ತುಮಕೂರು: ಉದಯ್‌ನಿಧಿ ಸ್ಟಾಲಿನ್ (Udhayanidhi Stalin) ಬಳಿಕ ಈಗ ಗೃಹ ಸಚಿವ ಜಿ. ಪರಮೇಶ್ವರ್ (G Parameshwara) ಅವರು ಹಿಂದೂ ಧರ್ಮದ (Hinduism) ಮೂಲ ಕೆದಕಿದ್ದಾರೆ. ಹಿಂದೂ ಧರ್ಮ ಯಾವಾಗ ಹುಟ್ಟಿತ್ತು, ಅದನ್ನು ಯಾರು ಹುಟ್ಟಿಸಿದ್ರು ಅನ್ನೋದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ತಮ್ಮ ಸ್ವಕ್ಷೇತ್ರ ಕೊರಟಗೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಪಂಚದ ಇತಿಹಾಸದಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಬೌದ್ಧ ಧರ್ಮ ನಮ್ಮ ದೇಶದಲ್ಲಿ ಹುಟ್ಟಿತ್ತು. ಜೈನ ಧರ್ಮ ನಮ್ಮ ದೇಶದಲ್ಲಿ ಹುಟ್ಟಿತ್ತು. ಆದರೆ ಹಿಂದೂ ಧರ್ಮವನ್ನು ಹುಟ್ಟಿಸಿದವರು ಯಾರು ಅನ್ನೋದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ ಎಂದಿದ್ದಾರೆ. ಇದನ್ನೂ ಓದಿ: ಹಿಂದೂ ಹೆಸರನ್ನು ನೀಡಿದವರೇ ವಿದೇಶಿಯರು: ಅಧೀರ್ ರಂಜನ್ ಚೌಧರಿ
ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಹೊರಗಡೆಯಿಂದ ಬಂದಿದೆ. ಹಿಂದೂ ಧರ್ಮ ಮಾತ್ರ ಯಾವಾಗ ಹುಟ್ಟಿತು ಅನ್ನೋದು ಗೊತ್ತೇ ಇಲ್ಲ ಎಂದಿದ್ದಾರೆ. ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಪ್ರಸ್ತಾಪಿಸಿ ವಿವಾದವನ್ನು ಎಳೆದುಕೊಂಡಿದ್ದಾರೆ. ಇದನ್ನೂ ಓದಿ: ಪಾಕ್ ಪರ ಇರುವವರ ಮತಕ್ಕಾಗಿ ಸನಾತನ ಧರ್ಮದ ವಿರುದ್ಧ ಮಾತು: ಮುನಿಸ್ವಾಮಿ ವಾಗ್ದಾಳಿ
Web Stories