ಶಿವರಾಜ್ ಕುಮಾರ್ (Shivaraj Kumar) ಹುಟ್ಟು ಹಬ್ಬದ ದಿನದಂದು ‘ಟಗರು 2’ (Tagaru 2) ಸಿನಿಮಾದ ಪೋಸ್ಟರ್ ಹಂಚಿಕೊಂಡು ಅಚ್ಚರಿ ಮೂಡಿಸಿದ್ದರು ನಿರ್ಮಾಪಕ ಕೆ.ಪಿ ಶ್ರೀಕಾಂತ್ (KP Srikanth) . ಪೋಸ್ಟರ್ ನಲ್ಲಿ ಹೆಚ್ಚಿನ ಮಾಹಿತಿ ಇಲ್ಲದೇ ಇದ್ದರೂ, ಟಗರು 2 ಸಿನಿಮಾದ ಪೋಸ್ಟರ್ ಹಲವಾರು ಕುತೂಹಲಗಳನ್ನು ಹುಟ್ಟು ಹಾಕಿತ್ತು. ಕೇವಲ ನಿರ್ಮಾಪಕರ ಹೆಸರು ಇದ್ದ ಕಾರಣದಿಂದಾಗಿ ನಿರ್ದೇಶಕರು ಯಾರು ಎನ್ನುವ ಪ್ರಶ್ನೆ ಕೂಡ ಮೂಡಿತ್ತು.
Advertisement
ಈ ಕುರಿತು ಸ್ವತಃ ಶಿವರಾಜ್ ಕುಮಾರ್ ಅವರ ಸ್ಪಷ್ಟನೆ ನೀಡಿದ್ದಾರೆ. ಟಗರು 2 ಸಿನಿಮಾ ಮಾಡಬೇಕು ಎನ್ನುವುದು ಈ ಹಿಂದೆಯೇ ನಿರ್ಧಾರವಾಗಿತ್ತು. ನಿರ್ದೇಶಕ ಸೂರಿ ಅವರು ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಬ್ಯುಸಿಯಾದರು. ಟಗರು ಕಾನ್ಸೆಪ್ಟ್ ಸೂರಿ (Suri) ಅವರ ಕಲ್ಪನೆ. ಅದನ್ನು ಅವರೇ ಮಾಡಬೇಕು. ಬ್ಯಾಡ್ ಮ್ಯಾನರ್ಸ್ ನಂತರ ಭೇಟಿ ಮಾಡುವುದಾಗಿ ಹೇಳಿದ್ದಾರೆ. ಅವರೇ ಆ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ:ಮಳೆ, ಕೊರೆವ ಚಳಿ ನಡುವೆ ಕಾಶ್ಮೀರದಲ್ಲಿ ಸಾನ್ಯ ಟ್ರೆಕ್ಕಿಂಗ್
Advertisement
Advertisement
ಈ ಹಿಂದೆ ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಟಗರು ಸಿನಿಮಾ ಶಿವರಾಜ್ ಕುಮಾರ್ ವೃತ್ತಿ ಬದುಕಿಗೆ ವಿಭಿನ್ನ ಚಿತ್ರ ಎನಿಸಿತ್ತು. ಈ ಸಿನಿಮಾದಲ್ಲಿ ಶಿವಣ್ಣ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದರು. ಡಾಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದರು. ಇಂತಹ ಸಿನಿಮಾದ ಮುಂದುವರೆದ ಭಾಗ ಮುಂದೆ ಬರಲಿದೆ.
Advertisement
ಪೋಸ್ಟರ್ ನಲ್ಲಿ ಸೂರಿ ಹೆಸರು ಹಾಕದೇ ಇದ್ದರೂ, ಟಗರಿನೊಂದಿಗೆ ಶಿವಣ್ಣ ಇರುವ ಪೋಸ್ಟರ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಟಗರು ಸಿನಿಮಾವನ್ನು ನಿರ್ಮಾಣ ಮಾಡಿದ್ದ ಕೆ.ಪಿ ಶ್ರೀಕಾಂತ್ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದು, ಲಹರಿ ಫಿಲ್ಮ್ಸ್ ಕೂಡ ಕೈ ಜೋಡಿಸಿದೆ. ಮುಂದಿನ ದಿನಗಳಲ್ಲಿ ಈ ಚಿತ್ರದ ಕುರಿತು ಮತ್ತಷ್ಟು ಮಾಹಿತಿ ಸಿಗಬಹುದು.
ಮೊನ್ನೆ ಶಿವರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ (Birthday) ಹಲವಾರು ಚಿತ್ರಗಳು ಘೋಷಣೆ ಆಗಿವೆ. ಅದರಲ್ಲೂ ಮೂರು ಮಲ್ಟಿಸ್ಟಾರ್ ಚಿತ್ರಗಳು ಘೋಷಣೆ ಆಗುವ ಮೂಲಕ ಕುತೂಹಲ ಮೂಡಿಸುತ್ತಿವೆ. ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಗಣೇಶ್, ಪ್ರಭುದೇವ, ಉಪೇಂದ್ರ, ರಾಜ್ ಬಿ ಶೆಟ್ಟಿ, ಅಜಯ್ ರಾವ್ ಅವರು ನಟಿಸುತ್ತಿರುವುದು ಮತ್ತಷ್ಟು ಕಾಯುವಂತೆ ಮಾಡಿವೆ.
Web Stories