ವಾಷಿಂಗ್ಟನ್: ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ 40ನೇ ವಾರ್ಷಿಕೋತ್ಸವ ಸ್ಪರ್ಧೆಯಲ್ಲಿ ವರ್ಜೀನಿಯಾದ 18ರ ಯುವತಿ (ಭಾರತೀಯ ಅಮೆರಿಕನ್) ಆರ್ಯ ವಾಲ್ವೇಕರ್ `ಮಿಸ್ ಇಂಡಿಯಾ USA-2022′ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಯುಎಸ್‌ನ 30 ರಾಜ್ಯಗಳಿಂದ 74 ಸ್ಪರ್ಧಿಗಳು ಮಿಸ್ ಇಂಡಿಯಾ ಯುಎಸ್‌ಎ, ಮಿಸೆಸ್ ಇಂಡಿಯಾ ಯುಎಸ್‌ಎ ಹಾಗೂ ಮಿಸ್ ಟೀನ್ ಇಂಡಿಯಾ ಯುಎಸ್‌ಎ ವಿಭಾಗಗಳಲ್ಲಿ ಭಾಗವಹಿಸಿದ್ದರು. ವಾಷಿಂಗ್ಟನ್‌ನ ಅಕ್ಷಿ ಜೈನ್ ಮಿಸೆಸ್ ಇಂಡಿಯಾ ಯುಎಸ್‌ಎ, ನ್ಯೂಯಾರ್ಕ್ನ ತನ್ವಿ ಗ್ರೂವರ್ ಮಿಸ್ ಟೀನ್ ನ್ಯೂಯಾರ್ಕ್ ಕಿರೀಟ ಧರಿಸಿದರೆ ಭಾರತೀಯ ಅಮೆರಿಕನ್ನರಾದ ವಾಲ್ಟೇಕರ್ ಮಿಸ್ ಇಂಡಿಯಾ ಕಿರೀಟ ಧರಿಸಿದ್ದಾರೆ. ಇದನ್ನೂ ಓದಿ: 9 ವರ್ಷಗಳ ಹಿಂದೆ ಕಿಡ್ನ್ಯಾಪ್ ಆಗಿದ್ದ ಬಾಲಕಿ ಪೋಸ್ಟರ್ ಸಹಾಯದಿಂದ ಹೆತ್ತವರ ಮಡಿಲಿಗೆ
- Advertisement
- Advertisement
ಈ ವೇಳೆ ತನ್ನ ಖುಷಿಯನ್ನು ಹಂಚಿಕೊಂಡಿರುವ ವಾಲ್ಟೇಕರ್, `ನನ್ನನ್ನು ಬೆಳ್ಳಿ ತೆರೆಯಲ್ಲಿ ನೋಡುವುದು, ಚಲನಚಿತ್ರ ಹಾಗೂ ಟಿವಿಯಲ್ಲಿ ಕೆಲಸ ಮಾಡುವುದು ನನ್ನ ಕನಸಾಗಿತ್ತು’ ಎಂದು ಅವರು ಹೇಳಿಕೊಂಡಿದ್ದಾರೆ. ಈ ಕುರಿತ ಫೋಟೋಗಳನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಪಂಚದಾದ್ಯಂತ ಇರುವ ಭಾರತೀಯ ಸಮುದಾಯಕ್ಕೆ, ಅವರು ನೀಡಿದ ಸಹಕಾರಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: CWG 2022: ಟ್ರಿಪಲ್ ಜಂಪ್‍ನಲ್ಲಿ ಡಬಲ್ ಧಮಾಕ – ಎಲ್ದೋಸ್ ಪೌಲ್‍ಗೆ ಚಿನ್ನ, ಅಬ್ದುಲ್ಲಾ ಅಬೂಬಕರ್‌ಗೆ ಕಂಚು
ಯಾರಿದು ವಾಲ್ಟೇಕರ್?
ವರ್ಜೀನಿಯಾದ ಬ್ರಿಯಾರ್ ವುಡ್ಸ್ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ ಆರ್ಯ ವಾಲ್ವೇಕರ್ 18 ವರ್ಷದ ಯುವತಿ. ಈಕೆ ವಿವಿಧ ಜಾಗೃತಿ ಅಭಿಯಾನಗಳನ್ನ ಮಾಡಿದ್ದು, ಟಿಇಡಿಎಕ್ಸ್ ಕಾರ್ಯಕ್ರಮಗಳಲ್ಲಿ ಆರೋಗ್ಯಕರ ಮರುಚಿಂತನೆಯ ಉಪನ್ಯಾಸ ನೀಡಿದ್ದಾರೆ. ಯುಫೋರಿಯಾ ಡ್ಯಾನ್ಸ್ ಸ್ಟುಡಿಯೋದ ಸಂಸ್ಥಾಪಕರಾಗಿರುವ ವಾಲ್ವೇಕರ್, ಸ್ಥಳೀಯ ಮಕ್ಕಳಿಗೆ ಕಡಿಮೆ ಶುಲ್ಕದಲ್ಲೇ ನೃತ್ಯ ಹೇಳಿಕೊಡುತ್ತಿದ್ದಾರೆ.
18 ವರ್ಷದ ವಾಲ್ವೇಕರ್ ಶಾಲೆ ಮತ್ತು ಸಮುದಾಯ ರಂಗಭೂಮಿ ಚಟುವಟಿಕೆಗಳಲ್ಲೂ ಭಾಗವಹಿಸಿದ್ದಾರೆ. ಮಕ್ಕಳ ನಾಟಕಗಳಿಗೆ ನಿರ್ದೇಶಕರಾಗಿ ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದಾರೆ. ಅಡುಗೆ ಮಾಡುವುದು, ಚರ್ಚೆ ಮಾಡುವುದು ಇವರ ಹವ್ಯಾಸವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.