ವಾಷಿಂಗ್ಟನ್: ಮೆಟಾ ಮಾಲೀಕತ್ವದ ವಾಟ್ಸಪ್ ವಿಶ್ವದಲ್ಲೇ ಅತೀ ಹೆಚ್ಚು ಜನರು ಬಳಕೆ ಮಾಡುತ್ತಿರುವ ಮೆಸೇಜಿಂಗ್ ಅಪ್ಲಿಕೇಶನ್. ಈ ಅಪ್ಲಿಕೇಶನ್ ಅನ್ನು ಕೇವಲ ಕುಟುಂಬ ಹಾಗೂ ಸ್ನೇಹಿತರನ್ನು ಸಂಪರ್ಕಿಸಲು ಅನುಕೂಲ ಮಾಡಿಕೊಡುವುದಲ್ಲದೇ ವ್ಯವಹಾರಗಳನ್ನು ನಡೆಸಲು ಬಳಸಲಾಗುತ್ತದೆ.
ವಾಟ್ಸಪ್ ಈಗಾಗಲೇ ಹಲವಾರು ಹೊಸ ಫೀಚರ್‌ಗಳನ್ನು ಜಾರಿಗೆ ತರುವ ಯೋಜನೆ ನಡೆಸಿದ್ದು, ಅದರಲ್ಲಿ ಕೆಲವು ಈಗಾಗಲೇ ಬೀಟಾ ಆವೃತ್ತಿಯಲ್ಲಿ ಪರೀಕ್ಷೆಗೆ ಒಳಗಾಗುತ್ತಿದೆ. ಈ ಎಲ್ಲಾ ಹೊಸ ಫೀಚರ್‌ಗಳು ಅತೀ ಶೀಘ್ರದಲ್ಲೇ ಅಂದರೆ 2022ರ ಸಾಲಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
Advertisement
ಕಮ್ಯುನಿಟಿ ಫೀಚರ್: ವೆಬಿಟೈನ್ಫೋ ವರದಿಯ ಪ್ರಕಾರ ವಾಟ್ಸಪ್ ಕಮ್ಯುನಿಟಿ ಫೀಚರ್ ಅನ್ನು ಶೀಘ್ರವೇ ಬಿಡುಗಡೆ ಮಾಡಲಿದೆ. ಈ ಫೀಚರ್‌ನಿಂದ ಬಳಕೆದಾರರು ಅಸ್ತಿತ್ವದಲ್ಲಿರುವ ಗುಂಪಿನೊಳಗೆ ಇನ್ನೊಂದು ಗುಂಪನ್ನು ರಚಿಸಲು ಸಾಧ್ಯವಾಗಲಿದೆ. ಈ ಉಪ ಗುಂಪಿನ ಚ್ಯಾಟ್‌ಗಳನ್ನೂ ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಮಾಡಲಾಗುತ್ತದೆ. ಇದನ್ನೂ ಓದಿ: ಐಟಂ ಸಾಂಗ್ ಕ್ಲಿಕ್ -‘ಪುಷ್ಪ’ದಲ್ಲಿ ಸಮಂತಾ ಫುಲ್ ಮಿಂಚಿಂಗ್
Advertisement
Advertisement
ಲಾಸ್ಟ್ ಸೀನ್ ಹಾಗೂ ಪ್ರೊಫೈಲ್ ಫೋಟೋ ಪ್ರೈವೆಸಿ:
ವಾಟ್ಸಪ್ ಲಾಸ್ಟ್ ಸೀನ್ ಹಾಗೂ ಪ್ರೊಫೈಲ್ ಫೋಟೋ ಪ್ರೈವೆಸಿ ಸೆಟ್ಟಿಂಗ್‌ಗಳ ಹೊಸ ಫೀಚರ್ ಬೀಟಾ ಆವೃತ್ತಿಯಲ್ಲಿ ಟೆಸ್ಟಿಂಗ್ ನಡೆಯುತ್ತಿದೆ. ಈ ಫೀಚರ್‌ನಿಂದ ಬಳಕೆದಾರರು ತಮ್ಮ ಕೊನೆಯ ವೀಕ್ಷಣೆ ಹಾಗೂ ಪ್ರೊಫೈಲ್ ಫೋಟೋಗಳನ್ನು ಆಯ್ದ ಸಂಪರ್ಕಗಳಿಗೆ ಮರೆ ಮಾಡಬಹುದು.
Advertisement
ಸಂದೇಶ ಅಳಿಸಲು ಸಮಯದ ಮಿತಿ:
ಸದ್ಯ ವಾಟ್ಸಪ್ ಬಳಕೆದಾರರು ತಾವು ಕಳುಹಿಸಿದ ಸಂದೇಶವನ್ನು ಎಲ್ಲರಿಗೂ ಅಳಿಸಲು 1 ಗಂಟೆ ಹಾಗೂ 8 ನಿಮಿಷಗಳ ಕಾಲಾವಕಾಶ ನೀಡುತ್ತಿತ್ತು. ಇದೀಗ ಕಂಪನಿ ಈ ಸಮಯದ ಮಿತಿಯನ್ನು 7 ದಿನ ಹಾಗೂ 8 ನಿಮಿಷಗಳ ವರೆಗೆ ಹೆಚ್ಚಿಸಿ, ಪರೀಕ್ಷೆ ನಡೆಸುತ್ತಿದೆ. ಇದನ್ನೂ ಓದಿ: ನಿಧಿ ಆಸೆಗೆ ದುಷ್ಕರ್ಮಿಗಳಿಂದ ಶ್ರೀ ಕೃಷ್ಣನ ದೇಗುಲ ಧ್ವಂಸ
ಮೆಸೇಜ್ ರಿಯಾಕ್ಷನ್:
ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರು ಕಳುಹಿಸಿದ ಯಾವುದೇ ಸಂದೇಶಗಳಿಗೂ ಇಮೋಜಿಯ ಪ್ರತಿಕ್ರಿಯೆ ನೀಡುವ ಫೀಚರ್ ಇದೆ. ಮುಂದೆ ಈ ಫೀಚರ್ ಅನ್ನು ವಾಟ್ಸಪ್‌ನಲ್ಲೂ ಬಿಲ್ಟ್ ಇನ್ ಆಗಿ ಕಾಣಬಹುದು.
ಫೋಟೋ ಎಡಿಟರ್:
ವಾಟ್ಸಪ್‌ನಲ್ಲಿ ಫೋಟೋ ಎಡಿಟಿಂಗ್ ಫೀಚರ್‌ಅನ್ನು ತರುವ ಬಗ್ಗೆ ಮೆಟಾ ಕಂಪನಿ ತಿಳಿಸಿತ್ತು. ಈ ಫೀಚರ್ ಮೊದಲಿಗೆ ವಾಟ್ಸಪ್ ವೆಬ್‌ನಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.