ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ (Roger Binny) ಬಿಸಿಸಿಐ (BCCI) ಅಧ್ಯಕ್ಷರಾದ ಬಳಿಕ ಕೆಎಸ್‍ಸಿಎ ಅಧ್ಯಕ್ಷ ಹುದ್ದೆ ಖಾಲಿಯಾಗಿದೆ. ಇದೀಗ ಮುಂದಿನ ಕೆಎಸ್‍ಸಿಎ ಅಧ್ಯಕ್ಷ ಯಾರು ಎಂಬ ಕುತೂಹಲ ಮೂಡಿದೆ.
Advertisement
2019ರಲ್ಲಿ ಪೂರ್ಣ ಬಹುಮತದೊಂದಿಗೆ ಕೆಎಸ್‍ಸಿಎ ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ ಇದೀಗ ಬಿಸಿಸಿಐ ಅಧ್ಯಕ್ಷರಾದ ಬಳಿಕ ಕೆಎಸ್‍ಸಿಎ ಅಧ್ಯಕ್ಷೀಯ ಪಟ್ಟಕ್ಕೆ ಪೈಪೋಟಿ ಇದೆ. ಮುಂದಿನ ವಾರದಲ್ಲಿ ಚುನಾವಣೆ ನಡೆದು ಅಧ್ಯಕ್ಷರ ಆಯ್ಕೆ ಸಾಧ್ಯತೆ ಇದೆ ಎಂದು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಆ ಎರಡು ವಿಷಯಗಳ ಕುರಿತು ನಾನು ಗಂಭೀರವಾಗಿ ಚಿಂತಿಸಿದ್ದೇನೆ: ರೋಜರ್ ಬಿನ್ನಿ
Advertisement
Advertisement
ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಬಿಸಿಸಿಐ ಅಧ್ಯಕ್ಷರಾದ ರೋಜರ್ ಬಿನ್ನಿಗೆ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೂ ಮುನ್ನ ಆಡಳಿತ ಮಂಡಳಿ ಸಭೆ ನಡೆಯುವ ಸಾಧ್ಯತೆ ಇದೆ. ಇಂದಿನ ಸಭೆಯಲ್ಲಿ ಯಾರು ನೂತನ ಬಾಸ್ ಎನ್ನುವ ನಿರ್ಧಾರವಾಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: AisaCup ಕ್ರಿಕೆಟ್‌ಗೆ ಭಾರತ ಪಾಕಿಸ್ತಾನಕ್ಕೆ ಹೋಗಲ್ಲ: BCCI ಅಧಿಕೃತ ಪ್ರಕಟ
Advertisement
ಸದ್ಯಕ್ಕೆ ಹಂಗಾಮಿ ಅಧ್ಯಕ್ಷರ ನೇಮಕ ಮಾಡುವ ನಿರೀಕ್ಷೆ ಇದ್ದು, ಮುಂದಿನ ಒಂದು ವಾರದೊಳಗೆ ಚುನಾವಣೆ ನಡೆದು ನೂತನ ಅಧ್ಯಕ್ಷರ ಆಯ್ಕೆ ನಡೆಯುವ ಸಾಧ್ಯತೆ ಹೆಚ್ಚಿದೆ. ಅಧ್ಯಕ್ಷ ಹುದ್ದೆಗೆ ಸದ್ಯ ಕೆಎಸ್‍ಸಿಎ ಖಜಾಂಜಿಯಾಗಿರುವ ವಿನಯ್ ಮೃತ್ಯುಂಜಯ ಅವರ ಹೆಸರು ಮುಂಚೂಣಿಯಲ್ಲಿದೆ. ವಿನಯ್ ಕಳೆದ ಕೆಲ ವರ್ಷಗಳಿಂದ ಕೆಎಸ್‍ಸಿಎ ಆಡಳಿತದಲ್ಲಿ ಸಕ್ರಿಯರಾಗಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಹಾಗಾಗಿ ಅವರಿಗೆ ಅಧ್ಯಕ್ಷ ಪಟ್ಟ ಕಟ್ಟುವ ಸಾಧ್ಯತೆ ಇದೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ.