ಬಿಗ್‌ಬಾಸ್ (Bigg Boss) ಕನ್ನಡ ಸೀಸನ್ 12ರ ಕೊನೆಯ ವಾರದ ಅಖಾಡದಲ್ಲಿ ಸ್ಪರ್ಧಿಗಳು ಹಣಾಹಣಿ ನಡೆಸುತ್ತಿದ್ದಾರೆ. ಈ ವಾರ ಮನೆಯಿಂದ ಹೊರಬಂದಿರೋ ರಾಶಿಕಾ (Rashika) ಟಾಪ್ 5 ಫೈನಲಿಸ್ಟ್‌ಗಳ ಹೆಸರನ್ನು ಹೇಳಿದ್ದಾರೆ
ಫಿನಾಲೆ ವಾರದ ಮುನ್ನ ಮನೆಯಿಂದ ಹೊರಬಂದಿರೋ ಸ್ಪರ್ಧಿ ರಾಶಿಕಾ ಪ್ರಕಾರ ಗಿಲ್ಲಿ ನಟ ಈ ಸೀಸನ್ ಗೆಲ್ಲಲಿದ್ದಾರಂತೆ. ಎರಡನೇ ಸ್ಥಾನದಲ್ಲಿ ಅಶ್ವಿನಿ ಗೌಡ, ಮೂರನೇ ಸ್ಥಾನದಲ್ಲಿ ಧನುಷ್ ಇದ್ರೆ, ನಾಲ್ಕನೇ ಸ್ಥಾನವನ್ನು ರಕ್ಷಿತಾಗೆ ನೀಡಿದ್ದಾರೆ ರಾಶಿಕಾ. ಇನ್ನು ಐದನೇ ಸ್ಥಾನದಲ್ಲಿ ರಘು ಇರ್ತಾರೆ ಎಂದಿದ್ದಾರೆ ಮನದ ಕಡಲು ಬೆಡಗಿ. ಇದನ್ನೂ ಓದಿ: ಬಿಗ್‌ಬಾಸ್ ಮನೆಗೆ ಮತ್ತೆ ಮರಳಿದ ಮಲ್ಲಮ್ಮ – ಧ್ರುವಂತ್‌ಗೆ ಶಾಕ್
ಈಗಾಗ್ಲೇ ಮನೆಯಿಂದ ಎಲಿಮನೇಟ್ ಆಗಿ ಹೊರ ಬಂದಿರೋ ಸ್ಪರ್ಧಿಗಳ ಪ್ರಕಾರ ಗಿಲ್ಲಿಯೇ ಈ ಸಲ ಕಪ್ ಗೆಲ್ಲೋ ಸ್ಪರ್ಧಿ ಎಂಬ ಹೆಚ್ಚಿನ ಅಭಿಪ್ರಾಯ ಬಂದಿದೆ. ಇದೀಗ ಕಿಚ್ಚನ ಕಡೆಯ ಪಂಚಾಯ್ತಿಯಲ್ಲಿ ದೊಡ್ಮನೆಯಿಂದ ಹೊರಬಂದಿರೋ ಸ್ಪರ್ಧಿ ರಾಶಿಕಾ ಶೆಟ್ಟಿ ಕೂಡ ಗಿಲ್ಲಿಯೇ ಸೀಸನ್ ಗೆಲ್ಲುವ ಸ್ಪರ್ಧಿ ಎಂದಿದ್ದಾರೆ.
ವೈಯಕ್ತಿಕವಾಗಿ ರಾಶಿಕಾಗೆ ಧನುಷ್ ಗೆಲ್ಲಬೇಕೆಂಬ ಆಸೆ ಇದೆಯಂತೆ. ಆದರೆ ಮನೆಯಿಂದ ಹೊರಬಂದ ಬಳಿಕ ಗಿಲ್ಲಿಗೆ ಇರುವ ದೊಡ್ಡ ಫ್ಯಾನ್ಸ್ ಫಾಲೋವರ್ಸ್ ನೋಡುತ್ತಿದ್ದರೆ ಗಿಲ್ಲಿಯೇ ಗೆಲ್ಲುವ ಸೂಚನೆ ಇದೆ ಎಂದಿದ್ದಾರೆ. ಟಾಸ್ಕ್‌ಗಳನ್ನ ಆಡಿಕೊಂಡು ಬಂದಿರುವ ಧನುಷ್ ಅಸಲಿಯಾಗಿ ಗೆಲ್ಲಬೇಕಿರೋ ಕಂಟೆಸ್ಟಂಟ್ ಎಂದು ʻಪಬ್ಲಿಕ್ ಟಿವಿʼಯ ಸಂದರ್ಶನದಲ್ಲಿ ರಾಶಿಕಾ ಹೇಳಿಕೊಂಡಿದ್ದಾರೆ.ಇದನ್ನೂ ಓದಿ: BBK 12 | ಫಿನಾಲೆ ವಾರಕ್ಕೆ ಕೊನೆಯ ಸ್ಪರ್ಧಿಯಾಗಿ ರಘು ಎಂಟ್ರಿ – ರಾಶಿಕಾ ಔಟ್

