ಬೆಳಗಾವಿ (ಚಿಕ್ಕೋಡಿ): ಕುಡಿಯುವ ನೀರು ತರಲು ಹೋಗಿದ್ದ ತಾಯಿ ಮಗಳಿಬ್ಬರು ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರು ಗ್ರಾಮದಲ್ಲಿ ನಡೆದಿದೆ.
ಕಮತನೂರು ಗ್ರಾಮದ ಭಾರತಿ ಮನೋಹರ ಕಮತೆ (45), ಶ್ರೀದೇವಿ ಮನೋಹರ ಕಮತೆ (21) ಮೃತ ದುರ್ದೈವಿಗಳು. ಇಂದು ಬೆಳಗ್ಗೆ ಮನೆಬಳಿ ಇದ್ದ ಬಾವಿಯಿಂದ ಕುಡಿಯುವ ನೀರು ತರಲು ತಾಯಿ ಭಾರತಿ ಹಾಗೂ ಮಗಳು ಶ್ರೀದೇವಿ ಹೋಗಿದ್ದರು.
ನೀರು ಸೇದುತ್ತಿದ್ದ ವೇಳೆ ಆಯ ತಪ್ಪಿ ಮಗಳು ಬಾವಿಗೆ ಬಿದ್ದಿದ್ದಾಳೆ. ತಕ್ಷಣ ಮಗಳನ್ನು ರಕ್ಷಿಸಲು ಹೋಗಿ ತಾಯಿ ಕೂಡ ಬಾವಿಗೆ ಹಾರಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv