ಬಾಗಲಕೋಟೆ: ದೇಶಕ್ಕೆ ಮುಸ್ಲಿಮರು (Muslims) ಬಂದಿದ್ದು ಯಾವಾಗ? ಮಂತ್ರಿಯಾಗಿ ಇವರಿಗೆ ಚರಿತ್ರೆಯೇ ಗೊತ್ತಿಲ್ಲ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ (Shivanand Patil) ವಿರುದ್ಧ ಮಾಜಿ ಡಿಸಿಎಂ ಈಶ್ವರಪ್ಪ (Eshwarappa) ಕಿಡಿಕಾರಿದ್ದಾರೆ.
ಮುಸ್ಲಿಂ ರಾಜರು ಹಿಂದುಗಳ ಮಠ ಮಾನ್ಯಗಳಿಗೆ ಜಮೀನು ದಾನ ನೀಡಿದ್ದರು ಎಂದು ಸಚಿವ ಶಿವಾನಂದ ಪಾಟೀಲ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಇವರು, ಮುಸಲ್ಮಾನರನ್ನು ಸಂತೃಪ್ತಿ ಪಡಿಸುವ ವಿಚಾರದಲ್ಲಿ ಜಮೀರ್ ಅಹ್ಮದ್ (Zameer Ahmed) ಮೊದಲನೇ ಸ್ಥಾನದಲ್ಲಿದ್ದರೆ ಶಿವಾನಂದ ಪಾಟೀಲ ಎರಡನೇ ಸ್ಥಾನದಲ್ಲಿ ಬರುತ್ತಾರೆ ಎಂದು ಗರಂ ಆದರು. ಇದನ್ನೂ ಓದಿ: 10,000 ಹೆಕ್ಟೇರ್ ಬೆಳೆ ಹಾನಿ – ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ, ರೈತರ ಕಣ್ಣಲ್ಲಿ ನೀರು
ಭಾರತ ಸಾಧು ಸಂತರ ನಾಡು. ಮುಸ್ಲಿಮರು ಆಕ್ರಮಣಕಾರಿಗಳು. ಇಲ್ಲಿಯ ಆಸ್ತಿ ಪಾಸ್ತಿ ಲೂಟಿ ಮಾಡಿ ಮಹಿಳೆಯರನ್ನ ಮತಾಂತರ ಮಾಡಿ, ಗೋವುಗಳನ್ನು ಕಡಿದು ರಾಜ್ಯಭಾರ ಮಾಡಿದ್ದರು. ಅವರೇನು ನಮಗೆ ಕೊಡುವಂತದ್ದು ಇಲ್ಲ ಎಂದರು.
ನಮ್ಮ ಭೂಮಿಯನ್ನು ವಕ್ಫ್ ಆಸ್ತಿ ಎಂದು ಮಾಡುತ್ತಿರುವುದನ್ನ ವಾಪಸ್ ತೆಗೆದುಕೊಳ್ಳುವವರೆಗೆ ಹಿಂದೂ ಸಮಾಜ ಬಿಡಲ್ಲ. ಆಗದೇ ಇದ್ದರೆ ಈ ರಾಜ್ಯದಲ್ಲಿ ರಕ್ತಕ್ರಾಂತಿ ಆಗುತ್ತೆ. ನಮ್ಮ ಸಾಧು ಸಂತರು ಸುಮ್ಮನೆ ಕುಳಿತಿಲ್ಲ. ಎಲ್ಲೆಲ್ಲಿ ದೇವಸ್ಥಾನ, ಮಠ ಮಾನ್ಯಗಳನ್ನ ಆಕ್ರಮಣ ಮಾಡಿ ವಕ್ಫ್ ಆಸ್ತಿ ಎಂದು ನಮೂದಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ವಕ್ಪ್ ನೋಟಿಸ್ ಹಿಂದೆ ಪಡೆದಿದ್ದು ದೊಡ್ಡದಲ್. ಈ ಮೂಲಕ ಸರ್ಕಾರ ನಾನು ತಪ್ಪು ಮಾಡಿದೆ ಎಂದು ಒಪ್ಪಿದಂತಾಗಿದೆ. ಕೆ.ಎನ್.ರಾಜಣ್ಣ ಜಮೀರ್ ಅಹ್ಮದ್ ಮಾಡಿದ್ದು ತಪ್ಪು. ಯಾವುದೇ ಕಾರಣಕ್ಕೆ ಒಪ್ಪಲ್ಲ ಅಂದಿದ್ದಾರೆ. ಕ್ಯಾಬಿನೆಟ್‌ನಲ್ಲಿ ಒಬ್ಬರಾದರೂ ಗಂಡು ಇದ್ದಾರಲ್ಲ ಅಂತ ಅವರಿಗೆ ಅಭಿನಂದಿಸುವೆ ಎಂದರು.