Connect with us

ಏನ್ ಮಾಡಿದ್ದೀರಾ ಎಂದು ಗೀತಾರನ್ನು ಗ್ರಾಮಸ್ಥ ಪ್ರಶ್ನಿಸಿದ್ದಕ್ಕೆ ಗುಂಡ್ಲುಪೇಟೆಯಲ್ಲಿ ‘ಕೈ’ ಗೂಂಡಾಗಿರಿ

ಏನ್ ಮಾಡಿದ್ದೀರಾ ಎಂದು ಗೀತಾರನ್ನು ಗ್ರಾಮಸ್ಥ ಪ್ರಶ್ನಿಸಿದ್ದಕ್ಕೆ ಗುಂಡ್ಲುಪೇಟೆಯಲ್ಲಿ ‘ಕೈ’ ಗೂಂಡಾಗಿರಿ

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತಯಾಚನೆಯ ವೇಳೆ ಗ್ರಾಮಸ್ಥನೊಬ್ಬ ಕೇಳಿದ ಪ್ರಶ್ನೆಗೆ ಕೋಪಗೊಂಡ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಓಡಿಸಿದ ಘಟನೆ ನಡೆದಿದೆ.

ಬೊಮ್ಮಲಾಪುರದ ಸಿದ್ದಮಲ್ಲೇಶ್ವರ ದಾಸೋಹ ಮಠದ ಬಳಿ ಈ ಘಟನೆ ನಡೆದಿದೆ. ಬೊಮ್ಮಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದರು. ಹೀಗೆ ಮನೆಗೆ ಬಂದ ಅಭ್ಯರ್ಥಿಯನ್ನು ನೀವು ಏನ್ ಮಾಡಿದ್ದೀರಾ ಅಂತಾ ಪಕ್ಕದ ಅಂಕಳ್ಳಿ ಗ್ರಾಮಸ್ಥ ಗುರುಸ್ವಾಮಿ ಕೇಳಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಸ್ಥನ ಪ್ರಶ್ನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ಮಂಜು ಕೈಯಲ್ಲಿ ಕಲ್ಲು ಹಿಡಿದು ಗ್ರಾಮಸ್ಥರನ್ನ ಅಲ್ಲಿಂದ ಓಡಿಸಿದ್ದಾರೆ.

ಈ ವೇಳೆ ಗೀತಾ ಮಹೇವಪ್ರಸಾದ್, ನೀವು ಶಾಂತವಾಗಿರಿ, ನೀವು ಏನು ಮಾತನಾಡಬಾರದು. ಈ ರೀತಿ ನಮ್ಮನ್ನ ಕೆರಳಿಸ್ತಾರೆ ನೀವು ಧೃತಿಗೆಡಬೇಡಿ. ಹೀಗೆ ಪಕ್ಕದ ಊರಿನಿಂದ ಬಂದು ಗಲಾಟೆ ಮಾಡ್ತಾರೆ. ಗಲಾಟೆ ಮಾಡುವ ಅವಶ್ಯಕತೆ ಇರಲಿಲ್ಲ ಅಂತಾ ಕೈ ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದಾರೆ.