ಇಂದು ಭಾವನಾತ್ಮಕ ಪೋಸ್ಟ್ ಮಾಡಿದ್ದ ಶೇನ್ ವಾರ್ನ್

Public TV
1 Min Read
SHANE WARNE 1

ಸಿಡ್ನಿ: ಆಸ್ಟ್ರೇಲಿಯಾದ ಲೆಗ್ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಇಂದು ಬೆಳಗ್ಗೆ ಟ್ವಿಟ್ಟರ್‌ನಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದರು. ಆ ಬಳಿಕ ಇದೀಗ ವಾರ್ನ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

AUSTRALIAYA

ಹೌದು ಇಂದು ಬೆಳಗ್ಗೆ ಟ್ವಿಟ್ಟರ್‌ನಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ರಾಡ್ ಮಾರ್ಷ್ ನಿಧನಕ್ಕೆ ಟ್ವೀಟ್ ಮಾಡಿ ವಾರ್ನ್ ಸಂತಾಪ ಸೂಚಿಸಿದ್ದರು. ಆ ಬಳಿಕ ಇದೀಗ 12 ಗಂಟೆಗಳ ಅವಧಿಯಲ್ಲಿ 52 ವರ್ಷದ ವಾರ್ನ್ ಕೂಡ ಇಹಲೋಕ ತ್ಯಜಿಸಿದ್ದು ಕ್ರಿಕೆಟ್ ಲೋಕವೇ ಶಾಕ್ ಆಗಿದೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಇನ್ನಿಲ್ಲ

ಟ್ವೀಟ್‍ನಲ್ಲಿ ಏನಿದೆ?
ರಾಡ್ ಮಾರ್ಷ್ ನಿಧನದ ಸುದ್ದಿ ಕೇಳಿ ನನಗೆ ತುಂಬಾ ನೋವಾಗಿದೆ. ರಾಡ್ ಮಾರ್ಷ್ ಲೆಜೆಂಡ್ ಆಟಗಾರ, ಹಲವು ಯುವಕ, ಯುವತಿಯರಿಗೆ ಸ್ಫೂರ್ತಿಯಾಗಿದ್ದರು. ಅವರಲ್ಲಿ ಕ್ರಿಕೆಟ್ ಬಗ್ಗೆ ತುಂಬಾ ಜ್ಞಾನವಿತ್ತು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರಿಗೆ ಸಾಕಷ್ಟು ನೆರವಾಗಿದ್ದರು. ಆದರೆ ಇದೀಗ ನಮ್ಮೊಂದಿಗಿಲ್ಲ. ಅವರ ಕುಟುಂಬಕ್ಕೆ ದೇವರು ಅಗಲಿಕೆಯ ನೋವನ್ನು ತಡೆಯುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದರು. ಇದನ್ನೂ ಓದಿ: ಶತಕ ವಂಚಿತ ಪಂತ್ – ಬೃಹತ್ ಮೊತ್ತದತ್ತ ಭಾರತ

ಶೇನ್ ವಾರ್ನ್ ನಿಧನದ ಸುದ್ದಿ ಕೇಳಿ ಮಾಜಿ ಆಟಗಾರರು ಸೇರಿದಂತೆ ಅಭಿಮಾನಿಗಳು ಶಾಕ್ ಆಗಿದ್ದಾರೆ. ಭಾರತ ಮಾಜಿ ಆಟಗಾರರಾದ ವಿರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.

Share This Article