CinemaDistrictsKarnatakaLatestMain PostSandalwood

ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಅಪ್ಡೇಟ್ : ಯಾವಾಗ, ಏನು ಅಂತ ನೋಡ್ಕೊಂಡ್ ಬಿಡಿ

Advertisements

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಕುರಿತು ಅಪ್ ಡೇಟ್ ಸುದ್ದಿಗಾಗಿ ಅಭಿಮಾನಿಗಳು ಕಾಯುತ್ತಿದ್ದರು. ಬಿಡುಗಡೆ ದಿನಾಂಕ, ಹಾಡು ಬಿಡುಗಡೆ, ಇವೆಂಟ್ ಪ್ಲ್ಯಾನ್ ಕುರಿತು ಕುತೂಹಲದಿಂದ ಕಾಯುತ್ತಿದ್ದರು. ಇದಕ್ಕೆಲ್ಲ ಇಂದು ಉತ್ತರ ಸಿಕ್ಕಿದೆ. ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಹುಟ್ಟು ಹಬ್ಬದ ದಿನದಂದು ವಿಶೇಷ ಅಪ್ ಡೇಟ್ ನೀಡಿದ್ದಾರೆ. ಅದನ್ನೂ ಸುಂದರವಾಗಿ ರೂಟ್ ಮ್ಯಾಪ್ ಮಾಡಿ, ಯಾವ ದಾರಿಯಲ್ಲಿ ಏನೆಲ್ಲ ಸಿಗಲಿದೆ ಎನ್ನುವ ಕುರಿತು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : ಖ್ಯಾತ ಗಾಯಕ ಮಿಕಾ ಸಿಂಗ್ ಸ್ವಯಂವರ : ನೀವೂ ಭಾಗಿಯಾಗಬಹುದು

ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಮೋಷನ್ ಶುರು ಮಾಡಲಿದೆ ಚಿತ್ರತಂಡ. ನಂತರ ‘ಹೇ ಫಕೀರಾ’ ಹಾಡು ರಿಲೀಸ್ ಆಗಲಿದೆ. ಈಗಾಗಲೇ ಟ್ರೇಲರ್ ಗೆ ಬಳಸಿಕೊಂಡಿರುವ ಮತ್ತು ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದ ‘ಗುಮ್ಮ ಬಂದ ಗುಮ್ಮ’ ಹಾಡು ಬಿಡುಗಡೆ ಆಗಲಿದೆ. ಇದಾದ ಕೆಲ ದಿನಗಳ ನಂತರ ‘ಚಿಕ್ಕಿ ಬೊಂಬೆ’ ಗೀತೆಯನ್ನು ರಿಲೀಸ್ ಮಾಡಲಿದ್ದಾರಂತೆ. ಬ್ಯಾಕ್ ಟು ಬ್ಯಾಕ್ ಎರಡು ಹಾಡುಗಳು ರಿಲೀಸ್ ಆದ ನಂತರ ಅಭಿಮಾನಿಗಳಿಗೆ ಒಂದ್ ಸರ್ ಪ್ರೈಸ್ ಕಾದಿದೆ. ಆ ಸರ್ ಪ್ರೈಸ್ ಏನು ಎನ್ನುವುದನ್ನು ಚಿತ್ರತಂಡ ಹೇಳಿಲ್ಲ. ಇದನ್ನೂ ಓದಿ : ಉಕ್ರೇನ್ ನಿಂದ ಪಲಾಯನ ಮಾಡಿದ ಹಾಲಿವುಡ್ ಸ್ಟಾರ್

ಸರ್ ಪ್ರೈಸ್ ಮುಗಿಯುತ್ತಿದ್ದಂತೆಯೇ ಮತ್ತೊಂದು ಗೀತೆಯನ್ನು ಬಿಡುಗಡೆ ಮಾಡುವ ಪ್ಲ್ಯಾನ್ ಚಿತ್ರತಂಡ ಮಾಡಿಕೊಂಡಿದ್ದು, ಈ ಗೀತೆ ರಿಲೀಸ್ ಆಗುತ್ತಿದ್ದಂತೆಯೇ ಮತ್ತೊಂದು ಸರ್ ಪ್ರೈಸ್ ಕಾದಿದೆ. ಅದು ಕೂಡ ಸಸ್ಪನ್ಸ್. ಎರಡು ಸರ್ ಪ್ರೈಸ್ ಮುಗಿಯುತ್ತಿದ್ದಂತೆಯೇ ‘ದ ಕ್ವೀನ್ ಆಫ್ ಗುಡ್ ಟೈಮ್ಸ್’ ಸಾಂಗ್ ರಿಲೀಸ್ ಆಗಲಿದೆ. ಆನಂತರ ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ಬಿಡುಗಡೆ. ಟ್ರೇಲರ್ ನೋಡಿದವರಿಗೂ ಮತ್ತೊಂದು ಸರ್ ಪ್ರೈಸ್ ಕಾದಿದೆ. ಇಷ್ಟೊಂದು ಸರ್ ಪ್ರೈಸ್ ಗಳನ್ನು ದಾಟಿಕೊಂಡು ಬಂದರೆ ಚಿತ್ರ ಬಿಡುಗಡೆ. ಇದನ್ನೂ ಓದಿ : ಪಟ್ಟಭದ್ರ ಹಿತಾಸಕ್ತಿಯಿಂದ ಪೆದ್ರೊ ವಂಚಿತ : ಚಿತ್ರೋತ್ಸವದ ಬಗ್ಗೆ ರಿಷಭ್ ಶೆಟ್ಟಿ ಅಸಮಾಧಾನ

ಮೂಲಗಳ ಪ್ರಕಾರ ಸರ್ ಪ್ರೈಸ್ ಅಂದರೆ, ದೇಶದ ನಾನಾ ರಾಜ್ಯಗಳಲ್ಲಿ ಇವೆಂಟ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ, ಆಯಾ ಭಾಷೆಯ ಚಿತ್ರರಂಗದ ಗಣ್ಯರ ಮಧ್ಯೆ ಇವೆಂಟ್ ಮಾಡುವ ಯೋಜನೆ ಸಿದ್ಧವಾಗಿದೆಯಂತೆ.

Leave a Reply

Your email address will not be published.

Back to top button