ಕ್ಯಾಲಿಫೋರ್ನಿಯಾ: ವಾಟ್ಸಪ್ ಗ್ರೂಪ್ ನಲ್ಲಿರುವ ಸದಸ್ಯನೊಬ್ಬ ಸಮಾಜದ ಸಾಮರಸ್ಯ ಕೆಡಿಸುವ, ವೈಯಕ್ತಿಕವಾಗಿ ನಿಂದಿಸುವ ಮೆಸೇಜ್ ಕಳುಹಿಸಿದ್ರೆ ಗ್ರೂಪ್ ಅಡ್ಮಿನ್ ಗಳು ಜೈಲಿಗೆ ಹೋಗಿರುವುದನ್ನು ನೀವು ಕೇಳಿರಬಹುದು. ಆದರೆ ಈಗ ಗ್ರೂಪ್ ಅಡ್ಮಿನ್‍ಗಳಿಗೆ ಸುಪ್ರೀಂ ಪವರ್ ನೀಡುವ ವಿಶೇಷತೆಯನ್ನು ಸೇರಿಸಲು ವಾಟ್ಸಪ್ ಮುಂದಾಗಿದೆ.
ಹೌದು, ಫೇಸ್ ಬುಕ್ ಮಾಲೀಕತ್ವದ ವಾಟ್ಸಪ್ ನಲ್ಲಿ ಹೊಸ ಸೆಟ್ಟಿಂಗ್ಸ್ ‘ರಿಸ್ಟ್ರಿಕ್ಟೆಡ್ ಗ್ರೂಪ್ಸ್’ ನೀಡಲು ಮುಂದಾಗಿದೆ. ಈ ಹೊಸ ಸೆಟ್ಟಿಂಗ್ಸ್ ಆಯ್ಕೆ ಮಾಡಿದ್ರೆ ಆ ಗ್ರೂಪ್ ನಲ್ಲಿ ಅಡ್ಮಿನ್ ಬಿಟ್ಟು ಬೇರೆ ಸದಸ್ಯರು ಯಾವುದೇ ಮೆಸೇಜ್ ಕಳುಹಿಸಲು ಸಾಧ್ಯವಿಲ್ಲ.
Advertisement
ಒಂದು ವೇಳೆ ಈ ಆಯ್ಕೆ ಮಾಡಿದರೆ ಅಡ್ಮಿನ್ ಕಳುಹಿಸಿದ ಮೆಸೇಜ್ ಗಳನ್ನು ಮೆಂಬರ್ ಗಳು ವೀಕ್ಷಿಸಬಹುದೇ ವಿನಾಃ ಅದಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಸದಸ್ಯರು ಮೆಸೇಜ್ ಸೆಂಡ್ ಮಾಡಿದ್ರೂ ಅಡ್ಮಿನ್ ಅನುಮತಿ ಇಲ್ಲದೇ ಇದ್ದರೆ ಅದು ಯಾರಿಗೂ ಕಾಣಿಸುವುದಿಲ್ಲ.
Advertisement
ಈ ಸುದ್ದಿ ಅಡ್ಮಿನ್ ಗಳಿಗೂ ಸಂತೋಷವಾದರೂ ಈಗಲೇ ಈ ಸೇವೆ ಬಳಕೆ ಸಿಗುವುದಿಲ್ಲ. ವಾಟ್ಸಪ್ ಬೀಟಾ ಆವೃತ್ತಿಯನ್ನು ಬಳಸುತ್ತಿರುವ ಮಂದಿಗೆ ಈ ವಿಶೇಷತೆ ಮೊದಲು ಲಭ್ಯವಾಗಲಿದೆ. ಬಳಿಕ ಎಲ್ಲ ಬಳಕೆದಾರರಿಗೆ ಇದು ಲಭ್ಯವಾಗಲಿದೆ. (ಇದನ್ನೂ ಓದಿ: ಕರ್ನಾಟಕದಲ್ಲಿ ಫಸ್ಟ್: ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ವಾಟ್ಸಪ್ ಅಡ್ಮಿನ್ ಅರೆಸ್ಟ್ )
Advertisement
ಫೇಸ್ ಬುಕ್ ಗ್ರೂಪ್ ನಲ್ಲಿ ಈಗಾಗಲೇ ಈ ವಿಶೇಷತೆ ಇದೆ. ಅಡ್ಮಿನ್ ಗಳು ಅನುಮೋದನೆ ಕೊಟ್ಟರೆ ಮಾತ್ರ ಆ ಗ್ರೂಪಿನಲ್ಲಿ ಪೋಸ್ಟ್ ಪ್ರಕಟವಾಗುತ್ತದೆ.
Advertisement
ಕೆಲ ದಿನಗಳ ಹಿಂದೆ ವಾಟ್ಸಪ್ ಪಿಕ್ಚರ್ ಇನ್ ಪಿಕ್ಚರ್ (ಪಿಐಪಿ) ಮೋಡ್ ನೀಡಿತ್ತು. ಇದರಲ್ಲಿ ಬಳಕೆದಾರರಿಗೆ ವಾಟ್ಸಪ್ ನಲ್ಲಿ ಯೂ ಟ್ಯೂಬ್ ಲಿಂಕ್ ಬಂದಲ್ಲೇ ಪ್ರತ್ಯೇಕವಾಗಿ ಯೂಟ್ಯೂಬ್ ಆ್ಯಪ್/ ಬ್ರೌಸರ್ ನಲ್ಲಿ ಓಪನ್ ಆಗದೇ ಅಲ್ಲೇ ಪ್ಲೇ ಆಗುವ ವಿಶೇಷತೆಯನ್ನು ನೀಡಿತ್ತು. (ಇದನ್ನೂ ಓದಿ: ವಾಟ್ಸಪ್‍ನಲ್ಲಿ ಸ್ಮೈಲೀ ಕಳುಹಿಸಿದ್ರೆ ಬೀಳುತ್ತೆ ಕೇಸ್! )