ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ಸಲಾರ್ ಸಿನಿಮಾ ಅಡ್ಡದಿಂದ ಹೊಸ ಸುದ್ದಿಯೊಂದು ಬಂದಿದ್ದು, ಕನ್ನಡದ ನಾಯಕ ನಟ ಪ್ರಮೋದ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರಂತೆ. ಈಗಾಗಲೇ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿಯೂ ಬಂದಿದ್ದಾರಂತೆ. ಯಾವ ಪಾತ್ರ, ಯಾವಾಗ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರೆ ಎನ್ನುವ ಮಾಹಿತಿ ಕೊಡದೇ ಇದ್ದರೂ, ಪ್ರಮೋದ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದು ನಿಜ ಎನ್ನಲಾಗುತ್ತಿದೆ ಎಂದು ಈ ಹಿಂದೆಯೇ ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿ ಮಾಡಿತ್ತು. ಅದು ಈಗ ನಿಜವಾಗಿದೆ. ಈ ಕುರಿತು ಸ್ವತಃ ಪ್ರಶಾಂತ್ ನೀಲ್ ಅವರೇ ಪ್ರತಿಕ್ರಿಯಿಸಿದ್ದಾರೆ.
Advertisement
ಮಾಧ್ಯಮದ ಜೊತೆ ಮಾತನಾಡಿರುವ ಪ್ರಶಾಂತ್ ನೀಲ್, ‘ಪ್ರಮೋದ್ ಅವರನ್ನು ನಾನು ರತ್ನನ್ ಪ್ರಪಂಚ ಸಿನಿಮಾದಲ್ಲಿ ನೋಡಿದ್ದೆ. ಆ ಸಿನಿಮಾದಲ್ಲಿ ಅವರು ತುಂಬಾ ಚೆನ್ನಾಗಿ ಅಭಿನಯಿಸಿದ್ದರು. ಈ ಸಿನಿಮಾದ ಅವರ ಅಭಿನಯವೇ ಸಲಾರ್ ಸಿನಿಮಾದಲ್ಲಿ ನಟಿಸಲು ಆಯ್ಕೆ ಮಾಡುವಂತೆ ಮಾಡಿತ್ತು. ಹಾಗಾಗಿ ಸಲಾರ್ ಸಿನಿಮಾದಲ್ಲಿ ಪ್ರಮೋದ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ನಂತರ ಅವರ ತಾಯಿಯೂ ಅಂಗಾಂಗ ದಾನಕ್ಕೆ ನೋಂದಣಿ
Advertisement
Advertisement
ಕಿರುತೆರೆಯ ಪಾಪ್ಯುಲರ್ ನಟರಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ಪ್ರಮೋದ್, ಪ್ರಿಮೀಯರ್ ಪದ್ಮಿನಿ ಸಿನಿಮಾದ ಮೂಲಕ ಭರವಸೆ ಮೂಡಿಸಿದರು. ರತ್ನನ್ ಪ್ರಪಂಚ ಸಿನಿಮಾದಲ್ಲಿ ಇವರ ನಟನೆ ಕಂಡು ಅಭಿಮಾನಿ ಬಳಗವೂ ಹೆಚ್ಚಾಯಿತು. ಈಗ ಮತ್ತೆರಡು ಸಿನಿಮಾಗಳನ್ನು ಒಪ್ಪಿಕೊಂಡಿರುವ ಪ್ರಮೋದ್, ಸಲಾರ್ ಸಿನಿಮಾ ರಿಲೀಸ್ ನಂತರ ಬೇರೆ ಭಾಷೆಯ ಚಿತ್ರಗಳಲ್ಲೂ ಅವರಿಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ.
Advertisement
ಅಂದುಕೊಂಡಂತೆ ಆಗಿದ್ದರೆ ಸಲಾರ್ ಸಿನಿಮಾದ ಚಿತ್ರೀಕರಣ ಇಷ್ಟೊತ್ತಿಗೆ ಮುಗಿಯಬೇಕಿತ್ತು. ಆದರೆ, ನಾನಾ ಕಾರಣಗಳಿಂದಾಗಿ ಅದು ಸಾಧ್ಯವಾಗಿಲ್ಲ. ಬಿಡುಗಡೆಗೆ ಇನ್ನೂ ಟೈಮ್ ಇರುವುದರಿಂದ ನಿಧಾನವಾಗಿಯೇ ಶೂಟಿಂಗ್ ಮಾಡುತ್ತಿದ್ದಾರಂತೆ ಪ್ರಶಾಂತ್ ನೀಲ್. ಹೊಂಬಾಳೆ ಬ್ಯಾನರ್ ನಿಂದ ಈ ಸಿನಿಮಾ ತಯಾರಾಗುತ್ತಿದ್ದು, ಪ್ರಭಾಸ್ ನಾಯಕ ನಟರಾಗಿ ಪಾತ್ರ ಮಾಡಿದ್ದಾರೆ.