ನಟಿ, ಸಂಸದೆ ಸುಮಲತಾ ಅಂಬರೀಶ್ (Sumalatha Ambarish) ಅವರ ಗೆಲುವಿನಲ್ಲಿ ನಟ ದರ್ಶನ್ (Darshan) ಪಾತ್ರ ತುಂಬಾ ಇದೆ. ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಅವರ ಬೆನ್ನೆಲುಬಾಗಿ ನಿಂತರವರು ಯಶ್ ಮತ್ತು ದರ್ಶನ್. ಇದೀಗ ಮತ್ತೆ ಸುಮಲತಾ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಈ ಬಾರಿ ಸುಮಲತಾ ಅವರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂದೇ ನಂಬಲಾಗಿತ್ತು. ಆದರೆ, ಮಂಡ್ಯ (Mandya) ಕ್ಷೇತ್ರಕ್ಕೆ ಈ ಬಾರಿ ಹೆಚ್.ಡಿ. ಕುಮಾರಸ್ವಾಮಿಗೆ ಟಿಕೆಟ್ ಸಿಕ್ಕಿದೆ. ಹಾಗಾಗಿ ಸುಮಲತಾ ಅವರ ನಡೆಯ ಬಗ್ಗೆ ಇಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ದರ್ಶನ್ ಮಾತನಾಡಿದ್ದಾರೆ.
ಅಮ್ಮ ಯಾವತ್ತಿಗೂ ಅಮ್ಮನೆ. ಅವರು ಹಾಳು ಬಾವಿ ಬೀಳು ಅಂದರೆ ಬೀಳ್ತೀನಿ. ಅವರು ಏನೇ ನಿರ್ಧಾರ ತಗೆದುಕೊಂಡರೂ ನಾನು ಅವರ ಪರವಾಗಿ ನಿಲ್ಲುತ್ತೇನೆ ಎಂದು ಮತ್ತೆ ದರ್ಶನ್ ಹೇಳಿದ್ದಾರೆ. ಈ ಮೂಲಕ ಮತ್ತೆ ಸುಮಲತಾ ಅವರ ಬೆನ್ನಿಗೆ ನಿಂತಿದ್ದಾರೆ.