– ಡಿಕೆಶಿಯಿಂದ ಆಪರೇಷನ್ ಆರೋಪದ ಬಗ್ಗೆ ರಾಮುಲು ಹೇಳಿದ್ದೇನು?
ಬಳ್ಳಾರಿ: ಆ ವ್ಯಕ್ತಿ ನನ್ನನ್ನ ಒಬ್ಬ ಕ್ರಿಮಿನಲ್ ರೀತಿ ಬಿಂಬಿಸಲು ಹೊರಟಿದ್ದಾರೆ. ನನ್ನ ಮೇಲೆ ಒಂದೇ ಒಂದು ಕ್ರಿಮಿನಲ್ ಕೇಸ್ ಇಲ್ಲ. ಆದ್ರೆ ನನ್ನ ವಿರುದ್ಧ ಆರೋಪ ಮಾಡಿದವರು ಕ್ರಿಮಿನಲ್ ಬ್ಯಾಗ್ರೌಂಡ್ ಬಗ್ಗೆ ಸಾಚಾರಂತೆ ಮಾತಾಡ್ತಾರೆ. ಆ ವ್ಯಕ್ತಿಯ ದಾಖಲೆಗಳು ನನ್ನ ಬಳಿಯಿದೆ. ಸಮಯ ಬಂದಾಗ ಸಾಕ್ಷಿ ಸಮೇತ ಜನರ ಮುಂದೆ ಬಿಚ್ಚಿಡ್ತೀನಿ ಅಂತ ಮಾಜಿ ಸಚಿವ ಶ್ರೀರಾಮುಲು ಅವರು ಪರೋಕ್ಷವಾಗಿ ಜನಾರ್ದನ ರೆಡ್ಡಿ ಅವರಿಗೆ ಎಚ್ಚರಿಕೆ ಕೊಟ್ಟರು.
Advertisement
ಬಳ್ಳಾರಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಶ್ರೀರಾಮುಲು ಜನಾರ್ದನ ರೆಡ್ಡಿ ಆರೋಪಗಳಿಗೆ ಕೌಂಟರ್ ಕೊಟ್ಟಿದ್ದಾರೆ. ಇದೇ ವೇಳೆ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿಯನ್ನು ಮಣಿಸಲು ಹೇಗಾದರೂ ಮಾಡಿ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಕರೆದುಕೊಳ್ಳುವ ಸಂಬಂಧ ಮಾತುಕತೆ ನಡೆಸುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸತೀಶ್ ಜಾರಕಿಹೊಳಿಯನ್ನ ಮಟ್ಟ ಹಾಕೋದಕ್ಕೆ ನಾನ್ಯಾರು? ಕಾಂಗ್ರೆಸ್ ನಲ್ಲೂ ವಾಲ್ಮೀಕಿ ಸಮುದಾಯದ ನಾಯಕರಿದ್ದಾರೆ. ನಾನು ಸೋತಿದ್ದರೂ ನನ್ನ ಪಾರ್ಟಿಯಲ್ಲಿ ಪ್ರಬಲವಾಗಿದ್ದೇನೆ. ಸತೀಶ್ ಅವರನ್ನ ತೊಂದ್ರೆ ಕೊಡೋದಕ್ಕೆ ಡಿಕೆಶಿ ನನ್ನ ಬಳಕೆ ಮಾಡಿಕೊಳ್ತಾರೆ ಅನ್ನೋದು ಸುಳ್ಳು ಸೃಷ್ಟಿ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
Advertisement
ಮೊನ್ನೆ ನಡೆದಂತ ಕೋರ್ ಕಮಿಟಿಯಲ್ಲಿ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಸಭೆ ಕರೆದಿದ್ರು. ಸಂಜೆ 7 ಗಂಟೆಗೆ ಸಭೆ ಆರಂಭವಾಗಿತ್ತು. ಆ ಬಳಿಕ ಬೇರೆ ಬೇರೆ ವಿಚಾರ ಜಿಲ್ಲಾ ಅಧ್ಯಕ್ಷರು, ಸಂಘಟನೆ ವಿಚಾರಗಳ ಬಗ್ಗೆ ಚರ್ಚೆ ಆಯಿತು. ಈ ವೇಳೆ ಒಬ್ಬರು ನನ್ನತ್ತ ಅಸಹ್ಯವಾಗಿ ನೋಡಿ ಸಂಡೂರು ಸೋಲಲು ನೀನೇ ಕಾರಣ ಅಂತ ಅರೋಪ ಮಾಡಿದ್ರು. ನಾನು ಇದು ಸರಿ ಅಲ್ಲ ಎಂದು ಹೇಳಿದೆ. ಶಿಗ್ಗಾಂವಿ ಜೊತೆಗೆ ಸಂಡೂರಿನಲ್ಲೂ ಕೆಲಸ ಮಾಡಿದ್ದೇನೆ ಅಂತ ಹೇಳಿದೆ. ಈ ರೀತಿ ಹೇಳಿದ್ರೆ ಕಳಂಕ ಹೊತ್ತುಕೊಂಡಂತೆ ಆಗುತ್ತದೆ ಅಂತ ಹೇಳಿದೆ. ಅದಕ್ಕೆ ಆ ವ್ಯಕ್ತಿಗೆ ನೀವು ಸರಿಯಿಲ್ಲ, ಡಬಲ್ ಗೇಮ್ ಆಡ್ತೀರಿ ಎಂದು ಗಟ್ಟಿಯಾಗಿ ವಾದಿಸಿದೆ ಎಂದರು.
Advertisement
ಮುಂದುವರಿದು… ಕಳಂಕ ಇಲ್ಲದೇ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಇದನ್ನ ಸ್ಪಷ್ಟವಾಗಿ ಹೇಳಿದೆ, ನನಗೆ ಅಪಮಾನ ಮಾಡ್ತಿದ್ದೀರಿ. ಎರಡು ಬಾರಿ ಸೋತಿದ್ದೇನೆ. ಗಾಯದ ಮೇಲೆ ಬರೆ ಎಳೆಯಬೇಡಿ ಎಂದು ಸಭೆಯಿಂದ ಎದ್ದು ಹೋಗಲು ಮುಂದಾದೆ, ಆಗ ನಮ್ಮ ನಾಯಕರು ಇದು ಶೋಭೆಯಲ್ಲ ಎಂದು ನನ್ನ ಸಮಾಧಾನ ಮಾಡಿದ್ರು ಎಂದು ಹೇಳಿದರು.
ರಾಜ್ಯಾಧ್ಯಕ್ಷರು ನನ್ನ ರಕ್ಷಣೆಗೆ ನಿಲ್ಲಬೇಕಿತ್ತು. ಅದ್ರೆ ಸಂಪೂರ್ಣ ಸೋಲು ನಿನ್ನಿಂದಲೇ ಆಗಿದೆ ಎಂದಾಗಲೂ ಸುಮ್ಮನಿದ್ರು ರಕ್ಷಣೆ ಬರಲಿಲ್ಲ. ನಾನೇನು ಮಾಡಲಿ ಎಂದು ರಾಜ್ಯಾಧ್ಯಕ್ಷ ಹೇಳಿದ್ರು. ಆಗ ಸದಾನಂದಗೌಡ ಮಾತಾಡಿದ್ರು, ನಾನೇ ಸಂಡೂರಿಗೆ ಹೋಗಿ ಬಂದಿದ್ದೇನೆ ಅಂದ್ರು. ಆಗ ಉಸ್ತುವಾರಿ ತಮ್ಮ ಮಾತು ವಾಪಾಸ್ ತಗೋತೀನಿ ಅಂದ್ರು. ಜನಾರ್ದನರೆಡ್ಡಿ ಮಾತು ಕೇಳಿಕೊಂಡು, ಸುಳ್ಳಿನ ಕೋಟೆ ಕಟ್ಟಿದ್ದಾರೆ. ಬಂಗಾರು ಹನುಮಂತು ಮಾತು ಕೇಳಿ ಆರೋಪ ಮಾಡಿದ್ದಾರೆ ಎಂದು ನೇರಾ ನೇರಾ ಆರೋಪ ಮಾಡಿದರು.
ಅಲ್ಲೇ ಮಾಧ್ಯಮಗಳಿಗೆ ಮಾತಾಡೋದು ಬೇಡ ಅಂದಾಗ ನಾನು ವಾಪಸ್ ಬಂದೆ. ಈಗ ಮಾಧ್ಯಮದಲ್ಲಿ ಬಂದಾಗ ನಾನು ಮಾತನಾಡಿದೆ. ನನ್ನ ವಿರುದ್ಧ ಹೇಳಿಕೆ ನೀಡಿದಾಗಲೂ ನಾನು ಮಾತನಾಡದೇ ಇದ್ದರೆ ತಪ್ಪಿತಸ್ಥನಾಗುತ್ತೇನೆ. ಏಕೆಂದರೆ ನನ್ನ ಪಕ್ಷ ನನಗೆ ತಾಯಿ ಇದ್ದಂತೆ, ತಾಯಿಗೆ ದ್ರೋಹ ಮಾಡೋ ಕೆಲಸ ಮಾಡಲ್ಲ. ಆ ಸಂಸ್ಕೃತಿಯನ್ನ ನಮ್ಮ ಹಿರಿಯರೂ ನನಗೆ ಹೇಳಿಕೊಟ್ಟಿಲ್ಲ ಎಂದು ಭಾವುಕರಾದರು.
ಇನ್ನೂ ಪಕ್ಷ ಬಿಡ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ನನಗೆ ತುಂಬ ಜನ ಈ ಪ್ರಶ್ನೆ ಕೇಳಿದ್ರು, ನಾನು ಪಕ್ಷ ತೊರೆಯಲ್ಲ. ಪ್ರಧಾನಿಗಳನ್ನ, ವರಿಷ್ಠರನ್ನ ಭೇಟಿ ಮಾಡ್ತೀನಿ ಅಂತ ಹೇಳಿದೆ. ಪ್ರಧಾನಿ, ಅಮಿತ್ ಶಾ ಅವರ ವಿಶ್ವಾಸ ಕಳೆದುಕೊಳ್ಳಲ್ಲ ಎಂದು ಹೇಳಿದೆ. ಎಲ್ಲಾ ಕೇಂದ್ರ ನಾಯಕರಿಗೆ ತಿಳಿಸ್ತೇನೆ ಎಂದು ಹೇಳಿದೆ. ಸುಳ್ಳು ಬಲಾಢ್ಯರ ಕೈಯಲ್ಲಿದ್ದಾಗ ಅದು ಸತ್ಯ ಆಗ್ತದೆ. ಸುಳ್ಳಿನ ಮುಂದೆ ಸತ್ಯ ಸೋಲುತ್ತೆ ಎಂದು ಕಳವಳ ವ್ಯಕ್ತಪಡಿಸಿದರು.
ಈತನೇ ಗೆಲ್ಲಿಸಿಬಿಟ್ನಾ?
ನಮ್ಮದು ಪೊಲಿಟಿಕಲ್ ಫ್ಯಾಮಿಲಿ, ನಾನು ಹಾದಿ-ಬೀದಿಯಿಂದ ಬಂದವನಲ್ಲ. ನಮ್ಮ ಮಾವನವರಿಂದ, ಅಜ್ಜಿ ಕಾಲದಿಂದಲೂ ರಾಜಕೀಯದಲ್ಲಿದ್ದೀನಿ. ಹೋರಾಟದಿಂದ ಮೇಲೆ ಬಂದಿದ್ದೇನೆಯೇ ಹೊರತು, ಯಾರದ್ದೋ ಕೃಪಾಕಟಾಕ್ಷದಿಂದ ಮೇಲೆ ಬಂದಿಲ್ಲ. ನಮಗೆ ಪಕ್ಷದ ಕ್ರೆಡಿಬಲಿಟಿ ಮುಖ್ಯವೇ ಹೊರತು. ಸೋಲು-ಗೆಲುವಲ್ಲ. ಮೊಣಕಾಲ್ಮೂರಿನಲ್ಲಿ ಮ್ಯಾಜಿಕ್ ಮಾಡಿ 43,000 ವೋಟ್‌ನಿಂದ ಗೆಲ್ಲಿಸಿದ್ದೀನಿ ಎಂದು ಹೇಳಿದ್ದಾರೆ. ಆಗ ಪಕ್ಷ ಎರಡೂ ಕಡೆ ನಿಲ್ಲಲು ಅವಕಾಶ ಮಾಡಿಕೊಟ್ಟಿತು. ಏನೂ ಇಲ್ಲದೇ ಈತ ಮ್ಯಾಜಿಕ್ ಮಾಡಿ ಗೆಲ್ಲಿಸಿಬಿಡ್ನಾ? ಈತನೇ ಗೆಲ್ಲಿಸಿಬಿಟ್ನಾ? ಯಾರೂ ಯಾರನ್ನೂ ಗೆಲ್ಲಿಸಿಲ್ಲ, ಸೋಲಿಸಿಲ್ಲ. 2018ರಲ್ಲಿ ರಾಮುಲು ಅಲ್ಲಿ ನಿಂತಿದ್ದಕ್ಕೆ 6 ಕ್ಷೇತ್ರದಲ್ಲಿ ಗೆದ್ವಿ. ರಾಮುಲು ಪ್ರಭಾವದಿಂದಲೇ ಅಲ್ಲಿ ಅಷ್ಟು ಸ್ಥಾನ ಬಂದ್ವು ಎಂದು ಹೆಸರು ಹೇಳದೆಯೇ ಜನಾರ್ದನ ರೆಡ್ಡಿ ವಿರುದ್ಧ ಕಿಡಿ ಕಾರಿದರು.
ಎಲ್ಲದಕ್ಕಿಂತ ಸ್ವಾಭಿಮಾನ ದೊಡ್ಡದು ಅದಕ್ಕೆ ನಾನು ಪಾರ್ಟಿ ಬಿಡೀನಿ ಅಂತ ಹೇಳಿದ್ದೆ. ಜನಾರ್ದನರೆಡ್ಡಿಗೆ ಸುಪ್ರೀಂ ಕೋರ್ಟ್ ಬಳ್ಳಾರಿಗೆ ನಿಷೇಧ ಹೇರಿದಾಗ ಪಾರ್ಟಿ ಬೆಳೆಸಿದ್ದು ನಾನು. ನು 6 ಬಾರಿ ಶಾಸಕನಾಗಿದ್ದೇನೆ, ಜನಾರ್ದನರೆಡ್ಡಿ ಒಂದು ಬಾರಿ ಆಗಿದ್ದಾನೆ. ಹಿಂದೆ ಎನ್‌ಡಿಎ ಸರ್ಕಾರ ಇದ್ದಾಗ, ನಾನು ಸಂದನಾಗಿದ್ದೆ. ಆಗ ರೆಡ್ಡಿ ಜೈಲಿನಲ್ಲಿದ್ದರು. ಜೈಲಿನಲ್ಲಿದ್ದಾಗ ಅವರನ್ನ ಹೊರ ತರೋದಕ್ಕೆ ಸಾಕಷ್ಟು ಪ್ರಯತ್ನಿಸಿದೆ. ಎಲ್ಲರೂ ಸೇರಿ ಪಾರ್ಟಿ ಕಟ್ಟಿದ್ದೇವೆ. ಜನಾರ್ದನರೆಡ್ಡಿ 2018ರಲ್ಲಿ ಜೈಲಿನಿಂದ ಮೊದಲ ಬಾರಿಗೆ ಬಳ್ಳಾರಿಗೆ ಬಂದಿದ್ರು. ಆಗ ನಾನು ಮಂತ್ರಿ ಇದ್ದೆ. ಆಗ 25,000 ಜನರನ್ನ ಸೇರಿಸಿ ಭವ್ಯ ಸ್ವಾಗತ ಮಾಡಿ ಕರೆತಂದಿದ್ದು ನಾನು. ಮೊನ್ನೆ ಬಂದಾಗ ಅವರನ್ನ ಸ್ವಾಗತಿಸಲು ಬಂದಿಲ್ಲ ಅನ್ನೋದು ಕೋಪ ಎಂದು ವ್ಯಂಗ್ಯವಾಡಿದ್ರು.