ಪ್ರಶ್ನೆ ಎದುರಿಸಲಾಗದವರು ಮಾನನಷ್ಟ ಮೊಕದ್ದಮೆ ಮೊರೆ ಹೋಗ್ತಾರೆ: ಡಿಎಂಕೆ ವಿರುದ್ಧ ಅಣ್ಣಾಮಲೈ ಕಿಡಿ

Public TV
1 Min Read
Annamalai 2

ಚೆನ್ನೈ: ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಡಿಎಂಕೆ ವಿರುದ್ಧ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕಿಡಿಕಾರಿದ್ದಾರೆ.

ಪ್ರಶ್ನೆಗಳನ್ನು ಎದುರಿಸಲಾಗದವರು ಮಾನನಷ್ಟ ಮೊಕದ್ದಮೆಗಳ ಮೊರೆ ಹೋಗುತ್ತಾರೆ. ನನ್ನ ವಿರುದ್ಧ ಡಿಎಂಕೆಯಿಂದ 100 ಕೋಟಿ ರೂ. ಸೇರಿದಂತೆ ಒಟ್ಟು 610 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಅವರು ತಮಿಳುನಾಡಿನಲ್ಲಿ ಬಿಜೆಪಿಗೆ ಹೆದರುತ್ತಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಇದನ್ನೂ ಓದಿ: 2ನೇ ಮದುವೆಗೆ ತಯಾರಾದ ಐಎಎಸ್ ಟಾಪರ್ ಟೀನಾ

MK STALIN AND ANNAMALAI

ಮಾನನಷ್ಟ ಮೊಕದ್ದಮೆಗೆ ಹೆದರುವುದಿಲ್ಲ. ಅವರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುತ್ತೇನೆ ಎಂದು ತಿಳಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅಣ್ಣಾಮಲೈ ವಿರುದ್ಧ ಡಿಎಂಕೆ ಸಂಸದರಾದ ಆರ್‌.ಎಸ್.ಭಾರತಿ ಅವರು ನೋಟಿಸ್‌ ನೀಡಿದ್ದರು. ಇದನ್ನೂ ಓದಿ: ಬಿಜೆಪಿ ಸಂಸ್ಥಾಪನಾ ದಿನದ ಪ್ರಯುಕ್ತ ಸಿಹಿ ಸುದ್ದಿಕೊಟ್ಟ ಪ್ರಧಾನಿ: ಒಂದು ಕ್ಲಿಕ್‌ನಲ್ಲಿದೆ ಮಾಹಿತಿ

Annamalai EPS123

ಡಿಎಂಕೆಯ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಅವರು ನೋಟಿಸ್ ಜಾರಿ ಮಾಡಿದ್ದು, ಅಣ್ಣಾಮಲೈ ಅವರು ತಾವು ನೀಡಿರುವ ಹೇಳಿಕೆಗಳನ್ನು ವಾಪಸ್ ಪಡೆದು 24 ಗಂಟೆಗಳ ಒಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಮತ್ತು ಎರಡು ದಿನಗಳೊಳಗಾಗಿ ಮುಖ್ಯಮಂತ್ರಿ ಅವರ ಸಾರ್ವಜನಿಕ ಪರಿಹಾರ ನಿಧಿಗೆ 100 ಕೋಟಿ ರೂ. ಪಾವತಿಸುವಂತೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು.

ಮಾರ್ಚ್ 24 ಮತ್ತು 25ರಂದು ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಅಣ್ಣಾಮಲೈ ಅವರು, ಸ್ಟಾಲಿನ್ ಅವರ ಯುಎಇ ಭೇಟಿಗೆ ವೈಯಕ್ತಿಕ ಉದ್ದೇಶಗಳು ಕಾರಣವೆಂದು ಆರೋಪ ಮಾಡಿದ್ದರು. ಇದನ್ನೂ ಓದಿ: ಪರವಾನಗಿ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ ಸುಪ್ರೀಂ ನೋಟಿಸ್‌

Share This Article
Leave a Comment

Leave a Reply

Your email address will not be published. Required fields are marked *