ಧಾರವಾಡ: ಚುನಾವಣೆ ಸಮೀಪಿಸುತ್ತಿದ್ದಂತೆ ಹುತ್ತದಿಂದ ಅನೇಕ ಹಾವುಗಳು ಹೊರ ಬರುತ್ತವೆ. ನೋಡೋಣ ಇನ್ನೂ ಯಾವ ಯಾವ ಹಾವುಗಳು ಬರುತ್ತವೆ ಎಂದು ಸಚಿವ ವಿನಯ್ ಕುಲಕರ್ಣಿ ನಟ ಉಪೇಂದ್ರ ಅವರ ರಾಜಕೀಯ ಪ್ರವೇಶಕ್ಕೆ ಟಾಂಗ್ ನೀಡಿದ್ದಾರೆ.
ರಾಜಕೀಯಕ್ಕೆ ಬರೋದು ಅವರವರ ಆಸಕ್ತಿ ಅವರಿಗೆ ಬಿಟ್ಟಿದ್ದು. ಉಪೇಂದ್ರ ಸಿನಿಮಾದಲ್ಲಿ ಕ್ಲಿಕ್ ಆಗಿದ್ದಾರೆ. ರಾಜಕಾರಣದಲ್ಲೂ ಕ್ಲಿಕ್ ಆಗಬಹುದು. ಆದ್ರೆ ಉಪೇಂದ್ರ ಇದೂವರೆಗೂ ರೈತಪರ ಮತ್ತು ಬಡವರ ಪರ ಕೆಲಸಗಳನ್ನು ಮಾಡಿಲ್ಲ. ನೇರವಾಗಿ ರಾಜಕೀಯ ಪ್ರವೇಶ ಮಾಡ್ತಾಯಿದ್ದಾರೆ. ಅವರಿಗೆ ದೇವರು ಒಳ್ಳೇದು ಮಾಡಲಿ ಎಂದು ವಿನಯ್ ಕುಲಕರ್ಣಿ ಹೇಳಿದರು.
ಇದನ್ನೂ ಓದಿ: ಸಿಎಂ ತರಾಟೆಗೆ ತೆಗೆದುಕೊಂಡ ಜನಾರ್ದನ ಪೂಜಾರಿ- ನಟ ಉಪೇಂದ್ರ ಬಗ್ಗೆ ಹೀಗಂದ್ರು
ಇದನ್ನೂ ಓದಿ: ಉಪ್ಪಿ ರಾಜಕಾರಣಕ್ಕೆ ಎಂಟ್ರಿ-ಹೇಗಿರಲಿದೆ ಉಪ್ಪಿ ಪಕ್ಷ? ಇಲ್ಲಿದೆ ಉತ್ತರ
ಈ ಹಿಂದೆ ಹೊಸ ಪಕ್ಷ ಕಟ್ಟಿ ಚಿರಂಜಿವಿ ಅಂಥವರೇ ಸಕ್ಸಸ್ ಆಗಿಲ್ಲ. ಸಿನಿಮಾದವರ ಬಳಿ ದುಡ್ಡು ಇರುತ್ತೆ, ಹಾಗಾಗಿ ರಾಜಕೀಯಕಕ್ಕೆ ಬರ್ತಾ ಇದ್ದಾರೆ. ಉಪೇಂದ್ರ ಅಭಿಮಾನಿಗಳನ್ನು ಹೊಂದಿದ್ದಾರೆ. ಉಪೇಂದ್ರ ತಾವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತವೆ. ಉಪೇಂದ್ರ ಅವರ ಎಂಟ್ರಯಿಂದ ನಮ್ಮಲ್ಲಿ ಯಾವುದೇ ಬದಲಾವಣೆಗಳು ಆಗುವದಿಲ್ಲ ಅಂದ್ರು.
ಇದನ್ನೂ ಓದಿ: ನಟ ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಡಿಕೆಶಿ ಹೀಗಂದ್ರು