ಮುಂಬೈ: 2027ರಲ್ಲಿ ಪೂರ್ಣ ಕುಂಭಮೇಳವು (Kumbh Mela) ಮಹಾರಾಷ್ಟ್ರದ (Maharashtra) ನಾಸಿಕ್‌ನಲ್ಲಿ (Nasik) ನಡೆಯಲಿದೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ (Devendra Fadnavis) ತಿಳಿಸಿದ್ದಾರೆ.
ಮುಂಬೈನಲ್ಲಿ ನಡೆದ ನಾಸ್ಕಾಮ್ ತಂತ್ರಜ್ಞಾನ ಮತ್ತು ನಾಯಕತ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2027ರಲ್ಲಿ, ನಾವು ನಾಸಿಕ್‌ನಲ್ಲಿ ಕುಂಭಮೇಳವನ್ನು ನಡೆಸುತ್ತೇವೆ. ಪ್ರಯಾಗ್‌ರಾಜ್ ಕುಂಭವನ್ನು 15,000 ಹೆಕ್ಟೇರ್ ಪ್ರದೇಶದಲ್ಲಿ ಆಯೋಜಿಸಲಾಗಿತ್ತು ಮತ್ತು ನಾಸಿಕ್‌ನಲ್ಲಿ 250 ಹೆಕ್ಟೇರ್ ಪ್ರದೇಶದಲ್ಲಿ ನಡೆಸುತ್ತೇವೆ. 2015ರಲ್ಲಿ ಕುಂಭಮೇಳ ಆಯೋಜಿಸಿದ ಅನುಭವ ನನಗಿದೆ. ಆದರೆ ನಾಸಿಕ್‌ನಲ್ಲಿ ನಡೆಯುವ ಕುಂಭಮೇಳವು ತಾಂತ್ರಿಕವಾಗಿ ಮುಂದುವರಿದ ಕುಂಭವಾಗಲಿದೆ ಎಂದರು. ಇದನ್ನೂ ಓದಿ: `ಪುಟ್ಟಕ್ಕ’ ಉಮಾಶ್ರೀ ಹೋರಾಟಕ್ಕೆ ನಟ ರವಿಚಂದ್ರನ್ ಸಾಥ್
2027ರ ಪೂರ್ಣ ಕುಂಭಮೇಳವು ನಾಸಿಕ್‌ನಿಂದ ಸುಮಾರು 38 ಕಿ.ಮೀ ದೂರದಲ್ಲಿರುವ ಗೋದಾವರಿ ನದಿಯ ದಡದಲ್ಲಿರುವ ತ್ರಯಂಬಕೇಶ್ವರದಲ್ಲಿ ನಡೆಯಲಿದೆ. ನಾಸಿಕ್ ಕುಂಭಮೇಳವು 2027ರ ಜು.17 ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 17ರಂದು ಕೊನೆಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರಾಜಮೌಳಿ ಮೇಲೆ ಗಂಭೀರ ಆರೋಪ : ನಿರ್ಮಾಪಕ ಆತ್ಮಹತ್ಯೆ
ಮಹಾರಾಷ್ಟ್ರ ಸರ್ಕಾರವು 2027ರಲ್ಲಿ ನಡೆಯಲಿರುವ ಕುಂಭಮೇಳಕ್ಕೆ ಈಗಾಗಲೇ ತಯಾರಿಯನ್ನು ನಡೆಸುತ್ತಿದೆ. ರಸ್ತೆ, ಸಂಚಾರ ನಿರ್ವಹಣೆ ಮತ್ತು ಸಂಪರ್ಕವನ್ನು ಯೋಜನೆಗಳನ್ನು ಚರ್ಚಿಸಲು ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೀಷಾ ಪತಂಕರ್ ಮಹೈಸ್ಕರ್ ನಾಸಿಕ್‌ಗೆ ಭೇಟಿ ನೀಡಿದ್ದರು. ಪಾರ್ಕಿಂಗ್ ಪ್ರದೇಶದಿಂದ ಕುಂಭಸ್ಥಳಕ್ಕೆ ಯಾತ್ರಿಕರನ್ನು ಕರೆದೊಯ್ಯಲು ವಿಶೇಷ ಬಸ್‌ಗಳನ್ನು ವ್ಯವಸ್ಥೆಗೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ನಾಸಿಕ್ ಮಹಾನಗರ ಪಾಲಿಕೆಯು ಮೂಲಸೌಕರ್ಯ ಸುಧಾರಣೆಗಾಗಿ 7,500 ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಕುಂಭಮೇಳದ ಪೂರ್ವತಯಾರಿ ಕಾರ್ಯವು ಎಪ್ರಿಲ್‌ನಿಂದ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಡಿಕೆಶಿಗೆ ಕರಿಬೆಕ್ಕುಗಳ ಕಾಟ, ಕರ್ನಾಟಕದಲ್ಲಿ ಡಿಕೆಶಿ ಕೂಡ ಒಬ್ಬ ಏಕನಾಥ್ ಶಿಂಧೆ : ಆರ್.ಅಶೋಕ್