ಚಿಕ್ಕೋಡಿ: ವಾಟ್ಸಪ್ ಸ್ಟೇಟಸ್, ಬ್ಯಾನರ್ ವಿಚಾರವಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ (Chikkodi) ಹೊಸಪೇಟೆ (Hospet) ಗಲ್ಲಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಟಿಪ್ಪು ಸುಲ್ತಾನ್ (Tipu Sultan) ಸೇರಿ ಇತರೆ ಮುಸ್ಲಿಂ ರಾಜರ ಅವಮಾನಿಸುವ ರೀತಿ ವಾಟ್ಸಪ್ ಸ್ಟೇಟಸ್ ಇಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಒಂದು ಸಮುದಾಯದ ಜನ ಜಮಾವಣೆಗೊಂಡು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆ ಅಖಂಡ ಭಾರತ ಹೆಸರಿನಡಿ “ಅಖಂಡ್ ಭಾರತ್ ಕಾ ಸಪ್ನಾ ಹೈ… ಅಫ್ಘಾನಿಸ್ತಾನ ತಕ್ ಹಮಾರಾ ಹೈ” ಎಂಬ ಬರಹದಡಿ ಬ್ಯಾನರ ಅಳವಡಿಸಲಾಗಿತ್ತು. ಇದನ್ನೂ ಓದಿ: ವಿಜಯೇಂದ್ರ ಆಯ್ಕೆ ‘ಹೊಸ ಬಾಟಲಿಗೆ ಹಳೆ ವೈನ್’ ಹಾಕಿದಂತೆ: ಡಿ.ಸುಧಾಕರ್
Advertisement
Advertisement
ತಕ್ಷಣ ಸ್ಥಳಕ್ಕೆ ಚಿಕ್ಕೋಡಿ ಡಿವೈಎಸ್‌ಪಿ ಸಿ.ಬಿ.ಗೌಡರ, ಸಿಪಿಐ, ಪಿಎಸ್ಐ ಭೇಟಿ ನೀಡಿ ವಿವಾದಿತ ಸ್ಟೇಟಸ್ ಇಟ್ಟ ಓರ್ವನ ವಶಕ್ಕೆ ಪಡೆದು ಪೊಲೀಸ್ ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಚಿಕ್ಕೋಡಿಯ ಹೊಸಪೇಟೆ ಗಲ್ಲಿಯಲ್ಲಿ 50 ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಭದ್ರತೆ ಕಲ್ಪಿಸಲಾಗಿದೆ.
Advertisement
ಅಖಂಡ ಭಾರತ ಹೆಸರಿನಡಿ ಭೂಪಟದ ಬ್ಯಾನರ್ ಅಳವಡಿಸಿದ ಸ್ಥಳದಲ್ಲೂ ಭದ್ರತೆ ಒದಗಿಸಲಾಗಿದೆ. ಗಡಿ ಭಾಗದಲ್ಲಿ ದೀಪಾವಳಿ ನಿಮಿತ್ತ ನಿರ್ಮಿಸುವ ಕೋಟೆ ಮಾದರಿ ಬಳಿ ಬ್ಯಾನರ್ ಅಳವಡಿಸಲಾಗಿದ್ದು, ಬ್ಯಾನರ್ ಅಳವಡಿಸಿದ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಮುಂದಾದ ಸಚಿವರನ್ನು ಗರ್ಭಗುಡಿ ಬಾಗಿಲಲ್ಲೇ ತಡೆದ ಮಹಿಳಾ ಕಾನ್ಸ್‌ಟೇಬಲ್
Advertisement
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರ ತೀವ್ರ ನಿಗಾ ವಹಿಸಿದ್ದು, ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.