ನವದೆಹಲಿ: ವಾಟ್ಸಪ್ ಕಂಪನಿ ಆಗಸ್ಟ್ ತಿಂಗಳಿನಲ್ಲಿ 20 ಲಕ್ಷ ಭಾರತೀಯ ಫೋನ್ ನಂಬರ್ ಗಳನ್ನು ನಿಷೇಧಿಸಿದೆ.
ಮಂಗಳವಾರ ಬಿಡುಗಡೆ ಮಾಡಿದ ತನ್ನ ಇತ್ತೀಚಿನ ವರದಿಯಲ್ಲಿ, ಒಟ್ಟು 20,70,000 ಭಾರತೀಯ ಖಾತೆಗಳನ್ನು ನಿಷೇಧಿಸಿದೆ ಎಂದು ಹೇಳಿದೆ. ಭಾರತೀಯ ಖಾತೆಯನ್ನು +91 ಫೋನ್ ಸಂಖ್ಯೆಯ ಮೂಲಕ ಗುರುತಿಸಲಾಗಿದೆ ಎಂದು ವಾಟ್ಸಪ್ ತಿಳಿಸಿದೆ. ಇದನ್ನೂ ಓದಿ: ಆಪಲ್ ಉದ್ಯೋಗಿಗಳ ವಿರುದ್ಧ ಗರಂ – ಖಾರವಾದ ಪತ್ರ ಬರೆದು ಎಚ್ಚರಿಕೆ ನೀಡಿದ ಟಿಮ್ ಕುಕ್
Advertisement
Advertisement
ಮೇ 26 ರಂದು ಹೊಸ ಐಟಿ ನಿಯಮಗಳು ಜಾರಿಯಾದ ಬಳಿಕ 50 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಬಳಕೆದಾರರು ಇರುವ ಸಾಮಾಜಿಕ ಜಾಲತಾಣಗಳು ಮತ್ತು ಮೆಸೇಂಜಿಂಗ್ ಅಪ್ಲಿಕೇಶನ್ ಗಳು ಸರ್ಕಾರಕ್ಕೆ ವರದಿ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ.
Advertisement
ಎಷ್ಟು ದೂರುಗಳು ಬಂದಿದೆ? ದೂರಿಗೆ ಯಾವ ಕ್ರಮವನ್ನು ಕೈಗೊಳ್ಳಲಾಗಿದೆ ಈ ಎಲ್ಲ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಸುಳ್ಳು ಸುದ್ದಿ ಜೊತೆಗೆ ನಕಲಿ ವಿಡಿಯೋಗಳು ಹರಿದಾಡಿ ಘರ್ಷಣೆಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಕಠಿಣ ನಿಯಮ ಜಾರಿ ಮಾಡಿದೆ. ಇದನ್ನೂ ಓದಿ: ಎಲ್ಲ ಫೋನ್‍ಗಳಿಗೆ, ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಒಂದೇ ಚಾರ್ಜರ್