ಚಿಕ್ಕಬಳ್ಳಾಪುರ: ಆರ್‌ಎಸ್‌ಎಸ್, ಬಿಜೆಪಿಯವರೇ ಈ ದೇಶಕ್ಕೆ ನಿಮ್ಮ ಕೊಡುಗೆ ಏನು? ಕಾಂಗ್ರೆಸ್‍ನವರ ಕೊಡುಗೆ ಏನು ಎಂಬುದರ ಬಗ್ಗೆ ಚರ್ಚಿಸಲು ನಾವು ಸಿದ್ದ. ತಾಕತ್ತಿದ್ದರೆ ಚರ್ಚೆಗೆ ಬನ್ನಿ ಎಂದು ಚಿಕ್ಕಬಳ್ಳಾಪುರದಲ್ಲಿ ವಿಧಾನಪರಿಷತ್ ಸದಸ್ಯ ಉಗ್ರಪ್ಪ ಸವಾಲು ಹಾಕಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಈ ದೇಶದ ಪರಂಪರೆ ಸ್ವಾತಂತ್ರದ ಆಶಯಗಳು ಗೊತ್ತಿಲ್ಲ. ಸಮಾಜ, ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ನಡೆ ಬಿಜೆಪಿಯದ್ದು. ಹೀಗಾಗಿ ನಿಮ್ಮ ಹಳೆಯ ಯೂನಿಫಾರಂ ಚಡ್ಡಿಯನ್ನು ಸಾಂಕೇತಿಕವಾಗಿ ಸುಟ್ಟರೇ ನಿಮಗೆ ಏನು ಸಮಸ್ಯೆ ಎಂದು ಪ್ರಶ್ನಿಸಿದ್ದಾರೆ. ಇದನ್ನು ಓದಿ : ಸಿಎಂ ಇಬ್ರಾಹಿಂಗೆ ಮಾನ ಮರ್ಯಾದೆ ಇಲ್ಲ: ಸಿದ್ದರಾಮಯ್ಯ
ಆರ್‌ಎಸ್‌ಎಸ್ ಬಿಜೆಪಿಯವರೇ ಈ ದೇಶಕ್ಕೆ ನಿಮ್ಮ ಕೊಡುಗೆ ಏನು? ಕಾಂಗ್ರೆಸ್‍ನವರ ಕೊಡುಗೆ ಏನು ಎಂಬುದರ ಬಗ್ಗೆ ಚರ್ಚೆ ನಡೆಸಲು ನಾವು ಸಿದ್ದರಾಗಿದ್ದೇವೆ. ನೀವು ಚರ್ಚೆ ನಡೆಸಲು ತಯಾರಿದ್ದರೆ ಬನ್ನಿ ವಿಧಾನಸೌಧದ ಮುಂದೆ ಡೇಟ್ ಟೈಂ ಫಿಕ್ಸ್ ಮಾಡಿ. ಅದನ್ನು ಬಿಟ್ಟು ಹುಳುಕುಗಳನ್ನು ಮುಚ್ಚಿಕೊಳ್ಳಲು ಭಾವನಾತ್ಮಕ ವಿಚಾರಗಳನ್ನು ತೆಗೆಯಬೇಡಿ. ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರವೃತ್ತಿ ಮುಂದುವರೆಸಬೇಡಿ ಎಂದಿದ್ದಾರೆ.
ಮೋದಿ ಆಧುನಿಕ ದುರ್ಯೋಧನ ಸರ್ವಾಧಿಕಾರಿ. ಇಂತಹ ಮೋದಿ, ಬಿಜೆಪಿ, ಆರ್‌ಎಸ್‌ಎಸ್‌ನವರಿಗೆ ಜನ ಪಾಠ ಕಲಿಸುವ ದಿನಗಳು ದೂರ ಇಲ್ಲ. ಈಗಾಲಾದರೂ ಬಹುತ್ವದ ಕಡೆಗೆ ಬದಲಾಗಲು ಪ್ರಯತ್ನ ಮಾಡಿದರೆ ಓಳ್ಳೆಯದು ಎಂದು ಹೇಳಿದ್ದಾರೆ. ಇದನ್ನು ಓದಿ : ಪಿಎಸ್‍ಐ ಹಗರಣ – ಆರೋಪಿ ದರ್ಶನ್ ಗೌಡ ಅರೆಸ್ಟ್