ಬೆಂಗಳೂರು: ಯಡಿಯೂರಪ್ಪ (BS Yediyurappa) ಸಿಎಂ ಆಗಿದ್ದಾಗ ಅಡುಗೆಯವರಿಂದ ಹಿಡಿದುಕೊಂಡು ಕಾರ್ ಡ್ರೈವರ್‌ವರೆಗೂ ಲಿಂಗಾಯತರನ್ನೆ (Lingayats) ಇಟ್ಟುಕೊಂಡಿದ್ದರು. ಯಡಿಯೂರಪ್ಪಗೆ ನಾಚಿಕೆ ಮಾನ ಮರ್ಯಾದೆ ಇದೆಯಾ ಎಂದು ಯಡಿಯೂರಪ್ಪ ವಿರುದ್ಧ ಏಕವಚನದಲ್ಲಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalakrishna) ವಾಗ್ದಾಳಿ ನಡೆಸಿದ್ದಾರೆ.
ಲಿಂಗಾಯತ ಅಧಿಕಾರಿಗಳಿಗೆ ಈ ಸರ್ಕಾರದಲ್ಲಿ ಅನ್ಯಾಯ ಆಗುತ್ತಿದೆ ಎಂಬ ಶಾಮನೂರು (Shamanur Shivashankarappa) ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರು ಆದ್ಯತೆ ಮೇರೆಗೆ ಅಧಿಕಾರಿಗಳ ವರ್ಗಾವಣೆ ಮಾಡುತ್ತಾರೆ. ಜಾತಿ ಆಧಾರದಲ್ಲಿ ಅಧಿಕಾರಿಗಳನ್ನು ನೇಮಕಾತಿ ಮಾಡೋದಿಲ್ಲ. ಏನು ಲಿಂಗಾಯತ ಜಾತಿಯವರು ಒಬ್ಬರೇ ಇರ್ತಾರಾ? ಎಲ್ಲಾ ಜಾತಿಯವರು ಇರೋದಿಲ್ವಾ? ಎಲ್ಲಾ ಜಾತಿಗೂ ಕೊಡಬೇಕಾಗುತ್ತದೆ. ಶಾಮನೂರು ಎಲ್ಲಾ ಜಾತಿಯವರ ಪರ ಮಾತನಾಡಬೇಕಿತ್ತು. ಇಲ್ಲ ಅಂದರೆ ನಮ್ಮ ಜಾತಿಯನ್ನು ಕಡೆಗಣಿಸುತ್ತಿದ್ದಾರೆ ಅಂತ ನಾವು ಹೇಳಬೇಕಾಗುತ್ತದೆ ಎಂದು ಶಾಮನೂರು ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಈ ಬಾರಿ ಖರ್ಗೆ ಬದಲಾಗಿ ರಾಧಾಕೃಷ್ಣಗೆ ಕಲಬುರಗಿ ಎಂಪಿ ಟಿಕೆಟ್: ಚಿಂಚನಸೂರು
Advertisement
Advertisement
ಶಾಮನೂರು ಹಿರಿತನಕ್ಕೆ ಗೌರವ ಕೊಡಬೇಕು. ಹೀಗೆ ಹೇಳಿಕೆ ಕೊಡೋದು ತಪ್ಪು. ಅದಕ್ಕೆ ಯಡಿಯೂರಪ್ಪ ಅವರು ಸಾಥ್ ಕೊಡುತ್ತೇನೆ ಎನ್ನುತ್ತಾರೆ. ಯಡಿಯೂರಪ್ಪ ಅಡುಗೆಯವರಿಂದ ಹಿಡಿದು ಡ್ರೈವರ್, ಕ್ಲೀನರ್‌ವರೆಗೂ ಲಿಂಗಾಯತರನ್ನು ಇಟ್ಟುಕೊಂಡಿದ್ದರು. ಯಡಿಯೂರಪ್ಪ ಶಾಮನೂರು ಮಾತಿಗೆ ಸಾಥ್ ಕೊಡ್ತೀನಿ ಅಂತಾರೆ. ಯಡಿಯೂರಪ್ಪಗೆ ಮಾನ ಮರ್ಯಾದೆ ಇದೆಯಾ? ಅವರು ಯಾವ ಜಾತಿಯವರನ್ನು ಇಟ್ಟುಕೊಂಡಿದ್ರು ಕೇಳಿ ಮೊದಲು ಎಂದು ಏಕವಚನದಲ್ಲಿ ಮಾತನಾಡಿದರು. ಇದನ್ನೂ ಓದಿ: ಕೆಲವರಿಗೆ ಹುಚ್ಚು ಹಿಡಿದು ಸಿಎಂ ಸ್ಥಾನದ ಬಗ್ಗೆ ಮಾತಾಡ್ತಾರೆ: ಕೊತ್ತೂರು ಮಂಜುನಾಥ್
Advertisement
ಯಡಿಯೂರಪ್ಪನ ಆಫೀಸ್‌ನಲ್ಲಿ ಪೂರ್ತಿ ಲಿಂಗಾಯತರು ಇದ್ದರು. ಶಾಮನೂರು ಅವರು ಹಿರಿಯರು. ಸಿಎಂ ಅವರು ಯಾರಿಗೆ ನೇಮಕ ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಸಿಎಂ ಆದ ಮೇಲೆ ಸಿದ್ದರಾಮಯ್ಯ ಕುರುಬರ ಅಧಿಕಾರಿಗಳನ್ನು ಸ್ವಲ್ಪ ತಮ್ಮ ಸುತ್ತಮುತ್ತು ಮಾಡಿಕೊಂಡು ಇರುತ್ತಾರೆ. ಇಲ್ಲ ಅನ್ನೋಕೆ ಆಗಲ್ಲ. ಯಡಿಯೂರಪ್ಪ ಯಾರನ್ನು ಮಾಡಿದ್ರು ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಧರ್ಮ ಇಲ್ಲ ಎಂದು ಹೇಳುವವರನ್ನ ಗಲ್ಲಿಗೇರಿಸಬೇಕು – ಶಾಸಕ ಕೊತ್ತೂರು ಮಂಜುನಾಥ್
Advertisement
ಶಾಮನೂರು ಹಾಗೆ ಮಾತನಾಡಬಾರದು. ರಾಜ್ಯದ ಮುಖ್ಯಮಂತ್ರಿಗಳು ಏನು ಬೇಕೋ ಅದನ್ನು ಮಾಡುತ್ತಾರೆ. ನಮಗೆ ಬೇಜಾರು ಆಗಿದ್ದು ಯಡಿಯೂರಪ್ಪ ಸಾಥ್ ಅಂದಿದ್ದು. ತಮ್ಮ ಇಡೀ ಆಡಳಿತದಲ್ಲಿ ಲಿಂಗಾಯತರನ್ನ ಇಟ್ಟುಕೊಂಡು ಆಡಳಿತ ಮಾಡಿದ್ದು ಯಡಿಯೂರಪ್ಪ. ಈಗ ಶಾಮನೂರು ಹೇಳಿಕೆಗೆ ಸಾಥ್ ಕೊಡುತ್ತೇನೆ ಅಂದರೆ ಯಡಿಯೂರಪ್ಪಗೆ ನಾಚಿಕೆ ಆಗಬೇಕು. ಲಿಂಗಾಯತರೇ ಇರೋದಾ ಈ ರಾಜ್ಯದಲ್ಲಿ? ಬೇರೆಯವರು ಇಲ್ವಾ? ಎಲ್ಲಾ ಜಾತಿಯವರಿಗೂ ಅವಕಾಶ ಕೊಡಬೇಕು. ಎಲ್ಲಾ ಜಾತಿ ಓಟು ಕೊಟ್ಟು 135 ಸ್ಥಾನ ಬಂದಿದೆ. ಕುರುಬ, ಒಕ್ಕಲಿಗ, ಈಡಿಗ ಎಲ್ಲರಿಗೂ ಅವಕಾಶ ಕೊಡಲಿ. ಶಾಮನೂರು ಮಗನಿಗೆ ಅಧಿಕಾರ ಕೊಟ್ಟಿದ್ದಾರೆ. ಯಾಕೆ ಅವರು ಹಾಗೆ ಮಾತನಾಡುತ್ತಾರೋ ಗೊತ್ತಿಲ್ಲ. ರಾಜ್ಯದ ಸಿಎಂ, ಡಿಸಿಎಂ ಯಾರಿಗೆ ಅಧಿಕಾರ ಕೊಡಬೇಕು ಅಂತ ತೀರ್ಮಾನ ಮಾಡುತ್ತಾರೆ. ಇವರು ಹೀಗೆ ಮಾತನಾಡುವುದು ಸರಿಯಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಸೌಹಾರ್ದಯುತ ಈದ್ ಮಿಲಾದ್ ಹಬ್ಬದಂದೇ ಕಿಡಿಗೇಡಿಗಳು ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ: ಉಮೇಶ್ ಜಾಧವ್
ಇನ್ನು 6 ತಿಂಗಳು ಸರ್ಕಾರ ಇರಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಧಮ್ ಇದ್ರೆ ತಾಕತ್ ಇದ್ದರೆ ನಮ್ಮ ಪಕ್ಷಕ್ಕೆ ಕೈ ಹಾಕಲಿ ನೋಡೋಣ. ಸರ್ಕಾರ ಬೀಳುತ್ತೆ ಅನ್ನೋದು ಹಗಲುಗನಸು ಕಾಣಬೇಕು. ಹೆಚ್‌ಡಿಕೆ ಇರಬಹುದು, ಯೋಗೇಶ್ವರ್ ಇರಬಹುದು. ಹಿಂದೆ 16 ಜನ ಎತ್ತುಕೊಂಡು ಹೋದ್ರಲ್ಲ. ಆ ತಾಕತ್ತು, ಆ ಧಮ್ಮು ನಮ್ಮ ಸಿಎಂ, ಡಿಸಿಎಂಗೆ ಇದೆ. ಅದನ್ನು ತಡೆಯೋಕೆ ಅವಕಾಶ ಇದೆ. ಧಮ್ ಇದ್ದರೆ ತಾಕತ್ ಇದ್ದರೆ ಕೈ ಹಾಕಲಿ ನೋಡೋಣ. ಆಗ ಏನು ಮಾಡಬೇಕು ಅಂತ ನಮಗೆ ಗೊತ್ತಿದೆ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ಕರ್ನಾಟಕ ಮತ್ತೊಂದು ಬಿಹಾರ ಆಗ್ತಿದೆ ಅನಿಸುತ್ತಿದೆ: ಆರ್. ಅಶೋಕ್
Web Stories