ನವದೆಹಲಿ: ಪಿಡಿಪಿ ಮೈತ್ರಿಯಿಂದ ಹಿಂದೆ ಸರಿದ ಬಿಜೆಪಿಯ ನಿರ್ಧಾರದಿಂದ ಜಮ್ಮು ಕಾಶ್ಮೀರದಲ್ಲಿ ಮುಂದೆ ಏನಾಗುತ್ತದೆ ಎನ್ನುವ ಕುತೂಹಲ ಹೆಚ್ಚಾಗುತ್ತಿದೆ.
2014ರ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗದ ಕಾರಣ ಪಿಡಿಪಿ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿಕೊಂಡಿದ್ದವು. ಕಳೆದ ಮೂರು ವರ್ಷಗಳಲ್ಲಿ ಆದ ರಾಜಕೀಯ ಬದಲಾವಣೆಗಳಿಂದಾಗಿ ಇಂದು ಬಿಜೆಪಿ ದಿಢೀರನೆ ಬೆಂಬಲ ವಾಪಸ್ ತೆಗೆದುಕೊಂಡ ಪರಿಣಾಮ ಮೆಹಬೂಬ ಮುಫ್ತಿ ನೇತೃತ್ವದ ಸರ್ಕಾರ ಪತನಗೊಂಡಿದೆ.
Advertisement
Mehbooba Mufti resigned as the Chief Minister of Jammu and Kashmir, after the Bharatiya Janata Party pulled out of the alliance with the People's Democratic Party in the state
Read @ANI Story | https://t.co/RHL79vMFN9 pic.twitter.com/PZRXmiyt79
— ANI Digital (@ani_digital) June 19, 2018
Advertisement
ಮುಂದಿನ ರಾಜಕೀಯ ನಡೆ ಏನಾಗಬಹುದು?
2014ರ ಚುನಾವಣೆಯಲ್ಲಿ ಪಿಡಿಪಿ 28, ಬಿಜೆಪಿ25, ಎನ್‍ಸಿ(ನ್ಯಾಷನಲ್ ಕಾನ್ಫರೆನ್ಸ್ ಕಾಂಗ್ರೆಸ್)15, ಕಾಂಗ್ರೆಸ್12 ಹಾಗೂ ಇತರೆ 7 ಸ್ಥಾನಗಳನ್ನು ಗಳಿಸಿದ್ದವು. ಬಹುಮತ ಸಾಬೀತಿಗೆ ಸರ್ಕಾರಕ್ಕೆ ಕನಿಷ್ಟ 44 ಸ್ಥಾನ ಬೆಂಬಲ ಅಗತ್ಯ.
Advertisement
1. ಪಿಡಿಪಿಯು ತನ್ನಲ್ಲಿರುವ ಶಾಸಕರ ಜೊತೆ ಎನ್‍ಸಿ ಹಾಗೂ ಕಾಂಗ್ರೆಸ್‍ನ ಜೊತೆ ಸೇರಿ ಸರ್ಕಾರ ರಚಿಸಬಹುದು.
Advertisement
2. ಕಾಂಗ್ರೆಸ್ ಹೊರತು ಪಡಿಸಿ ಎನ್‍ಸಿ ಹಾಗೂ ಇತರೆ ಪಕ್ಷಗಳ ಅಭ್ಯರ್ಥಿಗಳ ಜೊತೆ ಪಿಡಿಪಿ ಸರ್ಕಾರ ರಚನೆಗೆ ಮುಂದಾಗಬಹುದು.
3. ವಿಶ್ವಾಸಮತಯಾಚನೆ ವೇಳೆ ಎನ್‍ಸಿ, ಕಾಂಗ್ರೆಸ್ ಹಾಗೂ ಇತರೆ ಪಕ್ಷದವರು ಗೈರಾಗುವಂತೆ ನೋಡಿಕೊಳ್ಳಬಹುದು. ಒಂದು ವೇಳೆ ಈ ಪಕ್ಷಗಳು ಗೈರಾದರೆ ಬಹುಮತಕ್ಕೆ ಬೇಕಾಗಿರುವ ಸಂಖ್ಯೆ ಕಡಿಮೆಯಾಗುತ್ತದೆ. ಒಂದು ಬಾರಿ ವಿಶ್ವಾಸಮತ ಯಾಚನೆಯಲ್ಲಿ ಸರ್ಕಾರ ಪಾಸ್ ಆದರೆ 6 ತಿಂಗಳ ಕಾಲ ರಾಜ್ಯವನ್ನು ಅಳಬಹುದು.
4. ಯಾವುದೇ ಪಕ್ಷಗಳು ಪಿಡಿಪಿಯೊಂದಿಗೆ ಕೈಜೋಡಿಸಲು ಮುಂದೆ ಬಾರದೇ ಇದ್ದಾಗ ಅನಿವಾರ್ಯವಾಗಿ ಕಣಿವೆ ರಾಜ್ಯದಲ್ಲಿ ರಾಜ್ಯಪಾಲ ಆಳ್ವಿಕೆ ನಿರ್ಮಾಣವಾಗುತ್ತದೆ.
The Congress Party rejected any possibility of stitching an alliance with the People's Democratic Party in Jammu and Kashmir.
Read @ANI Story | https://t.co/NY25CciQHj pic.twitter.com/bNttOsliV2
— ANI Digital (@ani_digital) June 19, 2018
ಕಾಂಗ್ರೆಸ್ ಬೆಂಬಲ ಕೊಡಲ್ಲ:
ಕಾಂಗ್ರೆಸ್ ನ ಮುಖಂಡರಾದ ಗುಲಾಂ ನಬಿ ಆಜಾದ್‍ರವರು, ಈಗಾಗಲೇ ಬಿಜೆಪಿ ಪಿಡಿಪಿಯ ಜೊತೆ ಸೇರಿಕೊಂಡು ದೊಡ್ಡ ತಪ್ಪು ಎಸಗಿದೆ. ಇಂತಹ ಪಕ್ಷದೊಂದಿಗೆ ಪುನಃ ತಪ್ಪು ಮಾಡಲು ಕಾಂಗ್ರೆಸ್ ಸಿದ್ದವಿಲ್ಲ. ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರಗಳು ಕೋಮುಗಲಭೆಯನ್ನು ಹತ್ತಿಕ್ಕಲು ವಿಫಲವಾಗಿವೆ. ಜಮ್ಮು ಕಾಶ್ಮೀರದಲ್ಲಿ ನಮ್ಮ ಆಡಳಿತದಲ್ಲಿದ್ದಾಗ ಯಾವುದೇ ಕೊಮುಗಲಭೆಗಳು ಸೃಷ್ಟಿಯಾಗಿರಲಿಲ್ಲ. ಆದ್ದರಿಂದ ನಾವು ಯಾವುದೇ ಕಾರಣಕ್ಕೂ ಪಿಡಿಪಿ ಜೊತೆ ಕೈ ಜೋಡಿಸುವುದಿಲ್ಲ ಹೇಳಿಕೆ ನೀಡಿದ್ದಾರೆ.