ಲಕ್ನೋ: ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ (Wife) ಚಿತ್ರಹಿಂಸೆ ನೀಡಿ ಮೃಗೀಯವಾಗಿ ವರ್ತಿಸಿರುವ ಘಟನೆ ಉತ್ತರಪ್ರದೇಶದ (UttarPradesh) ಪಿಲಿಭಿತ್‌ನಲ್ಲಿ ನಡೆದಿದೆ.
ಊಟ ಮಾಡುತ್ತಿದ್ದ ವೇಳೆ ಆಹಾರದಲ್ಲಿ (Food) ಕೂದಲು ಸಿಕ್ಕಿದ್ದರಿಂದ ಕೋಪಕೊಂಡ ಪತಿ, ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಕೈಕಾಲು ಕಟ್ಟಿ ಬಲವಂತವಾಗಿ ಲೈಂಗಿಕ ಸಂಭೋಗ ನಡೆಸಲು ಯತ್ನಿಸಿದ್ದಾನೆ. ಅದು ಸಾಧ್ಯವಾಗದಿದ್ದರಿಂದ ಆಕೆಯ ತಲೆ ಬೋಳಿಸಿದ್ದಾನೆ. ಪಿಲಿಭಿತ್‌ನ ಗಜ್ರೌಲಾ ಪೊಲೀಸ್ ಠಾಣೆ (Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪತಿ ವಿರುದ್ಧ ಸಂತ್ರಸ್ತ ಮಹಿಳೆ ದೂರು ನೀಡಿದ್ದಾಳೆ. ಇದನ್ನೂ ಓದಿ: ಕಿರುಕುಳ ವಿರೋಧಿಸಿದ್ದಕ್ಕೆ ತಾಯಿ ಮಗುವನ್ನು ಹೊರದೂಡಿದ ಕ್ಯಾಬ್ ಚಾಲಕ- ಮಗು ಸಾವು
ಪತಿಯ ಪೋಷಕರೂ ಸಾಥ್:
ಸೈಕೋನಂತೆ ವರ್ತಿಸಿ ಪತ್ನಿಗೆ ಚಿತ್ರಹಿಂಸೆ ನೀಡುವಾಗ ಪತಿಗೆ ಆತನ ಪೋಷಕರೂ ಸಾಥ್ ನೀಡಿದ್ದಾರೆ. ಮನಬಂದಂತೆ ಥಳಿಸುತ್ತಿದ್ದರೂ, ನನ್ನ ಅತ್ತೆ-ಮಾವ ಸಹಾಯಕ್ಕೆ ಬರಲಿಲ್ಲ. ಮೃಗೀಯವಾಗಿ ವರ್ತಿಸುತ್ತಿರುವುದನ್ನು ಕಂಡು ಅತ್ತೆ-ಮಾವ ಮಜಾ ತೆಗೆದುಕೊಳ್ಳುತ್ತಿದ್ದರು. ನನ್ನನ್ನು ರಕ್ಷಿಸದೆ ನನ್ನ ಗಂಡನಿಗೆ ಸಾಥ್ ನೀಡಿದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಬಳಿಕ ಘಟನೆಯ ಕುರಿತು ಮಹಿಳೆ ತನ್ನ ಪೋಷಕರಿಗೆ ದೂರವಾಣಿ ಕರೆ ಮೂಲಕ ತಿಳಿಸಿದ್ದಾಳೆ. ತಕ್ಷಣವೇ ಸಮಸ್ಯೆಯನ್ನು ಬಗೆಹರಿಸಿ ಸಮಾಧಾನ ಪಡಿಸಲು ಬಂದ ಪತ್ನಿಯ ಪೋಷಕರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ತನ್ನ ಪತಿ ವರದಕ್ಷಿಣೆಗೆ ಒತ್ತಾಯಿಸಿದ್ದಾನೆ ಎಂದೂ ಆಕೆ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ವೀಡಿಯೋ ಚಿತ್ರೀಕರಣ- ಬೆಂಗ್ಳೂರಲ್ಲೊಬ್ಬ ಸೈಕೋಪಾತ್ ಪತಿ!
ಸದ್ಯ ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಆರೋಪಿ ಪತಿ, ಅತ್ತೆ ಮತ್ತು ಮಾವನ ವಿರುದ್ಧ ಪೊಲೀಸರು ಪ್ರಕರಣ (FIR) ದಾಖಲಿಸಿ, ಆರೋಪಿ ಪತಿಯನ್ನ ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಯನ್ನು ತವರು ಮನೆಗೆ ಕಳುಹಿಸಿಕೊಡಲಾಗಿದೆ.