ಲಾಕ್‍ಡೌನ್ ಪರಿಣಾಮ ಎಲ್ಲರೂ ಮನೆಯಲ್ಲಿದ್ದೀರಿ. ಹೀಗಾಗಿ ದಿನಕ್ಕೆ ಮೂರು ಹೊತ್ತು ಬಿಸಿ ಬಿಸಿ ಅಡುಗೆ ಮಾಡಬೇಕು. ಅದರಲ್ಲೂ ಪ್ರತಿದಿನ ಬೆಳಗ್ಗೆ ಬೇರೆ ಬೇರೆ ರೀತಿಯ ತಿಂಡಿ ಮಾಡಿಕೊಡಬೇಕು. ಪ್ರತಿದಿನ ಯಾವ ಬಗೆಯ ತಿಂಡಿ ಮಾಡುವುದು ಎಂದು ಯೋಚನೆ ಮಾಡುತ್ತಿದ್ದೀರಾ. ನಿಮಗಾಗಿ ಆರೋಗ್ಯಕರವಾದ ಗೋಧಿ ದೋಸೆ ಮಾಡುವ ವಿಧಾನ ಇಲ್ಲಿದೆ….
Advertisement
ಬೇಕಾಗುವ ಸಾಮಾಗ್ರಿಗಳು
1. ಗೋಧಿ ಹಿಟ್ಟು- 2 ಕಪ್
2. ದನಿಯಾ ಪುಡಿ – 1/2 ಟೀ ಸ್ಪೂನ್
3. ಅರಿಶಿಣ – ಚಿಟಿಕೆ
4. ಖಾರದ ಪುಡಿ – 1/4 ಟೀ ಸ್ಪೂನ್
5. ಎಣ್ಣೆ – ಸ್ಪಲ್ಪ
6. ಉಪ್ಪು – ರುಚಿಗೆ ತಕ್ಕಷ್ಟು
7. ಟೊಮೆಟೋ – 1
8. ಈರುಳ್ಳಿ – 1
9. ಗಜ್ಜರಿ (ಕ್ಯಾರೆಟ್) – 1
10. ಕೋತಂಬರಿ – ಸ್ವಲ್ಪ
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಟೊಮೆಟೊ, ಈರುಳ್ಳಿ, ಕ್ಯಾರೆಟ್, ಕೋತಂಬರಿ ಸಣ್ಣದಾಗಿ ಕತ್ತರಿಸಿ ಒಂದು ಪ್ಲೇಟ್‍ನಲ್ಲಿ ತೆಗೆದಿಡಿ.
* ನಂತರ ಒಂದು ಮಿಕ್ಸಿಂಗ್ ಬೌಲ್‍ನಲ್ಲಿ ಗೋಧಿ ಹಿಟ್ಟು, ಉಪ್ಪು, ಅರಿಶಿಣ, ದನಿಯಾ ಪುಡಿ, ಖಾರದ ಪುಡಿ, ಉಪ್ಪು ಹಾಕಿಕೊಂಡು ದೋಸೆ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಿ.
* ಹಿಟ್ಟಿನಲ್ಲಿ ಯಾವುದೇ ಗಂಟುಗಳಿಲ್ಲದಂತೆ ಮಿಕ್ಸ್ ಮಾಡಿ.
* ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು, ಸ್ಪಲ್ಪ ಎಣ್ಣೆ ಸವರಿ. ಪ್ಯಾನ್ ಕಾದ ನಂತರ ಸಿದ್ಧಮಾಡಿಕೊಂಡಿದ್ದ ಹಿಟ್ಟನ್ನ ಪ್ಯಾನ್ ಮೇಲೆ ದೋಸೆ ರೀತಿಯಲ್ಲಿ ಹಾಕಿ (ಸೆಟ್ ದೋಸೆ ಹಾಗೆ ದಪ್ಪಗಿರಲಿ)
* ಮೊದಲಿಗೆ ಕತ್ತರಿಸಿಕೊಂಡಿದ್ದ ತರಕಾರಿಯನ್ನು ದೋಸೆ ಮೇಲೆ ಹಾಕಿ. ಈರುಳ್ಳಿ, ಕ್ಯಾರೆಟ್, ಟೊಮೆಟೋ ಕೊನೆಯದಾಗಿ ಕೋತಂಬರಿ ಸೊಪ್ಪು ಉದುರಿಸಿ.
* ದೋಸೆ ಬೆಂದ ಕೂಡಲೇ ತಿರುಚಿ ಹಾಕಿ, ಇನ್ನೊಂದು ಮೇಲ್ಭಾಗದಲ್ಲಿದ್ದ ತರಕಾರಿ ಚೆನ್ನಾಗಿ ಬೇಯುತ್ತದೆ. (ಬೇಕಾದಲ್ಲಿ ನೀವು ದೋಸೆ ಮೇಲೆ ಚಾಟ್ ಮಸಾಲ ಹಾಕಬಹುದು).