow) ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತ ಟ್ರೆಂಡಿಂಗ್‌ನಲ್ಲಿದೆ. ಫೇಸ್‌ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಶಾರ್ಟ್ಸ್ ಹೀಗೆ ಎಲ್ಲಾ ಕಡೆ ಈ ಹಾಡು ಧೂಳೆಬ್ಬಿಸುತ್ತಿದ್ದು, ಪ್ರತಿಯೊಬ್ಬರೂ ಈ ಹಾಡಿಗೆ ವಿಡಿಯೋ ಮಾಡುತ್ತಿದ್ದಾರೆ. ಅಲ್ಲದೇ ಇದಕ್ಕೆ ಸಂಬಂಧ ಪಟ್ಟ ಅನೇಕ ಮೀಮ್ಸ್‌ಗಳು (Memes) ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ದೀಪಿಕಾ ಪಡುಕೋಣೆಯಂತಹ (Deepika Padukone) ಫೇಮಸ್ ನಟಿ ಕೂಡಾ ಹಾಡಿಗೆ ರೀಲ್ಸ್ (Reels) ಮಾಡಿದ್ದಾರೆ.
ಈ ವಾಯ್ಸ್ ಯಾರದ್ದು?
ಜಾಸ್ಮಿನ್ ಕೌರ್ (Jasmeen Kaur) ಎಂಬ ಸಾಮಾನ್ಯ ಮಹಿಳೆ ಈ ಹಾಡಿನ ಸೃಷ್ಟಿಕರ್ತೆ. ಈಕೆ ದೆಹಲಿಯ (New Delhi) ತಿಲಕ್ ನಗರದಲ್ಲಿ ಸೂಟ್‌ಗಳನ್ನು ಮಾರಾಟ ಮಾಡುವ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಜಾಸ್ಮಿನ್ ಕೌರ್ ತಮ್ಮ ಅಂಗಡಿಯಲ್ಲಿರುವ ಬಟ್ಟೆಗಳನ್ನು ಪ್ರಮೋಟ್ ಮಾಡಿ ಮಾರ್ಕೆಟಿಂಗ್ (Marketing) ಮಾಡುವ ಸಂದರ್ಭ ಈ ಹಾಡನ್ನು ಹಾಡಿದ್ದರು. ಹಳದಿ ಬಣ್ಣದ ಚೂಡಿದಾರ್ ಹಾಕಿ ಮಾರ್ಕೆಟಿಂಗ್‌ಗೋಸ್ಕರ ಜಾಸ್ಮಿನ್ ವಿಡಿಯೋವೊಂದನ್ನು ಮಾಡಿದ್ದರು. ಈ ಸಮಯದಲ್ಲಿ ಹುಟ್ಟಿಕೊಂಡಿದ್ದೇ ಜಸ್ಟ್ ಲೈಕ್ ಎ ವಾವ್ ಹಾಡು.
ಈ ಹಾಡು ಸದ್ಯ ಎಲ್ಲರ ಮನಗೆದ್ದಿದ್ದು, ರಾತ್ರೋ ರಾತ್ರಿ ಜಾಸ್ಮಿನ್ ಕೌರ್ ಫೇಮಸ್ ಆಗಿದ್ದಾರೆ. ಕಳೆದ 18 ವರ್ಷಗಳಿಂದ ಬಟ್ಟೆ ಅಂಗಡಿ ನಡೆಸುತ್ತಿರುವ ಜಾಸ್ಮಿನ್ ಆಗಾಗ ತಮ್ಮ ಅಂಗಡಿಯಲ್ಲಿರುವ ಬಟ್ಟೆಗಳನ್ನು ಧರಿಸಿ ಅದರ ವಿಶಿಷ್ಟತೆ ಹಾಗೂ ವಿನ್ಯಾಸವನ್ನು ವಿವರಿಸುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದರು.
ಈ ಹಾಡು ವೈರಲ್ ಆದ ಬಳಿಕ ಇವರ ಅಂಗಡಿಗೆ ಬರುವವರ ಸಂಖ್ಯೆ ಕೂಡಾ ಹೆಚ್ಚಾಗಿದೆ ಎಂದು ಜಾಸ್ಮಿನ್ ಕೌರ್ ಸಂತೋಷ ವ್ಯಕ್ತಪಡಿಸಿದ್ದಾರೆ. ದೀಪಿಕಾ ಪಡುಕೋಣೆ, ರಣವೀರ್ ಸಿಂಗ್‌ನಿಂದ ಹಿಡಿದು ಕರಣ್ ಜೋಹರ್, ಸಾನ್ಯಾ ಮಲ್ಹೋತ್ರಾ ಮುಂತಾದ ಸ್ಟಾರ್ ನಟ-ನಟಿಯರು ಈ ಹಾಡಿಗೆ ವಿಡಿಯೋ ಮಾಡಿದ್ದಾರೆ. ಅಲ್ಲದೇ ಟೀಂ ಇಂಡಿಯಾದ ಕೆಎಲ್ ರಾಹುಲ್ ಕೂಡಾ ತನ್ನ ಪತ್ನಿಯ ಪೋಸ್ಟ್‌ವೊಂದಕ್ಕೆ ಈ ಸಾಲುಗಳನ್ನು ಕಾಮೆಂಟ್ ಮಾಡಿದ್ದಾರೆ. ಖ್ಯಾತ ಸಂಗೀತಗಾರ ಯಶ್‌ರಾಜ್ ಮುಖಾಟೆ ಈ ಸಾಲುಗಳನ್ನು ಹಾಡಾಗಿ ಪರಿವರ್ತಿಸಿದ ಬಳಿಕ ಈ ಹಾಡು ಇನ್ನೂ ಫೇಮಸ್ ಆಗಿದೆ. ಹಾಡು ವೈರಲ್ ಬೆನ್ನಲ್ಲೇ ಜಾಸ್ಮಿನ್ ಕೌರ್ ತಮ್ಮ ಇನ್ಸ್ಟಾಗ್ರಾಂನಲ್ಲಿ 8.36 ಲಕ್ಷ ಅನುಯಾಯಿಗಳನ್ನು (Followers) ಹೊಂದಿದ್ದಾರೆ.