ನವದೆಹಲಿ: ವಾಟ್ಸಪ್ ವಿಶ್ವದೆಲ್ಲಡೆ ಅತಿ ಹೆಚ್ಚು ಬಳಕೆಯಾಗುವ ಆ್ಯಪ್‍ಗಳಲ್ಲಿ ಒಂದಾಗಿದೆ. ವಾಟ್ಸಪ್ ಮೂಲಕ ವೈಯಕ್ತಿಕ ಅಥವಾ ಗ್ರೂಪ್ ಮುಖಾಂತರ ಸಂದೇಶ, ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳಬಹುದು. ಇತ್ತೀಚೆಗೆ ವಾಟ್ಸಪ್ ಮೂಲಕವೇ ಹಲವು ದಾಖಲೆಗಳನ್ನು ರವಾನಿಸಲಾಗುತ್ತಿದೆ. ಕೆಲವೊಮ್ಮೆ ವಾಟ್ಸಪ್ ನಲ್ಲಿ ಬರುವ ಲಿಂಕ್ ಅಥವಾ ಫೋಟೋಗಳನ್ನು ಸೇವ್ ಮಾಡಿಕೊಳ್ಳಲು ಇಚ್ಛಿಸುತ್ತೇವೆ. ಆದ್ರೆ ವಾಟ್ಸಪ್ ನಲ್ಲಿ ಈ ಸೌಲಭ್ಯವಿಲ್ಲ. ಸಣ್ಣದೊಂದು ಟ್ರಿಕ್ ಮೂಲಕ ನೀವು ನಿಮಗೆ ಇಷ್ಟವಾದ ಫೋಟೋ, ವಿಡಿಯೋ ಲಿಂಕ್ ಗಳನ್ನು ವಾಟ್ಸಪ್ ನಲ್ಲಿ ಸೇವ್ ಮಾಡಿಕೊಳ್ಳಬಹುದು.
Advertisement
ನಿಮ್ಮ ಫೋಟೋ, ವಿಡಿಯೋ ಅಥವಾ ರಹಸ್ಯ ಮಾಹಿತಿಗಳನ್ನು ವಾಟ್ಸಪ್ ನಲ್ಲಿ ಸೇವ್ ಮಾಡಿಕೊಳ್ಳಲು ನಿಮಗೆ ಒಂದು ನಿಮಿಷಕ್ಕಾಗಿ ಓರ್ವ ಗೆಳೆಯನ ಅವಶ್ಯಕತೆ ಇದೆ. ವಾಟ್ಸಪ್ ನಲ್ಲಿ ನಿಮ್ಮ ಸೀಕ್ರೆಟ್ ಗ್ರೂಪ್ ಕ್ರಿಯೇಟ್ ಮಾಡಿಕೊಳ್ಳಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ
Advertisement
1. ಮೊದಲಿಗೆ ಹೊಸ ಗ್ರೂಪ್ ಕ್ರಿಯೇಟ್ ಮಾಡಲು ವಾಟ್ಸಪ್ ಬಲ ಬದಿಯಲ್ಲಿರುವ ಮೂರು ಡಾಟ್ ಗಳ ಮೇಲೆ ಕ್ಲಿಕ್ ಮಾಡಿ, ನ್ಯೂ ಗ್ರೂಪ್ ಮೇಲೆ ಪ್ರೆಸ್ ಮಾಡಿ.
2. ನ್ಯೂ ಗ್ರೂಪ್ ಎಂದು ಕ್ಲಿಕ್ ಮಾಡಿದಾಗ, ನಿಮ್ಮ ಕಾಂಟೆಕ್ಸ್ ಲಿಸ್ಟ್ ಓಪನ್ ಆಗುತ್ತೆ. ನಿಮಗೆ ಬೇಕಾದ ಓರ್ವ ಗೆಳೆಯನನ್ನು ಸೆಲೆಕ್ಟ್ ಮಾಡಿ ಒಂದು ಹೆಸರನ್ನು ಇರಿಸಿ ಗ್ರೂಪ್ ಕ್ರಿಯೇಟ್ ಮಾಡಿಕೊಳ್ಳಿ.
Advertisement
Advertisement
3. ಈಗ ನೀವು ಕ್ರಿಯೆಟ್ ಮಾಡಿರುವ ಗ್ರೂಪ್‍ಗೆ ಹೋಗಿ. ಅಲ್ಲಿ ನಿಮಗೆ ಗ್ರೂಪ್ ಮಾಹಿತಿ ಲಭ್ಯವಾಗುತ್ತದೆ. ಅಲ್ಲಿ ನಿಮ್ಮ ಗೆಳೆಯನನ್ನು ರಿಮೂ ಮಾಡಿ.
4. ಈಗ ನೀವು ಕ್ರಿಯೆಟ್ ಮಾಡಿದ ಗ್ರೂಪಿನಲ್ಲಿ ಅಡ್ಮಿನ್ ಆಗಿ ಒಬ್ಬರೇ ಉಳಿಯುತ್ತಿರಿ.
5. ನಿಮಗೆ ಬಂದಿರುವ ಮೆಸೇಜ್ ಗಳನ್ನು ಹೊಸ ಗ್ರೂಪಿಗೆ ಫಾರ್ವಡ್ ಮಾಡಿಕೊಳ್ಳುವ ಮೂಲಕ ಸೇವ್ ಮಾಡಿಕೊಳ್ಳಬಹುದು.