ಮಾಜಿ ಸಚಿನ ಗಾಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಸ್ಯಾಂಡಲ್ ವುಡ್ ಅಂಗಳಕ್ಕೆ ಬಂದಾಗಿದೆ. ಇನ್ನೇನು ಸದ್ಯದಲ್ಲೇ ಸಿನಿಮಾದ ಮುಹೂರ್ತ ಕೂಡ ನಡೆಯುತ್ತಿದೆ. ಈ ಮಧ್ಯ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ನಟಿಸಲಿದ್ದಾರೆ ಎನ್ನುವ ಸುದ್ದಿ ಚಿತ್ರತಂಡದಿಂದಲೇ ಬಂದಿದೆ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ
Advertisement
ತಮಿಳು ಸಿನಿಮಾ ರಂಗದ ಫೇಮಸ್ ನಟಿ ಜೆನಿಲಿಯಾ ಮತ್ತು ಕನ್ನಡದ ಹುಡುಗಿ ಶ್ರೀಲೀಲಾ ಇಬ್ಬರೂ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದರೆ, ಜೆನಿಲಿಯಾ ಪಾತ್ರ ಸದ್ಯಕ್ಕೆ ಸಸ್ಪೆನ್ಸ್. ಇದನ್ನೂ ಓದಿ: ಹಾಲಿವುಡ್ ಗೆ ಹಾರಿದ ಸುದೀಪ್ ನಟನೆಯ ವಿಕ್ರಾಂತ್ ರೋಣ
Advertisement
Advertisement
ಶಿವರಾಜ್ ಕುಮಾರ್ ನಟನೆಯ ಸತ್ಯ ಇನ್ ಲವ್ ನಂತರ ಜೆನಿಲಿಯಾ ಮತ್ತೆ ಕನ್ನಡ ಸಿನಿಮಾವನ್ನು ಮಾಡಿರಲಿಲ್ಲ. ನಟ ರಿತೇಶ್ ದೇಶಮುಖ ಅವರನ್ನು ಮದುವೆಯಾದ ನಂತರ ಅವರು ಸಿನಿಮಾ ರಂಗದಿಂದಲೇ ದೂರವಾಗಿದ್ದರು. ಇದೀಗ ಕಿರೀಟಿ ನಟನೆಯ ಚೊಚ್ಚಲು ಸಿನಿಮಾದ ಮೂಲಕ ಮತ್ತೆ ಚಿತ್ರೋದ್ಯಮಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಇದನ್ನೂ ಓದಿ: ಸ್ಸಾರಿ… ಥಿಯೇಟರ್ ಗೆ ಬರ್ತಿಲ್ಲ ತಮಿಳಿನ ಧನುಷ್ ನಟನೆಯ ಮಾರನ್ ಸಿನಿಮಾ
Advertisement
ಈ ಸಿನಿಮಾವನ್ನು ಟಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದೆ. ಇನ್ನೂ ಹೆಸರಿಡದ ಈ ಸಿನಿಮಾವನ್ನು ಭಾರೀ ಬಜೆಟ್ ನಲ್ಲಿ ತಯಾರಿಸುತ್ತಿದ್ದು, ಹೆಸರಾಂತರ ತಾರಾಬಳಗವ ಇರಲಿದೆ. ಇದನ್ನೂ ಓದಿ: ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಅಪ್ಡೇಟ್ : ಯಾವಾಗ, ಏನು ಅಂತ ನೋಡ್ಕೊಂಡ್ ಬಿಡಿ
ಸಾಯಿ ಕೊರಪಾಠಿ ನಿರ್ಮಿಸಲಿರುವ ಚಿತ್ರಕ್ಕೆ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಲಿದ್ದು, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣವನ್ನು ವಹಿಸಲಿದ್ದಾರೆ. ರವೀಂದರ್ ಆರ್ಟ್ ಡೈರೆಕ್ಟರ್ ಆಗಿ, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಆಕ್ಷನ್ ಸೀಕ್ವೆನ್ಸ್‌ಗಳಿಗೆ ನೃತ್ಯ ಸಂಯೋಜನೆ ಮಾಡಲಿದ್ದಾರೆ.