ನವದೆಹಲಿ: ಮಾಸ್ಟರ್ ಕಾರ್ಡ್‍ನ ಮಾಜಿ ಸಿಇಒ ಅಜಯ್ ಬಂಗಾ (Ajay Banga) ಅವರ ಹೆಸರನ್ನು ವಿಶ್ವಬ್ಯಾಂಕ್ (World Bank) ಅಧ್ಯಕ್ಷ ಸ್ಥಾನಕ್ಕೆ ಜೋ ಬೈಡನ್ (Joe Biden) ನೇತೃತ್ವದ ಅಮೆರಿಕ ಸರ್ಕಾರ ನಾಮನಿರ್ದೇಶನ ಮಾಡಿದೆ.
187 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಬಂಗಾ ಅವರು ಆಯ್ಕೆಯಾದರೆ ಈ ಹುದ್ದೆ ಅಲಂಕರಿಸಿದ ಪ್ರಥಮ ಅನಿವಾಸಿ ಭಾರತೀಯ (NRI) ವ್ಯಕ್ತಿಯಾಗಲಿದ್ದಾರೆ. ಟ್ರಂಪ್ ಆಡಳಿತದಲ್ಲಿ ನೇಮಕಗೊಂಡ ಹಾಲಿ ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ಪಾಸ್ ಅವರ ಅವಧಿ ಈ ವರ್ಷದ ಜೂನ್‍ಗೆ ಅಂತ್ಯವಾಗಲಿದೆ
Advertisement
Advertisement
ಯಾರು ಈ ಅಜಯ್ ಬಂಗಾ?
ಮಹಾರಾಷ್ಟ್ರದ ಪುಣೆಯಲ್ಲಿ 1959ರ ನವೆಂಬರ್ 10 ರಂದು ಜನಿಸಿದ ಅಜಯ್ ಬಂಗಾ ಅವರ ತಂದೆ ಹರ್ಭಜನ್ ಸಿಂಗ್ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದನ್ನೂ ಓದಿ: ನೀವು NRI?- ಪ್ರಶ್ನೆಗೆ ನಾನು HRI ಎಂದ ಆನಂದ್ ಮಹೀಂದ್ರಾಗೆ ಭಾರತೀಯರ ಚಪ್ಪಾಳೆ
Advertisement
ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಅವರು ಮುಂದೆ ಅಹಮದಾಬಾದ್‌ನ ಐಐಎಂನಲ್ಲಿ ಎಂಬಿಎ ಓದಿದ್ದಾರೆ. ಶಿಕ್ಷಣದ ಬಳಿಕ ನೆಸ್ಲೆಇಂಡಿಯಾ ಹಾಗೂ ಸಿಟಿಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ್ದ ಇವರು 1996ರಲ್ಲಿ ಅಮೆರಿಕಕ್ಕೆ ತೆರಳಿ ಪೆಪ್ಸಿಕೋ ಕಂಪನಿಯಲ್ಲಿ 13 ವರ್ಷ ಸೇವೆ ಸಲ್ಲಿಸಿದ್ದರು. 2009ರಲ್ಲಿ ಅಧ್ಯಕ್ಷರಾಗಿ ಮಾಸ್ಟರ್‌ಕಾರ್ಡ್ ಕಂಪನಿ ಸೇರಿ ಬಳಿಕ ಅದರ ಸಿಇಒ ಆದರು. 2016ರಲ್ಲಿ ಮೋದಿ ನೇತೃತ್ವದ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
Advertisement
ಪ್ರಸ್ತುತ ಜನರಲ್ ಅಟ್ಲಾಂಟಿಕ್ ಕಂಪನಿಯ ಉಪಾಧ್ಯಕ್ಷರಾಗಿರುವ ಅಜಯ್ ಬಂಗಾ ಅವರು ಒಟ್ಟು 30 ವರ್ಷಗಳ ವ್ಯಾಪಾರ ಅನುಭವವನ್ನು ಹೊಂದಿದ್ದಾರೆ. ಬಂಗಾ ಅವರು ಸತತ 12 ವರ್ಷಗಳ ಕಾಲ ಮಾಸ್ಟರ್ ಕಾರ್ಡ್‍ನಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸಿ 2021ನೇ ಡಿಸೆಂಬರ್‌ನಲ್ಲಿ ಹುದ್ದೆಯಿಂದ ಕೆಳಗಿಳಿದಿದ್ದರು.
ಸಾಕಷ್ಟು ಪರಿಣತಿಯನ್ನು ಹೊಂದಿರುವ ಬಂಗಾ ಅವರು ಅಮೆರಿಕ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ. ಫೆಬ್ರವರಿ 2015ರಲ್ಲಿ ವ್ಯಾಪಾರ ನೀತಿ ಮತ್ತು ಮಾತುಕತೆಗಳ ಸಲಹಾ ಮಂಡಳಿಯ ಅಧ್ಯಕ್ಷರನ್ನಾಗಿ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ನೇಮಿಸಿದ್ದರು.
ವಿಶ್ವಕ್ಕೆ ಈಗ ಮಹಾಘಟಬಂಧನ್ ಅಗತ್ಯವಿದೆ. ಎರಡು ದೊಡ್ಡ ಪ್ರಜಾಪ್ರಭುತ್ವ ದೇಶಗಳಾದ ಭಾರತ ಮತ್ತು ಅಮೆರಿಕ ಇದಕ್ಕೆ ಕೊಡುಗೆ ನೀಡಬಹುದು ಎಂದು ಈ ಹಿಂದೆ ಬಂಗಾ ತಿಳಿಸಿದ್ದರು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k