LatestLeading NewsMain PostSports

CWG 2022: ಟ್ರಿಪಲ್ ಜಂಪ್‍ನಲ್ಲಿ ಡಬಲ್ ಧಮಾಕ – ಎಲ್ದೋಸ್ ಪೌಲ್‍ಗೆ ಚಿನ್ನ, ಅಬ್ದುಲ್ಲಾ ಅಬೂಬಕರ್‌ಗೆ ಬೆಳ್ಳಿ

ಲಂಡನ್: ಕಾಮನ್‍ವೆಲ್ತ್ ಕ್ರೀಡಾಕೂಟದ ಪುರುಷರ ಟ್ರಿಪಲ್ ಜಂಪ್‍ನಲ್ಲಿ ಭಾರತಕ್ಕೆ ಒಂದೇ ಇವೆಂಟ್‍ನಲ್ಲಿ 2 ಪದಕ ಸಿಕ್ಕಿದೆ. ಎಲ್ದೋಸ್ ಪೌಲ್ ಚಿನ್ನದ ಪದಕ ಗೆದ್ದರೆ, ಅಬ್ದುಲ್ಲಾ ಅಬೂಬಕರ್ ಬೆಳ್ಳಿ ಪದಕ ತನ್ನದಾಗಿಸಿಕೊಂಡರು.

ಫೈನಲ್‍ನಲ್ಲಿ ಎಲ್ದೋಸ್ ಪೌಲ್ 17.03 ಮೀ. ಹಾರಿ ಚಿನ್ನದ ನೆಗೆ ಬೀರಿದರೆ, ಅಬ್ದುಲ್ಲಾ ಅಬೂಬಕರ್ 17.02 ಮೀ. ಹಾರಿ ಬೆಳ್ಳಿ ಪದಕ ಗೆದ್ದರು. ಈ ನಡುವೆ ಚಿನ್ನಗೆದ್ದ ಎಲ್ಡೋಸ್ ಪೌಲ್‍ಗಿಂತ ಬೆಳ್ಳಿಗೆದ್ದ ಅಬ್ದುಲ್ಲಾ ಅಬೂಬಕರ್ ನೆಗೆತ ಕೇವಲ 1 ಮೀ. ಅಂತರ ಕಂಡುಬಂದಿದ್ದು ವಿಶೇಷವಾಗಿತ್ತು. ಈ ಮೂಲಕ ಭಾರತದ ಟ್ರಿಪಲ್‌ ಜಂಪ್‌ ಸ್ಪರ್ಧಿಗಳು 22ನೇ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಇತಿಹಾಸ ಬರೆದಿದ್ದಾರೆ. ಟ್ರಿಪಲ್‌ ಜಂಪ್‌ನಲ್ಲಿ ಮೂರು ಪದಕಗಳು ಭಾರತದ ಪಾಲಾಗುವ ಸಾಧ್ಯತೆ ಇತ್ತು. ಆದರೆ ಪ್ರವೀಣ್ ಚಿತ್ರವೇಲ್ 16.89 ಮೀ. ಹಾರಿ ಕಂಚಿನ ಪದಕದಿಂದ ವಂಚಿರಾದರು. ಜಹ್-ನ್ಹೈ ಪೆರಿಚೀಫ್ 16.92 ಮೀ. ಹಾರಿ ಕಂಚು ಗೆದ್ದರು. ಇದನ್ನೂ ಓದಿ: CWG-2022: ಭಾರತಕ್ಕೆ ಚಿನ್ನದ ಕಿಕ್ ಕೊಟ್ಟ ಬಾಕ್ಸರ್ಸ್, ಸಿಂಧು ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ

10ನೇ ದಿನದ ಆರಂಭದಲ್ಲಿ ಭಾರತದ ಹಾಕಿ ತಂಡ ಕಂಚಿನ ಪದಕದ ಬೇಟೆಯೊಂದಿಗೆ ಆರಂಭಗೊಂಡ ಪದಕ ಬೇಟೆಗೆ ಬಾಕ್ಸರ್‌ಗಳು 2 ಚಿನ್ನದ ಪದಕ ಗೆದ್ದು ಮೆರುಗು ಹೆಚ್ಚಿಸಿದ್ದಾರೆ. ಈ ಮೂಲಕ ಕೂಟದಲ್ಲಿ ಭಾರತ 16 ಚಿನ್ನ, 12 ಬೆಳ್ಳಿ, 17 ಕಂಚಿನ ಪದಕ ಸೇರಿ ಒಟ್ಟು 45 ಪದಕ ಬಾಚಿಕೊಂಡಿದೆ. ಇದನ್ನೂ ಓದಿ: ಮಹಿಳೆಯರ ಹಾಕಿಯಲ್ಲಿ ರೋಚಕ ಕಾದಾಟ – ಪೆನಾಲ್ಟಿ ಶೂಟೌಟ್‍ನಲ್ಲಿ ಗೆದ್ದು ಕಂಚು ಮುಡಿಗೇರಿಸಿಕೊಂಡ ಭಾರತ

Live Tv

Leave a Reply

Your email address will not be published.

Back to top button