ಗಿಲ್ಲಿ ನಟ (Gilli Nata) ಇಂದು ಕರುನಾಡೇ ಮೆಚ್ಚುವಂತೆ ಬೆಳೆದು ನಿಂತಿದ್ದಾನೆ. ಬಿಗ್‌ಬಾಸ್ ಸೀಸನ್-12 ಕ್ಕೆ (BBK 12) ಒಬ್ಬ ಸ್ಪರ್ಧಿಯಾಗಿ ಆಗಮಿಸಿದ ಹಳ್ಳಿಹೈದ ತನ್ನದೇ ಮ್ಯಾನರಿಸಂನಿಂದ ಈ ಬಾರಿ ಬಿಗ್‌ಬಾಸ್ ಕ್ರೇಜ್ ಹೆಚ್ಚಿಸಿದ್ದಲ್ಲದೇ ದೊಡ್ಡ ಮಟ್ಟದ ಗೆಲುವು ಪಡೆದುಕೊಂಡಿದ್ದಾರೆ. ತನ್ನಂತೆ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟ 24 ಸ್ಪರ್ಧಿಗಳನ್ನ ಮುಲಾಜಿಲ್ಲದೇ ಹಿಮ್ಮೆಟ್ಟಿಸಿ ಬಿಗ್‌ಬಾಸ್ ಕಿರೀಟವನ್ನ ತಮ್ಮದಾಗಿಸಿಕೊಂಡಿದ್ದಾರೆ.
ಇನ್ನೂ ಮನೆಯೊಳಗೆ ಇದ್ದಾಗಿನಿಂದಲೂ ಗಿಲ್ಲಿ ಮತ್ತು ಕಾವ್ಯ (Kavya Shaiva) ಅವರ ನಡುವಿನ ಸ್ನೇಹದ ಬಗ್ಗೆ ಹಲವು ಚರ್ಚೆಗಳು ನಡೆದಿತ್ತು. ಮನೆಯಿಂದ ಹೊರಬರ್ತಿದ್ದಂತೆ ಗಿಲ್ಲಿ – ಕಾವ್ಯ ಶೈವ ಅವರ ಮದ್ವೆ ಮಾತು ಜೋರಾಗಿದೆ. ಅಭಿಮಾನಿಗಳಂತೂ ಗಿಲ್ಲಿ – ಕಾವ್ಯ ಕಟೌಟ್‌ಗೆ ಹಾಲಿನ ಅಭಿಷೇಕವನ್ನೂ ಮಾಡ್ತಿದ್ದಾರೆ. ಇನ್ನೂ ಕೆಲವರು ಮದ್ವೆ ಮಾಡಿಸಿಯೇ ತೀರುತ್ತೇವೆ ಎಂದು ಹೇಳ್ತಿದ್ದಾರೆ. ಈ ಬಗ್ಗೆ ಖುದ್ದು ಗಿಲ್ಲಿ ನಟರಾಜ್ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಬಂದಿರೋ 50 ಲಕ್ಷದಲ್ಲಿ ಜಮೀನು ತಗೊಂಡು ವ್ಯವಸಾಯ ಮಾಡ್ತೀನಿ: ಬಿಗ್ ಬಾಸ್ ವಿನ್ನರ್ ಗಿಲ್ಲಿ ಫಸ್ಟ್ ರಿಯಾಕ್ಷನ್
ನಾನು ಕಾವ್ಯಾ ಒಳ್ಳೇ ಸ್ನೇಹಿತರು ಸ್ನೇಹಿತರಾಗೇ ಇರ್ತೀವಿ ಅಂದಿದ್ದಾರೆ. ಇನ್ನೂ ಗಿಲ್ಲಿ ಮನಸು ಕದ್ದ ಹುಡುಗಿ ಯಾರು? ಅನ್ನೋ ಪ್ರಶ್ನೆಗೆ ಟೈಂ ಬರಲಿ ಹೇಳ್ತೀನಿ, ಮದ್ವೆ ಆದ್ರೆ ಸೆಟಲ್ ಆಗ್ತೀನಿ ಅನ್ನೋದೆಲ್ಲ ಸುಳ್ಳು ಅಂತ ಹೇಳಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಸೀಸನ್ 12 ಗೆದ್ದ ಗಿಲ್ಲಿ – ಇಂದು ಮಳವಳ್ಳಿಯಿಂದ ಹುಟ್ಟೂರು ದಡದಪುರಕ್ಕೆ ಅದ್ದೂರಿ ಮೆರವಣಿಗೆ
ಅಲ್ಲದೇ ಕಾವ್ಯನ್ನ ಫೈನಲ್‌ವರೆಗೂ ಕರ್ಕೊಂಡ್ ಹೋಗ್ತೀನಿ ಅಂತ ಹೇಳಿದ ಬಗ್ಗೆ ಮಾತನಾಡಿ, ಕಾವ್ಯ ಕೂಡ ಚೆನ್ನಾಗಿ ಆಡಿದ್ದಕ್ಕೆ ಫಿನಾಲೆ ವರೆಗೂ ಕರ್ಕೊಂಡ್ ಬಂದ್ರು, ನಾನ್ನಿಂದ ಅಲ್ಲ. ನಾನ್ ಹೇಳಿದ್ದು ಕೊನೆಯಲ್ಲಿ ಸಿಂಕ್ ಆಯ್ತು ಅಷ್ಟೇ. ಮುಂದಿನ ಯಾವುದೇ ಸಿನಿಮಾಗಳು ಬಂದಿಲ್ಲ, ಬಂದಮೇಲೆ ನೋಡ್ತೀನಿ, ಜನ ಇಲ್ಲಿಯವರೆಗೂ ಪ್ರೀತಿ ತೋರ್ಸಿದ್ದಾರೆ ಅಷ್ಟೇ ಸಾಕು ಅಂತ ಗಿಲ್ಲಿ ನಟ ಹೇಳಿಕೊಂಡಿದ್ದಾರೆ.
ಗಿಲ್ಲಿ ಕಾವ್ಯ ಸಂಬಂಧ ಹೇಗಿತ್ತು?
ಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮ ಆರಂಭದಿಂದಲೂ ಗಿಲ್ಲಿ ಮತ್ತು ಕಾವ್ಯ ಅವರ ನಡುವೆ ಉತ್ತಮ ಸ್ನೇಹ ಇದೆ. ಇಬ್ಬರೂ ಸ್ಪರ್ಧಿಗಳು ಮನೆಯೊಳಗೆ ಬಂದಾಗಿನಿಂದಲೂ ಒಬ್ಬರೊಂದಿಗೆ ಒಬ್ಬರು ಚೆನ್ನಾಗಿ ಬೆರೆತಿದ್ದರು. ಆದರೆ ಕೆಲವೊಮ್ಮೆ ಸಣ್ಣಪುಟ್ಟ ಜಗಳಗಳು ಸಹ ಆಗಿವೆ. ಉದಾಹರಣೆಗೆ, ಗಿಲ್ಲಿ ಅವರು ಕಾವ್ಯ ಅವರನ್ನು ಕೆಲವು ಬಾರಿ ಇರಿಟೇಟ್ ಮಾಡಿದ್ದರು. ಅದರಿಂದ ಕಾವ್ಯ ಗಿಲ್ಲಿಯನ್ನು ನಾಮಿನೇಟ್ ಮಾಡಿದ ಸಂದರ್ಭಗಳೂ ಇವೆ. ಆದರೂ ಅವರ ಸ್ನೇಹ ಮುರಿದಿರಲಿಲ್ಲ. ಮನೆಯೊಳಗಿನ ಜೀವನದಲ್ಲಿ ಇಂತಹ ಏರಿಳಿತಗಳು ಸಹಜವಾಗಿತ್ತು. ಕಾವ್ಯ ಹೊರಗೆ ಹೋದ್ಮೇಲೆ ನಿನ್ನನ್ನ ಬ್ಲ್ಯಾಕ್ ಮಾಡ್ತೀನಿ ಅಂತಲೂ ಹೇಳಿದ್ದರು. ಇದನ್ನೂ ಓದಿ: ಭಾರತದಲ್ಲಿ ಆಡದಿದ್ದರೆ ವಿಶ್ವಕಪ್ ಟೂರ್ನಿಯಿಂದಲೇ ಹೊರದಬ್ಬುತ್ತೇವೆ – ಬಾಂಗ್ಲಾಗೆ ಐಸಿಸಿ ಲಾಸ್ಟ್ ವಾರ್ನಿಂಗ್

