ಇಲ್ಲಿ ಯಾರ್ಯಾರು ಮದ್ಯ ಕುಡಿಯುತ್ತೀರಿ- ರಾಹುಲ್ ಗಾಂಧಿ ಪ್ರಶ್ನೆಗೆ ಕೈ ನಾಯಕರು ಕಕ್ಕಾಬಿಕ್ಕಿ!

Public TV
2 Min Read
RAHUL GANDHI

ನವದೆಹಲಿ: ಕಾಂಗ್ರೆಸ್ ಪಕ್ಷದ ಸದಸ್ಯರು ಮದ್ಯಪಾನ ತ್ಯಜಿಸಬೇಕು, ಖಾದಿ ಬಟ್ಟೆ ತೊಡಬೇಕು ಎಂಬ ಹಳೆಯ ನಿಯಮಗಳ ಬಗ್ಗೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮತ್ತೆ ಪ್ರಸ್ತಾಪಿಸಲಾಯಿತು. ಈ ಪ್ರಸ್ತಾಪವು ಸಭೆಯಲ್ಲಿ ಪಾಲ್ಗೊಂಡಿದ್ದ ಹಲವರ ಕೆಂಗಣ್ಣಿಗೂ ಗುರಿಯಾಯಿತು.

ರಾಹುಲ್ ಗಾಂಧಿ ಅವರು ಇದೇ ವಿಚಾರವನ್ನು 2007ರಲ್ಲಿ ಪ್ರಸ್ತಾಪಿಸಿದ್ದರು. ಪಕ್ಷದ ಸದಸ್ಯತ್ವ ಅಭಿಯಾನಕ್ಕಾಗಿ ನಡೆದ ಸಭೆಯಲ್ಲಿ ಮತ್ತೆ ಪ್ರಸ್ತಾಪಿಸಿದರು. ಇದನ್ನು ಓದಿ: ಯಾರನ್ನೋ ಮೆಚ್ಚಿಸಲು ಜಮೀರ್ ಮಾತಾಡ್ತಿದ್ದು, ಮುಂದುವರಿಸಿಕೊಂಡು ಹೋದ್ರೆ ನಗೆಪಾಟಲಾಗುತ್ತೆ: ನಿಖಿಲ್

“ಇಲ್ಲಿ ಯಾರ್ಯಾರು ಮದ್ಯಪಾನ ಮಾಡುವವರಿದ್ದೀರಿ” ಎಂದು ಸಭೆಗೆ ಆಗಮಿಸಿದ್ದ ನಾಯಕರನ್ನು ರಾಹುಲ್ ಗಾಂಧಿ ಪ್ರಶ್ನಿಸಿದರು. ಈ ಪ್ರಶ್ನೆ ಅನೇಕ ಸದಸ್ಯರ ಮುಜುಗರಕ್ಕೆ ಕಾರಣವಾಯಿತು. ಈ ವೇಳೆ ಮೌನ ಮುರಿದ ನವಜೋತ್ ಸಿಂಗ್ ಸಿಧು, “ನಮ್ಮ ರಾಜ್ಯದಲ್ಲಿ ಬಹುಪಾಲು ಮಂದಿ ಮದ್ಯಪಾನ ಮಾಡುತ್ತಾರೆ” ಎಂದು ಹೇಳಿದರು.

RAHUL GANDHI

ಈ ರೀತಿಯ ನಿಯಮಗಳನ್ನು ಕಾರ್ಯಕಾರಿ ಸಮಿತಿಯಿಂದ ಮಾತ್ರ ಬದಲಾಯಿಸಬಹುದು. ಆದರೆ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಮತ್ತು ಮಹಾತ್ಮ ಗಾಂಧಿ ಅವರ ಕಾಲದಿಂದಲೂ ಮದ್ಯಪಾನ ಮಾಡಬಾರದು ಎಂಬ ನಿಯಮವು ಪುಸ್ತಕಗಳಲ್ಲಿ ಉಳಿದಿದೆ. ಈ ನಿಯಮದ ಪ್ರಸ್ತುತತೆ ಮತ್ತು ಪ್ರಾಯೋಗಿಕ ಅಂಶವನ್ನು 2007ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ರಾಹುಲ್ ಗಾಂಧಿ ಪ್ರಶ್ನಿಸಿದ್ದರು.

ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 1ರಿಂದ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಆರಂಭವಾಗಲಿದ್ದು, ಸದಸ್ಯತ್ವ ಅರ್ಜಿಗಳಲ್ಲಿ ಮದ್ಯಪಾನದ ಕುರಿತು ಸಹ ಮಾಹಿತಿ ನೀಡಬೇಕಿದೆ. ಇದನ್ನು ಓದಿ: ಅಲ್ಪಸಂಖ್ಯಾತ ಮುಖಂಡರನ್ನ ರಾಜ್ಯಾಧ್ಯಕ್ಷರನ್ನಾಗಿ ಘೋಷಣೆ ಮಾಡಲಿ – ಸಿದ್ದರಾಮಯ್ಯಗೆ ಶ್ರೀರಾಮುಲು ಸವಾಲು

ಪಕ್ಷದ ಸದಸ್ಯರಾಗ ಬಯಸುವವರು ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆಯನ್ನು ವಿಸರ್ಜಿಸುವುದು ಸೇರಿದಂತೆ 10 ಅಂಶಗಳನ್ನು ಸದಸ್ಯತ್ವ ಅರ್ಜಿಯು ಒಳಗೊಂಡಿದೆ. ಹೊಸ ಸದಸ್ಯರು ಪಕ್ಷದ ನಿಯಮಗಳು ಹಾಗೂ ಕಾರ್ಯಕ್ರಮಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಟೀಕಿಸುವಂತಿಲ್ಲ ಎಂಬ ಷರತ್ತು ಕೂಡ ಇದೆ.

ALCOHOL

“ಮುದ್ರಣ ಹಾಗೂ ಡಿಜಿಟಲ್ ರೂಪದಲ್ಲಿ ಸದಸ್ಯತ್ವದ ಅರ್ಜಿಗಳು ಲಭ್ಯವಿವೆ. ದೇಶಾದ್ಯಂತ ಸದಸ್ಯರಾಗಬಯಸುವವರಿಗೆ ಅಗತ್ಯ ತರಬೇತಿ ಕೂಡ ನೀಡಲಾಗುವುದು” ಎಂದು ಪಕ್ಷದ ಹಿರಿಯ ನಾಯಕ ರಂದೀಪ್ ಸುರ್ಜೇವಾಲ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

“ದೇಶವ್ಯಾಪಿ ತಳಮಟ್ಟದಿಂದಲೂ ಈ ಆಂದೋಲನ ನಡೆಯಬೇಕಿದೆ. ಇದನ್ನು ನವೆಂಬರ್ 14ರಿಂದ ಆರಂಭಿಸಲಾಗುವುದು” ಎಂದು ರಾಹುಲ್ ಗಾಂಧಿ ಅವರು ಸಭೆಯಲ್ಲಿ ತಿಳಿಸಿದ್ದಾರೆಂದು ಸುರ್ಜೇವಾಲ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *