ಬೆಂಗಳೂರು: ವಿಜಯೇಂದ್ರಗೆ ಏನು ಸಮಸ್ಯೆ? ಇದು ಮುಸ್ಲಿಂ ಓಲೈಕೆ ಹೇಗಾಗುತ್ತದೆ ಎಂದು ಶಾಸಕ ರಿಜ್ವಾನ್ ಅರ್ಷದ್ ಬಿಜೆಪಿ ರಾಜ್ಯಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು ಬಿವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ನಿಮಗೇನು ಸಮಸ್ಯೆ? ಇದು ಓಲೈಕೆ ಹೇಗಾಗುತ್ತದೆ. ಅಲ್ಪಸಂಖ್ಯಾತರು ಈ ಸಮಾಜದಲ್ಲಿ ಬದುಕ್ತಿಲ್ಲವಾ? ನಾವು ಮುಖ್ಯ ವಾಹಿನಿಗೆ ಬರೋದು ಬೇಡ್ವಾ? ಎಂದು ಖಾರವಾಗಿ ಪ್ರಶ್ನಿಸಿದರು.ಇದನ್ನೂ ಓದಿ: ಕುಂಭಮೇಳ: ಯುಪಿಯ ಮೂರು ಹೆದ್ದಾರಿಗಳಲ್ಲಿ 40 ಲಕ್ಷ ದಾಖಲೆಯ ವಾಹನಗಳ ಸಂಚಾರ
ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದು ನಮ್ಮ ಪಕ್ಷ. ಎಸ್ಸಿ, ಎಸ್ಟಿ ಮತ್ತು ಹಿಂದುಳಿದವರಿಗೆ ಮೀಸಲಾತಿ ಕೊಟ್ಟಿದ್ದೀವಿ. ಅಲ್ಪಸಂಖ್ಯಾತ, ಸಣ್ಣ ಗುತ್ತಿಗೆದಾರರಿಗೆ ಮೀಸಲಾತಿ ಕೊಡಿ ಎಂದು ಕೇಳಿದ್ದೆವು. ಸರ್ಕಾರ ಕೊಟ್ಟರೆ ಸ್ವಾಗತ ಮಾಡುತ್ತೇವೆ. ಇದು 1 ಕೋಟಿ ರೂ.ವರೆಗಿನ ಗುತ್ತಿಗೆ ಮಾತ್ರ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಮಾತನಾಡಿದ್ದ ಬಿವೈ ವಿಜಯೇಂದ್ರ, ಕಾಂಗ್ರೆಸ್‌ನವರ ಯೋಗ್ಯತೆಗೆ ಕಳೆದ 20 ತಿಂಗಳಿಂದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿಲ್ಲ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದಾರೆ. ಆದರೆ ಎಲ್ಲಿಯಾದರೂ ಕೆಲಸದ ಟೆಂಡರ್ ಕರೆದಿದ್ದಾರಾ? ಶಾಸಕರಿಗೆ ಅನುದಾನ ಕೊಡುವ ಯೋಗ್ಯತೆ ಇಲ್ಲ, ಆದರೆ ಸರ್ಕಾರಿ ಗುತ್ತಿಗೆಯಲ್ಲಿ 4% ಮುಸ್ಲಿಂ ಮೀಸಲಾತಿ ನೀಡಲು ಹೊರಟಿದ್ದಾರೆ, ಬೇರೆಯವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರು ಎಂದರೆ ಮುಸ್ಲಿಮರು ಮಾತ್ರವೇ ಎಂದು ಕಿಡಿಕಾರಿದರು.
ಸಿಎಂ ನೀವೂ ಅಹಿಂದಾ ನಾಯಕರೇ ಆಗಿದ್ರೆ, ಸಮುದಾಯಕ್ಕೆ ಆರ್ಥಿಕ ಶಕ್ತಿ ನೀಡಲು ಪ್ರೋತ್ಸಾಹ ನೀಡಬೇಕಿತ್ತು. ಸವಿತಾ ಸಮಾಜ, ಗುಡಿಕೈಗಾರಿಕೆಗೆ ಆರ್ಥಿಕ ಬೆಂಬಲ ನೀಡಬೇಕಿತ್ತು. ಅದರ ಹೊರತಾಗಿ ಈಗ ಮುಸ್ಲಿಮರಿಗೆ ಕೊಡಲು ಹೊರಟಿದ್ದಾರೆ. ಇವರಿಗೆ ಜನರೇ ಉತ್ತರ ಕೊಡಬೇಕು. ಇವರು ಬಂಡರಿದ್ದಾರೆ, ದಪ್ಪ ಚರ್ಮದವರು. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡ್ತೀವಿ, ಹೋರಾಟ ಮಾಡ್ತೀವಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ಸಾಧುಕೋಕಿಲ ನನ್ನನ್ನು ಆಹ್ವಾನಿಸಿಲ್ಲ, ಮಾತು ಸರಿಯಾಗಿ ಆಡಲ್ಲ: ಟೆನ್ನಿಸ್ ಕೃಷ್ಣ