ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆರಂಭವಾಗಿ 10 ದಿನಗಳು ಕಳೆದಿದೆ. ಆದರೆ ಇನ್ನೂ 11 ದಿನ ಮನೆಯಲ್ಲಿಯೇ ಇರಬೇಕು. ಹೀಗಾಗಿ ಮನೆಯಲ್ಲಿರುವುದು ಸ್ವಲ್ಪ ಕಷ್ಟ. ಆದರೆ ಆರೋಗ್ಯದ ದೃಷ್ಟಿಯಿಂದ ಮನೆಯಲ್ಲಿಯೇ ಇರಬೇಕು. ಹೀಗಾಗಿ ಮನೆಯಲ್ಲಿ ಇದ್ದರೆ ಮಕ್ಕಳು ಯಾವಾಗಲೂ ಏನಾದರೂ ತಿನ್ನಲು ಕೊಡಿ ಎಂದು ಕೇಳುತ್ತಿರುತ್ತಾರೆ. ಆದ್ದರಿಂದ ಮನೆಯಲ್ಲಿಯೇ ಗೋಧಿ ಬಿಸ್ಕೆಟ್ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
1. ಗೋಧಿ ಹಿಟ್ಟು – 1/2 ಕಪ್
2. ಸಕ್ಕರೆ – ಸ್ವಲ್ಪ
3. ತುಪ್ಪ – 3 ಚಮಚ
4. ಎಣ್ಣೆ – ಕರಿಯಲು
5. ಎಳ್ಳು – ಸ್ವಲ್ಪ
Advertisement
Advertisement
ಮಾಡುವ ವಿಧಾನ
* ಮೊದಲು ಒಂದು ಮಿಕ್ಸಿಂಗ್ ಬೌಲ್‍ಗೆ ಗೋಧಿ ಹಿಟ್ಟು, ಸಕ್ಕರೆ (ಮಿಕ್ಸಿಯಲ್ಲಿ ಸಕ್ಕರೆಯನ್ನು ಪುಡಿ ಮಾಡಿಕೊಳ್ಳಿ), ತುಪ್ಪ, ಸೇರಿಸಿ ಮಿಕ್ಸ್ ಮಾಡಿ.
* ಈಗ ಸ್ವಲ್ಪ ಸ್ವಲ್ಪ ನೀರು ಸೇರಿಸಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
* ಬಳಿಕ 15-20 ನಿಮಿಷಗಳ ಕಾಲ ನೆನೆಯಲು ಬಿಡಿ.
* ಈಗ ಹಿಟ್ಟನ್ನು ದಪ್ಪವಾಗಿ ಲಟ್ಟಿಸಿ, ಬೇಕಾದ ಶೇಪ್‍ಗೆ ಕತ್ತರಿಸಿ.
* ನಂತರ ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ.
* ಕಾದ ಎಣ್ಣೆಗೆ ಕತ್ತರಿಸಿದ ಶೇಪ್‍ಗಳನ್ನು ಹಾಕಿ ಕರಿಯಿರಿ.
* ಗೋಲ್ಡನ್ ಬ್ರೌನ್ ಬರೋತನಕ ಫ್ರೈ ಮಾಡಿ.
* ನಂತರ ಅದನ್ನು ಒಂದು ಪ್ಲೇಟ್ ಹಾಕಿದರೆ ಗೋಧಿ ಬಿಸ್ಕೆಟ್ ಸವಿಯಲು ಸಿದ್ಧ.