ಮುಂಬೈ: ಟೀಂ ಇಂಡಿಯಾದ ವೈಟ್ ಬಾಲ್ ಕ್ರಿಕೆಟ್‍ಗೆ ನೂತನ ನಾಯಕರಾಗಿ ರೋಹಿತ್ ಶರ್ಮಾರಿಗೆ ಪಟ್ಟಾಭಿಷೇಕವಾಗಿದೆ. ಜೊತೆಗೆ ಇದೀಗ ಹೊಸ ನಾಯಕನಿಗೆ ಬಿಸಿಸಿಐ ಕೊಡುವ ವಾರ್ಷಿಕ ವೇತನ ಎಷ್ಟು ಎಂಬುದು ಕೂಡ ರಿವೀಲ್ ಆಗಿದೆ.
Advertisement
ಏಕದಿನ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದರು. ಆದರೆ ಬಿಸಿಸಿಐ ದಿಢೀರ್ ಆಗಿ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾರನ್ನು ನಾಯಕನನ್ನಾಗಿ ನೇಮಿಸಿದೆ. ಜೊತೆಗೆ ನೂತನ ನಾಯಕನಿಗೆ ಕೊಡುವ ವೇತನದ ಬಗ್ಗೆಯ ಸ್ಪಷ್ಟಪಡಿಸಿದೆ. ನಾಯಕನಾದ ಬಳಿಕ ರೋಹಿತ್ ಶರ್ಮಾರಿಗೆ ಯಾವುದೇ ವೇತನ ಏರಿಕೆ ಕಂಡಿಲ್ಲ. ಅದೇ ರೀತಿ ನಾಯಕತ್ವದಿಂದ ಕೆಳಗಿಳಿದ ಕೊಹ್ಲಿಯ ವೇತನ ಕೂಡ ಕಡಿತಗೊಂಡಿಲ್ಲ. ಇದನ್ನೂ ಓದಿ: ನಾಯಕತ್ವದಿಂದ ಕೆಳಗಿಳಿಸಿ ಕೊಹ್ಲಿಗೆ ಧನ್ಯವಾದ ತಿಳಿಸಿದ ಬಿಸಿಸಿಐ
Advertisement
Advertisement
ಹೌದು ಇವರಿಬ್ಬರೂ ಕೂಡ ಬಿಸಿಸಿಐ ವೇತನ ಶ್ರೇಣಿಯಲ್ಲಿ A+ ದರ್ಜೆಯಲ್ಲಿ ಇದ್ದರು. A+ ದರ್ಜೆಯಲ್ಲಿ ವರ್ಷಕ್ಕೆ 7 ಕೋಟಿ ರೂ. ಪಡೆಯುತ್ತಾರೆ. ಇದೀಗ ನೂತನವಾಗಿ ನಾಯಕನಾದರೂ ಕೂಡ ರೋಹಿತ್ ವೇತನದಲ್ಲಿ ಬದಲಾವಣೆ ಕಂಡಿಲ್ಲ. ಅಲ್ಲದೆ ನಾಯಕತ್ವದಿಂದ ಕೆಲಗಿಳಿದಿರುವ ಕೊಹ್ಲಿ ವೇತನದಲ್ಲಿ ಕೂಡ ಯಾವುದೇ ವ್ಯತ್ಯಾಸ ಆಗಿಲ್ಲ. ಟೀಂ ಇಂಡಿಯಾದ ವೇತನ ಶ್ರೇಣಿಯಲ್ಲಿ ಮೂರು ಮಂದಿ ಆಟಗಾರರು A+ ಶ್ರೇಣಿಯನ್ನು ಹೊಂದಿದ್ದಾರೆ. ಕೊಹ್ಲಿ, ರೋಹಿತ್ ಜೊತೆಗೆ ವೇಗಿ ಜಸ್ಪ್ರೀತ್ ಬುಮ್ರಾ ಕೂಡ A+ ಶ್ರೇಣಿ ಅಂದರೆ ವಾರ್ಷಿಕವಾಗಿ 7 ಕೋಟಿ ಸಂಭಾವನೆ ಪಡೆಯುತ್ತಾರೆ. ಇದನ್ನೂ ಓದಿ: ಏಕದಿನ ನಾಯಕತ್ವ ಬಿಟ್ಟುಕೊಡಲು ಒಪ್ಪದ ಕೊಹ್ಲಿ – ಬಲವಂತವಾಗಿ ಕೆಳಗಿಳಿಸಿದ ಬಿಸಿಸಿಐ?
Advertisement