ನವದೆಹಲಿ: ಎನ್‍ಡಿಎ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ವೈಫಲ್ಯ ಅನುಭವಿಸಿದೆ ಎನ್ನುವ ಪ್ರತಿಪಕ್ಷಗಳ ಟೀಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂತ್ರಿಗಳಿಗೆ, ನಿಮ್ಮ ಸಚಿವಾಲಯದಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗಿದೆ ಎನ್ನುವುದರ ವಿವರ ನೀಡುವಂತೆ ಸೂಚಿಸಿದ್ದಾರೆ.
ಅಧಿಕಾರಕ್ಕೆ ಏರಿದ ಮೂರು ವರ್ಷದಲ್ಲಿ ಕೇಂದ್ರದ ಯೋಜನೆಗಳಿಂದಾಗಿ ನೇರ ಮತ್ತು ಪರೋಕ್ಷವಾಗಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗಿದೆ ಎನ್ನುವ ಸಂಪೂರ್ಣ ಡೇಟಾ ಮಾಹಿತಿಯನ್ನು ಸೋಮವಾರ ನೀಡುವಂತೆ ಸೂಚಿಸಿದ್ದಾರೆ.
Advertisement
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಚಾರವನ್ನು ಎಲ್ಲ ಸಚಿವಾಲಯಗಳಿಗೆ ತಿಳಿಸಲಾಗಿದೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ವಾರ್ಷಿಕವಾಗಿ 2 ಕೋಟಿ ಜನರಿಗೆ ಉದ್ಯೋಗ ನೀಡುತ್ತೇವೆ ಎಂದು ಹೇಳಿತ್ತು.
Advertisement
ಕಾಂಗ್ರೆಸ್ ಟೀಕೆ: ಮಾಜಿ ಕೇಂದ್ರ ಪರಿಸರ ಸಚಿವ ಜೈರಾಂ ರಮೇಶ್ ಮಾತನಾಡಿ, ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ, ಕೃಷಿ ಮತ್ತು ಹೂಡಿಕೆ ಕ್ಷೇತ್ರದಲ್ಲಿ ವೈಫಲ್ಯ ಅನುಭವಿಸಿದೆ ಎಂದು ಟೀಕಿಸಿದ್ದಾರೆ.
Advertisement
ಗರಿಷ್ಟ ಪ್ರಚಾರ, ಕನಿಷ್ಟ ಚಿಂತನೆ ಕಾರ್ಯತಂತ್ರವನ್ನು ಎನ್‍ಡಿಎ ಸರ್ಕಾರ ಹಾಕಿಕೊಂಡಿದೆ. ಫಸಲ್ ಭೀಮಾ ಯೋಜನೆಯಲ್ಲಿ ವಿಮಾ ಕಂಪೆನಿಗಳು 16 ಸಾವಿರ ಕೋಟಿ ರೂ. ಸಂಗ್ರಹಿಸಿದೆ. ಆದರೆ ರೈತರಿಗೆ ಕೇವಲ 7 ಸಾವಿರ ಕೋಟಿ ರೂ ಮಾತ್ರ ಸಿಕ್ಕಿದೆ ಎಂದು ಆರೋಪಿಸಿದರು.