ಬೆಂಗಳೂರು: ಈ ಹಿಂದೆ ಅಧಿಕಾರಕ್ಕಾಗಿ ದೇಶಕ್ಕೆ ತುರ್ತು ಪರಿಸ್ಥಿತಿ (Emergency Situation) ಹೇರಿದ್ದ ಕಾಂಗ್ರೆಸ್ (Congress) ಪಕ್ಷದವರಿಗೆ ಸದನದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ತಿಳಿದಿಲ್ಲ ಎಂದು ಬಿಜೆಪಿ (BJP) ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ (CT Ravi) ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಧಾನಮಂತ್ರಿಯವರ ಕುರಿತು ಅನಗತ್ಯ ಟೀಕೆ ಮಾಡುವ ಕಾಂಗ್ರೆಸ್ಸಿಗರು ಪ್ರಧಾನಿಯವರನ್ನು ಸರ್ವಾಧಿಕಾರಿ ಎನ್ನುತ್ತಿದ್ದಾರೆ. ಡಿ.ಕೆ.ಸುರೇಶ್ (DK Suresh) ಮತ್ತು ಇತರ ಕಾಂಗ್ರೆಸ್ಸಿಗರಿಗೆ ನೈತಿಕತೆ ಎಲ್ಲಿದೆ? ಅವರು ತುರ್ತು ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ವನ್ಯಜೀವಿ ಅಂಗಾಂಗ ವಾಪಸ್ ಮಾಡಲು 3 ತಿಂಗಳು ಅವಕಾಶ: ಈಶ್ವರ್ ಖಂಡ್ರೆ
Advertisement
Advertisement
ತುರ್ತು ಪರಿಸ್ಥಿತಿ ಹೇರಿ, ಕಮಿಟಿ ಪ್ರವಾಸಕ್ಕೆ ಬಂದ ಸಂಸದರನ್ನು ಬಂಧಿಸಿ ಜೈಲಿಗೆ ಹಾಕಿದ್ದರು. ಕರ್ನಾಟಕದ ಜೈಲಿನಲ್ಲಿ ಎಲ್‌ಕೆ ಅಡ್ವಾಣಿ, ವಾಜಪೇಯಿ ಇವರೆಲ್ಲರೂ ಇದ್ದರು. ಅಲಹಾಬಾದ್ ಹೈಕೋರ್ಟ್ ಇಂದಿರಾಗಾಂಧಿಯವರ ಲೋಕಸಭಾ ಸದಸ್ಯತ್ವ ರದ್ದು ಮಾಡಿದ್ದನ್ನೇ ಕಾರಣ ಮಾಡಿ ತುರ್ತು ಪರಿಸ್ಥಿತಿ ಹೇರಲಾಗಿತ್ತು ಎಂದು ಪ್ರಶ್ನೆಗೆ ಉತ್ತರ ನೀಡಿದರು. ಅವರು ಮೇಲ್ಮನವಿ ಸಲ್ಲಿಸದೆ ಅಧಿಕಾರದಲ್ಲಿ ಉಳಿದುಕೊಳ್ಳಲು ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದರು ಎಂದು ವಿವರಿಸಿದರು. ಇದನ್ನೂ ಓದಿ: ಬಿಜೆಪಿಗೆ ಅಧಿಕಾರ ನೆತ್ತಿಗೇರಿದೆ, ಅದಕ್ಕೆ ಸಂಸದರನ್ನ ಅಮಾನತು ಮಾಡಿದೆ: ಈಶ್ವರ್ ಖಂಡ್ರೆ
Advertisement
ಪ್ರಧಾನಿ ಮೋದಿಯವರು ಎರಡನೇ ಬಾರಿ ಅತ್ಯಧಿಕ ಬಹುಮತ ಪಡೆದು ಆಯ್ಕೆಯಾದವರು. ಈಚೆಗೆ ನಡೆದ 5 ರಾಜ್ಯಗಳ ಚುನಾವಣೆಯಲ್ಲಿ ಕೂಡ ಮತ್ತೊಮ್ಮೆ ಪ್ರಧಾನಮಂತ್ರಿ ಮೋದಿಯವರೇ ಎಂಬುದರ ದಿಕ್ಸೂಚಿಯಾಗಿ ಫಲಿತಾಂಶ ಬಂದಿದೆ. ಸದನದಲ್ಲಿ ಏನು ನಡೆದಿದೆ ಎಂಬುದಕ್ಕೆ ನಾವು ಸಾಕ್ಷಿಯಲ್ಲ. ಆದರೆ ಕಾಂಗ್ರೆಸ್ ಪಕ್ಷದ ಇತಿಹಾಸ, ಆಡಳಿತ ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರು. ಇದನ್ನೂ ಓದಿ: ಕಾರಜೋಳರ ಮೇಲೆ ಹಲ್ಲೆ ಯತ್ನದ ಹಿಂದೆ ಡಾ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಕೈವಾಡ- ಪಿ.ರಾಜೀವ್ ಆರೋಪ
Advertisement
ಸಂಸತ್ತಿಗೆ ಅದರದ್ದೇ ನಿಯಮಾವಳಿಗಳಿವೆ. ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕಾದ ಜವಾಬ್ದಾರಿ ಎಲ್ಲಾ ಸಂಸದರದ್ದು. ನಿಯಮಾವಳಿ ಮೀರಿ ಅತಿರೇಕದ ವರ್ತನೆ ತೋರಿದಾಗ ಸಭಾಧ್ಯಕ್ಷರು ಅಥವಾ ರಾಜ್ಯಸಭೆ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಇದು ಸಾರ್ವಜನಿಕ ಚರ್ಚೆಯ ವಿಷಯವಲ್ಲ ಎಂದು ಹೇಳಿದರು. ಇದನ್ನೂ ಓದಿ: ತಾಳಿ ಒಬ್ಬರ ಹತ್ತಿರ ಕಟ್ಟಿಸಿಕೊಂಡು ಸಂಸಾರ ಇನ್ನೊಬ್ಬರ ಜೊತೆ ಮಾಡ್ಬಾರ್ದು: ಈಶ್ವರಪ್ಪ ಕಿಡಿ
ಪ್ರಧಾನಮಂತ್ರಿಯವರು ದೇಶದ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಿಸುವ ಜನಪ್ರಿಯ, ಜನಾನುರಾಗಿ, ದೂರದೃಷ್ಟಿಯ ನಾಯಕರು. ಅವರು ಯಾವತ್ತೂ ತಾರತಮ್ಯ ಮಾಡಿಲ್ಲ. ಅವರು ದೇಶದ ಎಲ್ಲ ರಾಜ್ಯಗಳೂ ಸಮಾನ ಎಂದು ಭಾವಿಸುವವರು. ಅವರ ಅಭಿವೃದ್ಧಿ ಮಂತ್ರವೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬುದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಶಿಸ್ತಿನ ವರ್ತನೆ, 49 ಸಂಸದರ ಅಮಾನತು – ಇಲ್ಲಿಯವರೆಗೆ 149 ಮಂದಿ ಸಸ್ಪೆಂಡ್