KarnatakaLatestNational

ಲೋಕಸಭಾ ಚುನಾವಣೆ: ಅತಿ ಕಡಿಮೆ ಮತದಾನವಾದ ಕ್ಷೇತ್ರಗಳು

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಲಕ್ಷಗಟ್ಟಲೇ ಮತದಾನ ನಡೆದಿರುವ ಕ್ಷೇತ್ರಗಳು ಹಲವು ರಾಜ್ಯಗಳಲ್ಲಿ ಇವೆ. ಆದರೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಮತದಾರರು ಇದ್ದಾರೆ. ಹೀಗಾಗಿ ಇಲ್ಲಿ ಅತಿ ಕಡಿಮೆ ಮತದಾದ ನಡೆದ ಕ್ಷೇತ್ರಗಳ ಮಾಹಿತಿಯನ್ನು ನೀಡಲಾಗಿದೆ.

ಲಕ್ಷದ್ವೀಪ ಲೋಕಸಭಾ ಕ್ಷೇತ್ರದಿಂದ ಪಿ.ಎಂ.ಸಯೀದ್ ಅವರು 1967ರಿಂದ 1999ರ ವರೆಗೂ 10 ಬಾರಿ ಆಯ್ಕೆಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಮೊದಲ ಬಾರಿಗೆ 1967ರಲ್ಲಿ ಸ್ಪರ್ಧೆ ಮಾಡಿದ್ದ ಪಿ.ಎಂ.ಸಯೀದ್ ಅವರು, ಕೇವಲ 4,151 ಮತ ಪಡೆದು ಗೆಲುವು ಸಾಧಿಸಿದ್ದರು. ಈ ವೇಳೆ ಒಟ್ಟು 11,807 ಜನರು ಮತ ಹಾಕಿದ್ದರು.

1977ರಲ್ಲಿ 16,386 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರೆ, 1980ರ ಚುನಾವಣೆಯ ಸಮಯದಲ್ಲಿ 17,772 ಮಂದಿ ಮತವನ್ನು ಚಲಾವಣೆ ಮಾಡಿದ್ದರು. 1984ರಲ್ಲಿಯೂ ಲಕ್ಷದ್ವೀಪ ದ್ವೀಪದಲ್ಲಿ ಒಟ್ಟು 19,023 ಜನರು ಮತ ಹಾಕಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ಸಯೀದ್ ಅವರು ಈ ಚುನಾವಣೆಯಲ್ಲಿ 10,361 ಮತ ಪಡೆದು ಆಯ್ಕೆಯಾಗಿದ್ದರು.

ಅತಿ ಕಡಿಮೆ ಮತದಾನವಾದ ಕ್ಷೇತ್ರಗಳ ಪೈಕಿ ದಾದ್ರಾ ಮತ್ತು ನಗರ್ ಹವೇಲಿ ಲೋಕಸಭಾ ಕ್ಷೇತ್ರವು ಐದನೇ ಸ್ಥಾನದಲ್ಲಿದ್ದು, 1967ರಲ್ಲಿ ಒಟ್ಟು 21,248 ಜನರು ಮತದಾನ ಮಾಡಿದ್ದಾರೆ. ಆರು ಹಾಗೂ ಏಳನೇ ಸ್ಥಾನದಲ್ಲಿಯೂ ದಾದ್ರಾ & ನಗರ್ ಹವೇಲಿ ಇದ್ದು 1971ರಲ್ಲಿ 21,658 ಮತ ಹಾಗೂ 1977ರಲ್ಲಿ 24,131 ಮತಗಳು ಚಲಾವಣೆಯಾಗಿದ್ದವು.

ಅತಿ ಕಡಿಮೆ ಮತದಾನವಾದ ಕ್ಷೇತ್ರಗಳು

ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್
ಪಕ್ಷ: ಪಕ್ಷೇತರ ಅಭ್ಯರ್ಥಿ
ಒಟ್ಟು ಮತಗಳು : 11,807
ಕ್ಷೇತ್ರ: ಲಕ್ಷದ್ವೀಪ
ವರ್ಷ: 1967

ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್
ಪಕ್ಷ: ಕಾಂಗ್ರೆಸ್
ಒಟ್ಟು ಮತಗಳು: 16,386
ಕ್ಷೇತ್ರ: ಲಕ್ಷದ್ವೀಪ
ವರ್ಷ: 1977

ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್
ಪಕ್ಷ: ಕಾಂಗ್ರೆಸ್ (ಐಎನ್‍ಸಿಯು)
ಒಟ್ಟು ಮತಗಳು: 17,772
ಕ್ಷೇತ್ರ: ಲಕ್ಷದ್ವೀಪ
ವರ್ಷ: 1980

ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್
ಪಕ್ಷ: ಕಾಂಗ್ರೆಸ್
ಒಟ್ಟು ಮತಗಳು: 19,023
ಕ್ಷೇತ್ರ: ಲಕ್ಷದ್ವೀಪ
ವರ್ಷ: 1984

ಗೆದ್ದ ಅಭ್ಯರ್ಥಿ: ಎಸ್.ಆರ್.ಡೆಲ್ಕರ್
ಪಕ್ಷ: ಕಾಂಗ್ರೆಸ್
ಒಟ್ಟು ಮತಗಳು: 21,248
ಕ್ಷೇತ್ರ: ದಾದ್ರಾ & ನಗರ್ ಹವೇಲಿ
ವರ್ಷ: 1967

ಗೆದ್ದ ಅಭ್ಯರ್ಥಿ: ರಾಮುಭಾಯ್ ರಾವಜಿಬಾಯ್ ಪಟೇಲ್
ಪಕ್ಷ: ಕಾಂಗ್ರೆಸ್
ಒಟ್ಟು ಮತಗಳು: 31,658
ಕ್ಷೇತ್ರ: ದಾದ್ರಾ & ನಗರ್ ಹವೇಲಿ
ವರ್ಷ: 1971

ಗೆದ್ದ ಅಭ್ಯರ್ಥಿ: ರಾಮುಭಾಯ್ ರಾವಜಿಬಾಯ್ ಪಟೇಲ್
ಪಕ್ಷ: ಕಾಂಗ್ರೆಸ್
ಒಟ್ಟು ಮತಗಳು: 24,131
ಕ್ಷೇತ್ರ: ದಾದ್ರಾ & ನಗರ್ ಹವೇಲಿ
ವರ್ಷ: 1977

ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್
ಪಕ್ಷ: ಕಾಂಗ್ರೆಸ್
ಒಟ್ಟು ಮತಗಳು: 25,321
ಕ್ಷೇತ್ರ: ಲಕ್ಷದ್ವೀಪ
ವರ್ಷ: 1991

ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್
ಪಕ್ಷ: ಕಾಂಗ್ರೆಸ್
ಮತಗಳು: 25,490
ಕ್ಷೇತ್ರ: ಲಕ್ಷದ್ವೀಪ
ವರ್ಷ: 1989

ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್
ಪಕ್ಷ: ಕಾಂಗ್ರೆಸ್
ಒಟ್ಟು ಮತಗಳು: 29,860
ಕ್ಷೇತ್ರ: ಲಕ್ಷದ್ವೀಪ
ವರ್ಷ: 1999

ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್
ಪಕ್ಷ: ಕಾಂಗ್ರೆಸ್
ಒಟ್ಟು ಮತಗಳು: 30,188
ಕ್ಷೇತ್ರ: ಲಕ್ಷದ್ವೀಪ
ವರ್ಷ: 1996

ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್
ಪಕ್ಷ: ಕಾಂಗ್ರೆಸ್
ಒಟ್ಟು ಮತಗಳು: 31,064
ಕ್ಷೇತ್ರ: ಲಕ್ಷದ್ವೀಪ
ವರ್ಷ: 1998

Leave a Reply

Your email address will not be published.

Back to top button