ಕ್ಯಾಲಿಫೋರ್ನಿಯಾ: ವಾಟ್ಸಪ್ ಗ್ರೂಪ್ ನಲ್ಲಿ ಕಿರಿ ಕಿರಿ ಉಂಟು ಮಾಡುವ ಸ್ನೇಹಿತರನ್ನು ಸೇರಿಸುವ ಗ್ರೂಪ್ ಅಡ್ಮಿನ್ ನನ್ನು ಇನ್ನು ಮುಂದೆ ಡಿಸ್‍ಮಿಸ್ ಮಾಡಬಹುದು.
ವಾಟ್ಸಪ್ ನಲ್ಲಿ ಇಲ್ಲಿಯವರೆಗೆ ಒಬ್ಬ ಅಡ್ಮಿನ್ ‘ರಿಮೂ’ ಮಾಡಿದ್ರೆ ಆ ಅಡ್ಮಿನ್ ಗ್ರೂಪ್ ನಿಂದಲೇ ಔಟ್ ಆಗುತ್ತಿದ್ದ. ಮತ್ತೆ ರಿಮೂ ಆಗಿದ್ದ ವ್ಯಕ್ತಿ ಮತ್ತೆ ಗ್ರೂಪ್ ಗೆ ಸೇರ್ಪಡೆಯಾಗಬೇಕಾದರೆ ಆ ವ್ಯಕ್ತಿಯನ್ನು ಅಡ್ಮಿನ್ ಗಳ ಪೈಕಿ ಒಬ್ಬರು ಸೇರಿಸಬೇಕಾಗುತಿತ್ತು.
Advertisement
ಇನ್ನು ಮುಂದೆ ಈ ಎರಡು ಪ್ರಕ್ರಿಯೆಗಳನ್ನು ಮಾಡುವ ಅಗತ್ಯವಿಲ್ಲ. ಅಡ್ಮಿನ್ ಡಿಸ್‍ಮಿಸ್ ಮಾಡಿದ್ರೆ ಆ ವ್ಯಕ್ತಿ ಅಡ್ಮಿನ್ ಆಗಿ ಮುಂದುವರಿಯುವುದಿಲ್ಲ. ಬದಲಾಗಿ ಆತ ಗ್ರೂಪ್ ನಲ್ಲಿರುವ ಸದಸ್ಯನಾಗಿ ಮುಂದುವರಿಯುತ್ತಾನೆ. ಆದರೆ ಈ ವಿಶೇಷತೆ ವಾಟ್ಸಪ್ ಎಲ್ಲ ಬಳಕೆದಾರರಿಗೆ ಸಿಗುವುದಿಲ್ಲ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ವಾಟ್ಸಪ್ ಬೀಟಾ ಆವೃತ್ತಿ ಬಳಸುತ್ತಿರುವ ಬಳಕೆದಾರರಿಗೆ ಈ ಸೇವೆ ಆರಂಭದಲ್ಲಿ ಸಿಗುತ್ತದೆ.
Advertisement
Advertisement
ಇದರ ಜೊತೆಯಲ್ಲೇ ಫೇಸ್ ಬುಕ್ ಮಾಲೀಕತ್ವದ ವಾಟ್ಸಪ್ ಹೊಸ ಸೆಟ್ಟಿಂಗ್ಸ್ `ರಿಸ್ಟ್ರಿಕ್ಟೆಡ್ ಗ್ರೂಪ್ಸ್’ ನೀಡಲು ಮುಂದಾಗಿದೆ. ಈ ಹೊಸ ಸೆಟ್ಟಿಂಗ್ಸ್ ಆಯ್ಕೆ ಮಾಡಿದ್ರೆ ಆ ಗ್ರೂಪ್ ನಲ್ಲಿ ಅಡ್ಮಿನ್ ಬಿಟ್ಟು ಬೇರೆ ಸದಸ್ಯರು ಯಾವುದೇ ಮೆಸೇಜ್ ಕಳುಹಿಸಲು ಸಾಧ್ಯವಿಲ್ಲ.
Advertisement
ಒಂದು ವೇಳೆ ಈ ಆಯ್ಕೆ ಮಾಡಿದರೆ ಅಡ್ಮಿನ್ ಕಳುಹಿಸಿದ ಮೆಸೇಜ್ ಗಳನ್ನು ಮೆಂಬರ್ ಗಳು ವೀಕ್ಷಿಸಬಹುದೇ ವಿನಾಃ ಅದಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಸದಸ್ಯರು ಮೆಸೇಜ್ ಸೆಂಡ್ ಮಾಡಿದ್ರೂ ಅಡ್ಮಿನ್ ಅನುಮತಿ ಇಲ್ಲದೇ ಇದ್ದರೆ ಅದು ಯಾರಿಗೂ ಕಾಣಿಸುವುದಿಲ್ಲ.