‘ಪುಷ್ಪʼ ಪಾರ್ಟ್‌ 2ನಲ್ಲಿ ಶ್ರೀವಲ್ಲಿ ಸಾವು- ರಶ್ಮಿಕಾ ಫೋಟೋ ವೈರಲ್

Public TV
1 Min Read
rashmika mandanna 5

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ‘ಪುಷ್ಪʼ ಸಿನಿಮಾದಲ್ಲಿ ಶ್ರೀವಲ್ಲಿ ಆಗಿ ಸಕ್ಸಸ್ ಕಂಡಿದ್ದಾರೆ. ಚಿತ್ರದ ಪಾರ್ಟ್ 2ನಲ್ಲಿ ಅವರು ಶ್ರೀವಲ್ಲಿ ಕೊಲೆಯಾಗುತ್ತದೆ. ರಶ್ಮಿಕಾ ರೋಲ್ ಅಂತ್ಯ ಕಾಣುತ್ತೆ ಎಂದು ಹೇಳಲಾಗಿತ್ತು. ಆ ಸುದ್ದಿಗೆ ಇದೀಗ ಸಾಕ್ಷಿಯೊಂದು ಸಿಕ್ಕಿದೆ.  ಶ್ರೀವಲ್ಲಿ ಪಾತ್ರ ಸಾವಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

RASHMIKA MANDANNA 3

ಕಳೆದ ವರ್ಷ ಪುಷ್ಪರಾಜ್- ಶ್ರೀವಲ್ಲಿ ಮಾಡಿದ ಜೋಡಿ ಅಷ್ಟೀಷ್ಟಲ್ಲ. ಪುಷ್ಪ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡುವ ಮೂಲಕ ಹೊಸ ದಾಖಲೆ ಬರೆದಿತ್ತು. ಪುಷ್ಪ 2ಗಾಗಿ (Pushpa 2) ಕಾಯ್ತಿರೋ ಅಭಿಮಾನಿಗಳಿಗೆ ಈಗ ಶಾಕಿಂಗ್ ನ್ಯೂಸ್‌ವೊಂದು ಸಿಕ್ಕಿದೆ. ಇದನ್ನೂ ಓದಿ:‘ಕಡ್ಡಿಪುಡಿ’ ಚಂದ್ರು ವಿರುದ್ಧ ಠಾಣೆ ಮೆಟ್ಟಿಲೇರಿದ ‘ರೊಮಿಯೋ’ ಖ್ಯಾತಿಯ ಪಿಸಿ ಶೇಖರ್

rashmika mandanna

ಕೆಲವು ದಿನಗಳಿಂದ ‘ಪುಷ್ಪ 2’ ಸಿನಿಮಾದ ರಶ್ಮಿಕಾ ಪಾತ್ರ ಶ್ರೀವಲ್ಲಿ ಬಗ್ಗೆ ಸುದ್ದಿಯೊಂದು ಓಡಾಡುತ್ತಿದೆ. ಈ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರದ ಕೊಲೆಯಾಗುತ್ತೆ. ಈ ಮೂಲಕ ರಶ್ಮಿಕಾ ಪಾತ್ರ ಕೊನೆಯಾಗುತ್ತೆ ಎಂದೆಲ್ಲಾ ಸುದ್ದಿ ಹರಿದಾಡಿತ್ತು. ಈ ವಿಷಯಕ್ಕೆ ಸಾಕ್ಷಿ ಎಂಬಂತೆ ಈಗ ಫೋಟೊವೊಂದು ವೈರಲ್ ಆಗಿದೆ. ರಶ್ಮಿಕಾ ನಟಿಸಿದ ಶ್ರೀವಲ್ಲಿ (Srivalli) ಪಾತ್ರ ಸಾವನ್ನಪ್ಪಿದ ಫೋಟೋ ಎಲ್ಲೆಡೆ ಸದ್ದು ಮಾಡ್ತಿದೆ. ಈ ಬಗ್ಗೆ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ವೈರಲ್ ಆದ ಫೋಟೋ ಅಸಲಿಯೇ?

ಸೋಶಿಯಲ್ ಮೀಡಿಯಾದಲ್ಲಿ ‘ಪುಷ್ಪ 2’ ಸಿನಿಮಾದೇ ಎನ್ನಲಾದ ವೈರಲ್ ಫೋಟೊ ಬಗ್ಗೆ ಚರ್ಚೆ ಆರಂಭ ಆಗಿದೆ. ಜನರು ಕೂಡ ಈ ಫೋಟೊ ನೋಡಿ ‘ಪುಷ್ಪ 2’ ಶ್ರೀವಲ್ಲಿ ಪಾತ್ರ ಕೊನೆಗೊಳ್ಳುತ್ತೆ. ಶ್ರೀವಲ್ಲಿಯನ್ನು ಯಾರೋ ಸಾಯಿಸುತ್ತಾರೆ ಅನ್ನೋದನ್ನೇ ನಂಬಿದ್ದಾರೆ. ಎಲ್ಲದ್ದಕ್ಕೂ ಪುಷ್ಪ 2 ರಿಲೀಸ್ ಬಳಿಕ ಉತ್ತರ ಸಿಗಲಿದೆ.

Share This Article