Connect with us

Automobile

ಪೆಟ್ರೋಲ್ Vs ಡೀಸೆಲ್: ಯಾವ ಎಂಜಿನಿನ ಕಾರು ಬೆಸ್ಟ್? ಎಷ್ಟು ಉಳಿಕೆ ಮಾಡಬಹುದು?

Published

on

ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಒಡಿಶಾದಲ್ಲಿ ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಯನ್ನು ಹಿಂದಿಕ್ಕಿ ಭಾರತದಲ್ಲಿ ದಾಖಲೆ ನಿರ್ಮಾಣ ಮಾಡಿದೆ. ಹೀಗಾಗಿ ಹೊಸ ಕಾರು ಖರೀದಿಸುವ ಮಂದಿ ಪೆಟ್ರೋಲ್ ಕಾರು ಖರೀದಿಸಬೇಕೇ? ಡೀಸೆಲ್ ಕಾರು ಖರೀದಿಸಬೇಕೇ ಎನ್ನುವ ಗೊಂದಲದಲ್ಲಿರುತ್ತಾರೆ.

ಈ ಪ್ರಶ್ನೆಗೆ ಉತ್ತರ ಎಂಬಂತೆ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳಲ್ಲಿ ಯಾವ ಮಾದರಿಯ ಕಾರು ಉತ್ತಮ? ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ವಿವರಣೆ ನೀಡಲಾಗಿದೆ.

ಪೆಟ್ರೋಲ್ ಮಾದರಿಯ ಡಿಸೈರ್ ಟಾಪ್ ಎಂಡ್ ಕಾರಿನ ಬೆಲೆ (ನವದೆಹಲಿ) 8.47 ಲಕ್ಷ ರೂ. ಆಗಿದ್ದರೆ, ಡೀಸೆಲ್ ಕಾರಿನ ಬೆಲೆ 9.45 ರೂ. ಆಗಿದೆ. ಈ ಎರಡು ಕಾರುಗಳ ನಡುವಿನ ವ್ಯತ್ಯಾಸದ ಬೆಲೆ 98 ಸಾವಿರ ರೂಪಾಯಿಗಳು.

ಸಾಮಾನ್ಯವಾಗಿ ಮಹಾನಗರಗಳಲ್ಲಿ ಒಂದು ದಿನಕ್ಕೆ 20 ಕಿ.ಮೀ ನಂತೆ 20 ದಿನಕ್ಕೆ ಲೆಕ್ಕ ಹಾಕಿದರೆ, ಒಂದು ವರ್ಷಕ್ಕೆ 12,000 ಸಾವಿರ ಕಿ.ಮೀ ಆಗುತ್ತದೆ. ಇದರ ಜೊತೆ ವೀಕೆಂಡ್ ಎಂದು ಸುಮಾರು 3,000 ಕಿ.ಮೀ.ಗಳನ್ನು ಸೇರಿಸಿದರೆ ಅಲ್ಲಿಗೆ 15,000 ಕಿ.ಮೀ ಆಗುತ್ತದೆ. ಮಾಹಿತಿಗಳ ಪ್ರಕಾರ ಡಿಸೈರ್ ಪೆಟ್ರೋಲ್ ಮಾದರಿಯು 22 ಕಿ.ಮೀ ಮೈಲೇಜ್ ನೀಡಿದರೆ, ಡೀಸೆಲ್ ಮಾದರಿಯು 28.4 ಕಿ.ಮೀ ಮೈಲೇಜ್ ನೀಡುತ್ತದೆ. ಹೀಗಾಗಿ 15000/22=681.81 ಲೀ. x 80.57=54,934 ರೂಪಾಯಿ ಪೆಟ್ರೋಲ್ ಮಾದರಿಗೆ ತಗಲುತ್ತದೆ. ಅಂತೆಯೇ 15000/28.4=528.16 ಲೀ. x 80.69 =42,618 ಡೀಸೆಲ್ ಮಾದರಿಗೆ ತಗಲುತ್ತದೆ. ಒಟ್ಟಾರೆಯಾಗಿ ಡೀಸೆಲ್ ಮಾದರಿಯಲ್ಲಿ 12,316 ರೂಪಾಯಿಯನ್ನು ಉಳಿತಾಯ ಮಾಡಬಹುದು. (ಉದಾಹರಣೆಗೆ ಇಲ್ಲಿ ಒಡಿಶಾದ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತೆಗೆದುಕೊಂಡಿದ್ದು, ಕರ್ನಾಟಕದಲ್ಲಿ ಪೆಟ್ರೋಲ್ ಗಿಂದ ಡೀಸೆಲ್ ದರ ಕಡಿಮೆಯಿದೆ)

ಡೀಸೆಲ್ ಕಾರು:
ಡೀಸೆಲ್ ಮಾದರಿಯ ವಾಹನಗಳು ಉತ್ತಮ ಮೈಲೇಜ್ ನೀಡುತ್ತವೆ. ಪೆಟ್ರೋಲ್ ಕಾರಿನ ಬೆಲೆಗಿಂತ ಹೆಚ್ಚಿದ್ದರೂ, ಇಂಧನ ದಕ್ಷತೆಯಲ್ಲಿ ಈ ವಾಹನಗಳು ಉತ್ತಮ. ಗ್ರಾಹಕರು ಸಹ ಹೆಚ್ಚಾಗಿ ಡೀಸೆಲ್ ವಾಹನಗಳ ಮೇಲೆ ಆಸಕ್ತಿ ಹೊಂದಿದ್ದಾರೆ. ಡೀಸೆಲ್ ಮಾದರಿಯ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚು. ಪ್ರತಿ ಬಾರಿ ವಾಹನಗಳನ್ನು ಸರ್ವೀಸ್‍ಗೆ ಬಿಟ್ಟಾಗಲು ವಾಹನದ ಡೀಸೆಲ್ ಫಿಲ್ಟರ್, ಆಯಿಲ್ ಫಿಲ್ಟರ್ ಹಾಗೂ ಇನ್ನುಳಿದ ಅನಿವಾರ್ಯ ಬದಲಾವಣೆಗಳನ್ನು ಮಾಡಲೇಬೇಕು. ಅಲ್ಲದೇ ತೀವ್ರವಾದ ಚಳಿ ಹಾಗೂ ಮಳೆಗಾಲದಲ್ಲಿ ತಕ್ಷಣಕ್ಕೆ ವಾಹನಗಳು ಸ್ಟಾರ್ಟ್ ಆಗುವುದಿಲ್ಲ.

ಪೆಟ್ರೋಲ್ ಕಾರು:
ಪೆಟ್ರೋಲ್ ಮಾದರಿಯ ವಾಹನಗಳು ಎಂತಹುದೇ ಸಂದರ್ಭದಲ್ಲಿ ಉದಾಹರಣೆ ತೀವ್ರವಾದ ಚಳಿ ಹಾಗೂ ಮಳೆಗಾಲದಲ್ಲಿ ಒಂದೇ ಬಾರಿಗೆ ಸ್ಟಾರ್ಟ್ ಆಗುತ್ತವೆ. ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಇವುಗಳ ನಿರ್ವಹಣಾ ವೆಚ್ಚ ಕಡಿಮೆ. ಡೀಸೆಲ್ ವಾಹನಗಳನ್ನು ಓಡಿಸಿದವರಿಗೆ, ಪೆಟ್ರೋಲ್ ವಾಹನಗಳನ್ನು ಓಡಿಸುವುದು ತುಂಬಾ ಸುಲಭ. ಡೀಸೆಲ್ ಕಾರುಗಳ ರೀತಿ ಪೆಟ್ರೋಲ್ ವಾಹನಗಳು ಮೈಲೇಜ್ ನೀಡುವುದಿಲ್ಲ. ಇವುಗಳ ಇಂಧನ ದಕ್ಷತೆ ಕಡಿಮೆ. ಡೀಸೆಲ್ ದರಕ್ಕೆ ಹೋಲಿಸಿದರೆ ಪೆಟ್ರೋಲ್ ದುಬಾರಿಯಾದ ಕಾರಣ ಇಂಧನ ವಿಚಾರದಲ್ಲಿ ಖರ್ಚು ಸ್ವಲ್ಪ ಜಾಸ್ತಿ ಮಾಡಬೇಕು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *