ವಿಜಯ್ ದೇವರಕೊಂಡ ನಟಿಸಿದ್ದ, ಪುರಿ ಜಗನ್ನಾಥ್ ನಿರ್ದೇಶನ ಮಾಡಿರುವ ಲೈಗರ್ ಸಿನಿಮಾ ಹೇಳೊಕೆ ಹೆಸರಿಲ್ಲದಂತೆ ನೆಲಕಚ್ಚಿತು. ಬಾಕ್ಸ್ ಆಫೀಸಿನಿಂದ ನಯಾ ಪೈಸೆಯೂ ಲಾಭವಾಗಿ ಬರಲಿಲ್ಲ. ವಿಜಯ್ ದೇವರಕೊಂಡ ಕೂಡ ನಟನೆಯಾಗಿಯೂ ಗೆಲ್ಲಲಿಲ್ಲ. ಹಾಗಾಗಿ ಲೈಗರ್ ಟೀಮ್ ಮನೆಯಿಂದಾನೇ ಕೆಲವು ದಿನ ಆಚೆ ಬರಲಿಲ್ಲ. ಆನಂತರ ಲೈಗರ್ ಸೋಲನ್ನು ಒಬ್ಬೊಬ್ಬರೇ ಒಪ್ಪಿಕೊಳ್ಳುವುದಕ್ಕೆ ಶುರು ಮಾಡಿದರು. ಇನ್ನೇನು ಆ ಕಹಿಯನ್ನು ಮರೆತು ಹೊಸ ಸಿನಿಮಾದಲ್ಲಿ ತೊಡಗಿಸಿಕೊಳ್ಳುವ ಹೊತ್ತಲ್ಲಿ ಇಡಿ ಸಂಕಟ ಶುರುವಾಗಿದೆ.
Advertisement
ನಿರ್ದೇಶಕ ಪುರಿ ಜಗನ್ನಾಥ್, ನಟಿ ಹಾಗೂ ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಚಾರ್ಮಿ ಕೌರ್ ಹಿಂದೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿದ್ದಿದ್ದು, ಸತತ 13 ಗಂಟೆಗಳ ಕಾಲ ಈ ಇಬ್ಬರನ್ನೂ ಇಡಿ ಅಧಿಕಾರಿಗಳು ಗ್ರಿಲ್ ಮಾಡಿದ್ದಾರೆ. ಲೈಗರ್ ಸಿನಿಮಾದ ನಿರ್ಮಾಣಕ್ಕೆ ಹಣವನ್ನು ಎಲ್ಲಿಂದ ತಂದಿದ್ದೀರಿ? ಹಣದ ಮೂಲ ಏನು ಎಂದು ಕೇಳಿದೆ. ಅಲ್ಲದೇ, ಸತತ 13 ಗಂಟೆಗಳ ಕಾಲ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದೆ. ಇದನ್ನೂ ಓದಿ:‘ಸಲಾರ್’ ಸಿನಿಮಾದಲ್ಲಿ ಕನ್ನಡದ ಯುವ ನಾಯಕ ಪ್ರಮೋದ್ ನಟಿಸಿದ್ದು ನಿಜ : ಪ್ರಶಾಂತ್ ನೀಲ್
Advertisement
Advertisement
ಲೈಗರ್ ಸಿನಿಮಾದಿಂದ ದುಡ್ಡು ಬರದೇ ಇದ್ದರೂ, ಈ ಸಿನಿಮಾ ಮಾಡಲು ಹಣವನ್ನು ಎಲ್ಲಿಂದ ತಂದಿದ್ದೀರಿ? ಸಾಲ ಮಾಡಿದ್ದೀರಾ? ಯಾರು ಬಳಿ ಸಾಲ ಮಾಡಿದ್ದು? ಹಾಕಿರುವ ಬಂಡವಾಳ ಎಷ್ಟು? ವಾಪಸ್ಸು ಹಣ ಬಂದಿದ್ದು ಎಷ್ಟು? ಹೀಗೆ ನೂರಾರು ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಪೂರಿ ಜಗನ್ನಾಥ್ ಮತ್ತು ಚಾರ್ಮಿಗೆ ಕೇಳಿದ್ದಾರೆ. ಅರ್ಧ ದಿನ ಇಡಿ ಅಧಿಕಾರಿಗಳ ಜೊತೆಯೇ ಇಬ್ಬರೂ ಕಳೆದಿದ್ದರು.